ಡಾ. ಪ್ರಶಾಂತಿ ಶಶಿಕಾಂತ್ ರವರಿಗೆ ಟೈಮ್ ಟು ಗ್ರೋ ಎಜ್ಯುಕೇಶನ್ ಸಮಿಟ್ ನಲ್ಲಿ ಅತ್ಯುತ್ತಮ ಪ್ರಾಂಶುಪಾಲೆ ಪ್ರಶಸ್ತಿ

0

 

 

ಶಿಕ್ಷಣ ಕ್ಷೇತ್ರದ ಸೇವಾ ಮಾರ್ಗದಲ್ಲಿ ತಮ್ಮ ಸಾಧನೆ ಹೆಜ್ಜೆ ಗುರುತುಗಳನ್ನು ಮೂಡಿಸುತ್ತಿರುವ ಪ್ರಾಂಶುಪಾಲೆ ಡಾ. ಪ್ರಶಾಂತಿ ಶಶಿಕಾಂತ್ ರವರು ಟೈಮ್ ಟು ಗ್ರೋ ಎಜುಕೇಶನ್ ಸಮಿಟ್ ನಲ್ಲಿ ಅತ್ಯುತ್ತಮ ಪ್ರಾಂಶುಪಾಲರು ಪ್ರಶಸ್ತಿಯನ್ನು ಪಡೆದಿದ್ದಾರೆ.


ಉಬರಡ್ಕ ಮಿತ್ತೂರಿನ ಬಿ. ರಾಘವ ರಾವ್ ಮತ್ತು ನಾಗವೇಣಿ ದಂಪತಿಗಳ ಪುತ್ರಿಯಾದ ಇವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಉಬರಡ್ಕಮಿತ್ತೂರು ಹಾಗೂ ಪ್ರೌಢ ಶಿಕ್ಷಣವನ್ನು ಶಾರದ ವಿದ್ಯಾಲಯ ಹಾಗೂ ಎನ್ ಎಂ ಸಿ ಕಾಲೇಜಿನಲ್ಲಿ ತಮ್ಮ ಕಾಲೇಜು ಶಿಕ್ಷಣವನ್ನು ಪೂರೈಸಿದ್ದಾರೆ. ಪ್ರಸ್ತುತ ಬೆಂಗಳೂರಿನ ಝೆನ್ ಇಂಟರ್ನ್ಯಾಷನಲ್ ಶಾಲೆಯಲ್ಲಿ ಪ್ರಾಂಶುಪಾಲರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಎಲ್ ರಾಕ್ ಮತ್ತು ಎಜುಕೇಶನ್ ಟುಡೆ ಸಂಸ್ಥೆಗಳಿಂದ ಪ್ರಶಸ್ತಿಗಳನ್ನು ಪಡೆದಿರುತ್ತಾರೆ. ಇವರು ತಾವು ಕಾರ್ಯನಿರ್ವಹಿಸುತ್ತಿರುವ ಸಂಸ್ಥೆಯ ಜೊತೆಗೆ ಹೈಬ್ರಿಡ್ ವಿದ್ಯಾ ಮತ್ತು ವಿದ್ಯಾ ವಿನ್ ಗಳಿಗೆ ಸಹ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯನಿರ್ವಹಿಸಿದ್ದು ವರ್ಚುಯಲ್ ತರಗತಿಗಳನ್ನು ಸಹ ತೆಗೆದುಕೊಂಡಿದ್ದಾರೆ.
ಇವರ ತಂದೆ ಸಹ ಉಬರಡ್ಕ ಮಿತ್ತೂರಿನ ಕೃಷಿ ಪತ್ತಿಯ ಸಹಕಾರಿ ಬ್ಯಾಂಕಿನಲ್ಲಿ ಸಹಾಯಕ ಮುಖ್ಯಕಾರ್ಯನಿರ್ವಹಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದು, ನಿವೃತ್ತಿಯ ನಂತರ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ.