ನಾಲ್ಕೂರು : ಮಳೆಗೆ ಅಲ್ಲಲ್ಲಿ ಹಾನಿ

0

 

ವಿಪತ್ತು ನಿರ್ವಹಣಾ ಘಟಕದವರಿಂದ ಸಹಾಯಹಸ್ತ

ಮಳೆ ಹಾನಿಗೆ ನಾಲ್ಕೂರು ಗ್ರಾಮದ ಹಲವು ಕಡೆ ಮನೆ, ಸೇತುವೆ ಡ್ಯಾಮೇಜ್ ಆಗಿದ್ದು ಶೌರ್ಯ ಶ್ರೀ ವಿಪತ್ತು ನಿರ್ವಹಣಾ ಘಟಕದವರು ಮತ್ತು ಸ್ಥಳೀಯರು ಸೇರಿ ತಾತ್ಕಾಲಿಕ ದುರಸ್ತಿಗೆ ಸಹಾಯ ನೀಡಿ ಆಸರೆಯಾದರು.


ರಘುನಾಥ ಮರಕತ ಅವರ ಮನೆ ಹಿಂಬದಿ ಬರೆ ಜರಿದು ಮನೆಗೆ ಹಾನಿ ಸಂಭವಿಸಿದೆ. ಗೀತಾ ಬಣ್ಕೋಡಿ ಅವರ ಮನೆ ಸಂಪೂರ್ಣ ಕುಸಿದು ಬಿದ್ದಿದ್ದ ಸಂಬಂಧಿಕರ ಮನೆಗೆ ತೆರಳಿದ್ದರಿಂದ ತೊಂದರೆ ಉಂಟಾಗಿಲ್ಲ. ದಾಖಲೆಗಳು ನಾಶವಾಗಿದೆ. ವಿಪತ್ತು ನಿರ್ವಹಣಾ ಘಟಕದ ಅವರು ಅಲ್ಲಿನ ವಸ್ತುಗಳನ್ನು ತೆರವುಗೊಳಿಸಿ ಸಹಕರಿಸಿದರು. ಹರೀಶ್ ಚಾರ್ಮತ ಅವರ ಮನೆ ಕೂಡ ಸಂಪೂರ್ಣ ಜಖಂ ಆಗಿದ್ದು ಸಂಭಾವ್ಯ ಅಪಾಯ ಅಂದಾಜು ಮಾಡಿ ಬೇರೆ ಮನೆಗೆ ಶಿಫ್ಟ್ ಆಗಿದ್ದರು. ಮನೆ ಸ್ವತ್ತುಗಳನ್ನು ತೆರೆವು ಮಾಡಿ ಹೊರತೆಗೆದು ಸಹಕರಿಸಲಾಯಿತು.

 

ವಾಸುದೇವ ಚಾರ್ಮತ ಮತ್ತು ಎನ್ ಎಸ್ ನಾಗಪ್ಪ ಗೌಡ ಮನೆಗೆ ಬಳಿ ಬರೆ ಜರಿದು ಮನೆಗೆ ಹಾನಿಯಾಗಿತ್ತು ಅದನ್ನು ದುರಸ್ತಿಗೊಳಿಸಲಾಯಿತು. ಕಾರ್ಜ ಸೇತುವೆಯಲ್ಲಿದ್ದ ಮರ ತೆರವು ಮಾಡಲಾಯಿತು. ನಡುಗಲ್ಲು ಬಳಿ ರಾಜ್ಯ ಹೆದ್ದಾರಿ ಕುಸಿತವಾದಲ್ಲಿ ಮರಗಳನ್ನು ತೆರವು ಮಾಡಲಾಯಿತು. ಮರಕತ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ತೀರ್ಥಮಂಟಪದವರೆಗೆ ನೀರು ಆವರಿಸಿದ್ದು ಮರುದಿನ ಕೆಸರು ತೆರವು ಮಾಡಿದ್ದು ಸಾರ್ವಜನಿಕರು ಸಹಕರಿಸಿದರು.