ಅರಂತೋಡು: ಎನ್ಎಸ್ಎಸ್ ಪುನಶ್ಚೇತನ ತರಬೇತಿ ಕಾರ್ಯಕ್ರಮ

0

 

 

ನೆಹರು ಸ್ಮಾರಕ ಪದವಿಪೂರ್ವ ಕಾಲೇಜು ಅರಂತೋಡು ಇಲ್ಲಿನ ಎನ್ಎಸ್ಎಸ್ ಘಟಕದ ಸ್ವಯಂಸೇವಕ ವಿದ್ಯಾರ್ಥಿಗಳಿಗೆ ಪುನಶ್ಚೇತನ ತರಬೇತಿ ಕಾರ್ಯಕ್ರಮ ನಡೆಯಿತು.

 

ನಿಟಕಪೂರ್ವಾ ಕಾರ್ಯಕ್ರಮಾಧಿಕಾರಿ ಶ್ರೀ ಮೋಹನ್ ಚಂದ್ರ ಪುನಶ್ಚೇತನ ತರಬೇತಿ ಕಾರ್ಯಕ್ರಮ ನಡೆಸಿ, ಮಾತನಾಡಿ ಬಲಿಷ್ಠ ಭಾರತದ ನಿರ್ಮಾಣದಲ್ಲಿ ಯುವಜನತೆಯ ಪಾತ್ರ ಮುಖ್ಯವಾಗಿದೆ.ಈ ಯುವಜನತೆಯ ವ್ಯಕ್ತಿತ್ವ ನಿರ್ಮಾಣದಲ್ಲಿ ವಿದ್ಯಾರ್ಥಿ ದೆಸೆಯಿಂದಲೇ ಎನ್ಎಸ್ಎಸ್ ಅವಕಾಶ ಕಲ್ಪಿಸುತ್ತದೆ.ಇದರ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಸಕ್ರಿಯವಾಗಿ ಭಾಗವಹಿಸಬೇಕೆಂದರು.

ತರಬೇತಿಯ ಸಭೆಯ ಅಧ್ಯಕ್ಷತೆಯನ್ನು ಕಾಲೇಜಿನ ಹಿರಿಯ ಭೌತಶಾಸ್ತ್ರ ಉಪನ್ಯಾಸಕ ಶ್ರೀ ಸುರೇಶ್ ವಾಗ್ಲೆ ವಹಿಸಿ, ಮಾತನಾಡಿ ಮಹಾತ್ಮಗಾಂಧೀಜಿ ಕಂಡ ಭವ್ಯ ಭಾರತ ನಿರ್ಮಾಣದ ಕನಸುಗಳನ್ನು ನನಸು ಮಾಡಲು ಎನ್ಎಸ್ಎಸ್ ಶ್ರಮಿಸುತ್ತಿದೆ. ವಿದ್ಯಾರ್ಥಿಗಳು ಪಠ್ಯ ದೊಂದಿಗೆ ಎನ್ಎಸ್ಎಸ್ ನಲ್ಲಿ ಕ್ರಿಯಾಶೀಲ ಸ್ವಯಂ ಸೇವಕರಾಗಿ ತೊಡಗಿಸಿಕೊಳ್ಳಲು ಕರೆ ನೀಡಿದರು. ಸಹಕಾರ್ಯಕ್ರಮಾಧಿಕಾರಿ ಶ್ರೀ ಲಿಂಗಪ್ಪ ಸ್ವಾಗತಿಸಿ, ಕಾರ್ಯಕ್ರಮಾಧಿಕಾರಿ ಶ್ರೀ ಗೌರಿಶಂಕರ ವಂದಿಸಿದರು.ಶ್ರೀ ಪದ್ಮಕುಮಾರ್ ಕಾರ್ಯಕ್ರಮ ನಿರೂಪಿಸಿದರು.ಶ್ರೀಮತಿ ಭಾಗ್ಯಶ್ರೀ, ಶ್ರೀಮತಿ ನಂದಿನಿ,ಕುಮಾರಿ ನಯನಾ ಸಹಕರಿಸಿದರು.