ಕಲ್ಲುಗುಂಡಿ: ಬಾಚಿಗದ್ದೆಯಲ್ಲಿ ನೆರೆನೀರು ಆವೃತಗೊಂಡಿದ್ದ ಮನೆ ಕುಸಿತ

0

ಸ್ಥಳಕ್ಕೆ ಸಚಿವ ಎಸ್. ಅಂಗಾರ ಹಾಗೂ ತಹಶಿಲ್ದಾರ್ ಕು. ಅನಿತಾಲಕ್ಷ್ಮಿ ಭೇಟಿ – ಪರಿಶೀಲನೆ

ಹತ್ತು ಸಾವಿರ ರೂ. ತಕ್ಷಣ ಪರಿಹಾರ ವಿತರಣೆ

ಕಲ್ಲುಗುಂಡಿಯ ಒತ್ತೆಕೋಲ ಗದ್ದೆಯ ಬಳಿಯಲ್ಲಿರುವ ದೇವಕಿ ಬಾಚಿಗದ್ದೆ ಎಂಬವರ ಮನೆಯು ಆ.2ರಂದು ರಾತ್ರಿ ಪಯಸ್ವಿನಿ ನದಿ ಉಕ್ಕಿದ ಕಾರಣದದಿಂದ ನೆರೆನೀರು ಆವೃತ್ತಗೊಂಡಿತ್ತು. ಈ ಮನೆಯು ಆ.3ರಂದು ರಾತ್ರಿ ಕುಸಿದು ಬಿದ್ದಿರುವವುದಾಗಿ ತಿಳಿದುಬಂದಿದೆ.

ಆ.1ರಂದು ರಾತ್ರಿ ಕಲ್ಲುಗುಂಡಿ ಪರಿಸರದಲ್ಲಿ ಪಯಸ್ವಿನಿ ನದಿಯು ಉಕ್ಕಿ ಹರಿದ ಕಾರಣದಿಂದಾಗಿ ಒತ್ತೆಕೋಲ ಗದ್ದೆಯ ಬಳಿಯಿರುವ ದೇವಕಿ ಬಾಚಿಗದ್ದೆ ಹಾಗೂ ಕಮಲ ಬಾಚಿಗದ್ದೆ ಎಂಬವರ ಮನೆಯನ್ನು ನೆರೆನೀರು ಆವರಿಸಿಕೊಂಡಿತ್ತು.
ಈ ಸಂದರ್ಭದಲ್ಲಿ ದೇವಕಿ ಅವರ ಮಗ ಸುಧಾಕರ ಅವರು ಎರಡೂ ಮನೆಯವರನ್ನು ಕಲ್ಲುಗುಂಡಿಯ ಮುಖ್ಯ ರಸ್ತೆಯ ಬಳಿಗೆ ಕರೆದೊಯ್ದು ರಾತ್ರಿಯಿಂದ ಬೆಳಗ್ಗಿನ ತನಕ ರಸ್ತೆ ಬದಿಯಲ್ಲೇ ಕಳೆದಿದ್ದರು.
ಸ್ಥಳಕ್ಕೆ ಆ.2ರಂದು ಸಂಜೆ ಸಚಿವ ಎಸ್. ಅಂಗಾರ , ತಹಶಿಲ್ದಾರ್ ಕು. ಅನಿತಾಲಕ್ಷ್ಮಿ ಭೇಟಿ ನೀಡಿ ಪರಿಶೀಲನೆ ನಡೆಸಿ, ತಕ್ಷಣ ರೂ.10 ಸಾವಿರದ ಪರಿಹಾರದ ವ್ಯವಸ್ಥೆ ಮಾಡಿದ್ದರು. ಆದರೆ ಆ.3ರಂದು ರಾತ್ರಿ ಮನೆಯ ಮೇಲ್ಛಾವಣಿಯು ಸಂಪೂರ್ಣವಾಗಿ ಕುಸಿದುಬಿದ್ದಿದ್ದು, ಸದ್ಯ ದೇವಕಿ ಅವರ ಕುಟುಂಬ ದಂಡಕಜೆಯ ಅವರ ಸಂಬಂಧಿಕರ ಮನೆಯಲ್ಲಿ ವಾಸ್ತವ್ಯ ಹೂಡಿರುವುದಾಗಿ ತಿಳಿದುಬಂದಿದೆ.