ಆ.15 ರಂದು ಗುತ್ತಿಗಾರು ಅಮರ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟದಿಂದ ಸ್ವಾತಂತ್ರ್ಯೋತ್ಸವ

0

ಸ್ವಾತಂತ್ರ್ಯ ಅಮೃತ ನಡಿಗೆ, ಮಹಿಳೆಯರಿಗೆ ಸನ್ಮಾನ

ಅಮರ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ
ಗುತ್ತಿಗಾರು ಇದರ ಆಶ್ರಯದಲ್ಲಿ ಗ್ರಾಮ ಪಂಚಾಯತ್‌ ಸಹಕಾರದಲ್ಲಿ
೭೫ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ನಡೆಯಲಿದೆ. ಗುತ್ತಿಗಾರು ಗ್ರಾ.ಪಂ ನಲ್ಲಿ ಧ್ವಜಾರೋಹಣ ಬಳಿಕ ಅಮರ ಸಂಜೀವಿನಿ ಗ್ರಾಮ ಸಮಿತಿ ವತಿಯಿಂದ ಸ್ವಾತಂತ್ರ್ಯ ನಡಿಗೆ ಹಾಗೂ ವೃತ್ತಿ ಸಾಧಕರ ಸನ್ಮಾನ ನಡೆಯಲಿದೆ.

ಪಂಚಾಯತ್ ಬಳಿಯಿಂದ ಸ್ವಾತಂತ್ರ್ಯ ನಡಿಗೆ ಆರಂಭವಾಗಿ ಮೇಲಿನ ಪೇಟೆಗೆ ಸಾಗಿ ಮತ್ತೆ ಪಂಚಾಯತ್ ಬಳಿ ಬಂದು ಸಾಧನೆಗೈದ ಮಹಿಳೆಯರನ್ನು ಗುರುತಿಸಿ ಸನ್ಮಾನಿಸುವ ಕಾರ್ಯಕ್ರಮ ನಡೆಯಲಿದೆ.

ದೇಶದ ವಿವಿಧ ಭಾಗಗಳಲ್ಲಿ ವೀರ ಮಹಿಳೆಯಾಗಿ ಸುದೀರ್ಘ ಸೇವೆ ಸಲ್ಲಿಸಿ ಸ್ವಯಂ ನಿವೃತ್ತಿ ಗೊಂಡ ಶ್ರೀಮತಿ ಅನಿತಾ ಮಹೇಶ್,
ಗ್ರಾಮೀಣ ಪುನರ್ವಸತಿ ಕಾರ್ಯಕರ್ತೆಯಾಗಿ ವಿಕಲಚೇತನರ ಮಾಹಿತಿಯನ್ನು ಹಳ್ಳಿ ಹಳ್ಳಿಯಿಂದ ಸಂಗ್ರಹಿಸಿ ಸದ್ರಿ ಗ್ರಾಮ ಪಂಚಾಯತ್‌ ಗುತ್ತಿಗಾರಿನಲ್ಲಿ ಸೇವೆ ಸಲ್ಲಿಸುತ್ತಿರುವ ಶ್ರೀಮತಿ ಕಾವೇರಿ ಭರತ್,
ಗ್ರಾಮೀಣ ಪರಿಸರದ ಹಲವಾರು ಮಹಿಳೆಯರಿಗೆ ಟೈಲರಿಂಗ್‌ ತರಭೇತಿ ನೀಡಿ ಅವರ ಬಾಳಿಗೆ ದಾರಿದೀಪವಾಗಿರುವ ಶ್ರೀಮತಿ ನೆಬಿಸಾ ಕೆ, ಗ್ರಾಮೀಣ ಪರಿಸರದಲ್ಲಿ ಕಬ್ಬಿಣದ ಕಠಿಣ ಕೆಲಸ ಮಾಡಿ ಕಮ್ಮಾರಿಕೆ ವೃತ್ತಿಯನ್ನುಜೀವನೋಪಾಯಕ್ಕೆ ಅನುಸರಿಸಿ ಕಠಿಣ ವೃತ್ತಿ ಮಹಿಳೆಯಾಗಿ ನಿಭಾಯಿಸುತ್ತಿರುವಿರುವ ಶ್ರೀಮತಿ ಲೀಲಾವತಿ,
ಗುತ್ತಿಗಾರಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಡಿ ಗ್ರೂಪ್ ನೌಕರರಾಗಿ ಸೇವೆಸಲ್ಲಿಸುತ್ತಿದ್ದು, ಅಸೌಖ್ಯದ ವ್ಯಕ್ತಿಗಳು ಬಂದಾಗ ಅವರ ಸೇವೆಯನ್ನು ಪರಿಪೂರ್ಣವಾಗಿ ಮಾಡುತ್ತಿರುವ ಮಾದರಿ ಶ್ರೀಮತಿ ಪ್ರೇಮ, ಗುತ್ತಿಗಾರಿನ ಘನ ತ್ಯಾಜ್ಯ ಘಟಕದ ನಿರ್ವಹಣೆ ಮಾಡುತ್ತ ಗುತ್ತಿಗಾರು ಪೇಟೆಯನ್ನು ಸ್ವಚ್ಚಗೊಳಿಸು ಕಾರ್ಯದಲ್ಲಿ ತಮ್ಮ ಸೇವೆಯನ್ನು ನೀಡುತ್ತಿರುವ ಶ್ರೀಮತಿ ಪ್ರೇಮ, ಶ್ರೀಮತಿ ರತ್ನಾವತಿ, ಶ್ರೀಮತಿ ವಸಂತಿ ಅವರುಗಳಿಗೆ ಸನ್ಮಾನ ನಡೆಯಲಿದೆ ಎಂದು ತಿಳಿದು ಬಂದಿದೆ.