ಪಂಜ: ಪ್ರಕೃತಿ ವಿಕೋಪಕ್ಕೆ ಬಲಿಯಾದ ಮಕ್ಕಳ ಮನೆಗೆ ಸಂಸದ ನಳಿನ್ ಕುಮಾರ್ ಕಟೀಲ್ ಭೇಟಿ – ಕುಟುಂಬಕ್ಕೆ ಸಾಂತ್ವನ

0

ಸುಬ್ರಹ್ಮಣ್ಯದ ಪರ್ವತಮುಖಿ ಎಂಬಲ್ಲಿ ಪ್ರಕೃತಿ ವಿಕೋಪಕ್ಕೆ ಸಿಲುಕಿ ಮನೆಯೊಂದು ನೆಲಕಚ್ಚಿ ಮನೆಯೊಳಗಿದ್ದ ಪಂಜದ ಕರಿಮಜಲು ಕುಸುಮಾಧರ ಮತ್ತು ಶ್ರೀಮತಿ ರೂಪಾಶ್ರೀ ದಂಪತಿಗಳ ಮಕ್ಕಳಾದ 5ನೇ ತರಗತಿ ವಿದ್ಯಾರ್ಥಿನಿ ಶೃತಿ (11ವ) ಮತ್ತು 1ನೇ ತರಗತಿ ವಿದ್ಯಾರ್ಥಿನಿ ಗಾನಶ್ರೀ ( 7ವ)ಮೃತ ಪಟ್ಟಿದ್ದರು.
ಆ.13 ರಂದು ಮೃತರ ಪಂಜದ ಕರಿಮಜಲು ನಿವಾಸಕ್ಕೆ ಸಂಸದ, ಬಾ.ಜ.ಪಾ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಭೇಟಿ ನೀಡಿ ಮನೆಯವರಿಗೆ ಸಾಂತ್ವನ ಹೇಳಿದರು. ಬಳಿಕ ವೈಯಕ್ತಿಕ ಧನ ಸಹಾಯ ನೀಡಿದರು. ಈ ವೇಳೆ ಪಂಜ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಪೂರ್ಣಿಮಾ ದೇರಾಜೆ, ಬಾ.ಜ.ಪಾ ಜಿಲ್ಲಾ ಮಾಜಿ ಉಪಾಧ್ಯಕ್ಷ ಜಗದೀಶ್ ಅಧಿಕಾರಿ, ಬಾ.ಜ.ಪ ಸುಳ್ಯ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ, ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ವೆಂಕಟ್ ದಂಬೆಕೋಡಿ, ಅರಣ್ಯ ನಿಗಮದ ಮಾಜಿ ಅಧ್ಯಕ್ಷ ಎಸ್ ಎನ್ ಮನ್ಮಥ, ಮಂಗಳೂರು ಮೀನುಗಾರಿಕಾ ನಿಗಮದ ಅಧ್ಯಕ್ಷ ಎ.ವಿ. ತೀರ್ಥಾರಾಮ , ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಕುಳ, ಉಪಾಧ್ಯಕ್ಷ ಲಿಗೋಧರ ಆಚಾರ್ಯ, ಶಿವರಾಮಯ್ಯ ಕರ್ಮಜೆ, ಗ್ರಾಮ ಪಂಚಾಯತ್ ಸದಸ್ಯರಾದ ನಾರಾಯಣ ಕೃಷ್ಣನಗರ, ಚಂದ್ರಶೇಖರ ದೇರಾಜೆ ತೋಟ, ಜಗದೀಶ್ ಪುರಿಯ, ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರಾದ ಚಿನ್ನಪ್ಪ ಚೊಟ್ಟೆಮಜಲು,ವಾಚಣ್ಣ ಕೆರೆಮೂಲೆ, ಗಣೇಶ್ ಪೈ ,ಪಂಜ ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕ ಸತೀಶ್ ಬೊಳ್ಳಾಜೆ, ಮೊನ್ನಪ್ಪ ಗೌಡ ಬೊಳ್ಳಾಜೆ, ಸುಬ್ರಾಯ ಭಟ್ ಅಲಕಾ, ನಿತ್ಯಾನಂದ ಮೇಲ್ಮನೆ, ಗೌತಮ್ ಬೊಳ್ಳಾಜೆ, ಲೋಕಯ್ಯ ಗೌಡ ಅಳ್ಪೆ, ಜಯರಾಮ ಕಲ್ಲಾಜೆ, ಮೋನಪ್ಪ ಕೆಬ್ಲಾಡಿ, ಚಂದ್ರಶೇಖರ ಮೇಲ್ಫಾಡಿ, ರಾಜೇಶ್ ಪಲ್ಲೋಡಿ ,ಭರತ್ ರಾಮತೋಟ, ಕುಸುಮಾಧರ ಕರಿಮಜಲು , ಚಂದ್ರಶೇಖರ ಕರಿಮಜಲು , ಮನೆಯ ಯಜಮಾನ ಬೊಮ್ಮಣ್ಣ ಗೌಡ ಕರಿಮಜಲು , ಶ್ರೀಮತಿ ದೇವಕಿ, ಪದ್ಮನಾಭ ಕರಿಮಜಲು, ಕುಟುಂಬಸ್ಥರು , ಮೊದಲಾದವರು ಉಪಸ್ಥಿತರಿದ್ದರು.ಭೇಟಿ ಮುನ್ನ ಪಂಜದಲ್ಲಿ ವಿವಿಧ ಬೇಡಿಕೆಗಳ ಮನವಿಗಳನ್ನು ಸ್ವೀಕರಿಸಿದರು.

ಘಟನೆ ವಿವರ:ಪಂಜದ ಕರಿಮಜಲು ಕುಸುಮಾಧರ ಮತ್ತು ಶ್ರೀಮತಿ ರೂಪಶ್ರೀ ದಂಪತಿಗಳು ಮಕ್ಕಳೊಂದಿಗೆ ಸುಬ್ರಹ್ಮಣ್ಯದ ಪರ್ವತಮುಖಿಯಲ್ಲಿ ಮನೆ ಮಾಡಿ ವಾಸವಾಗಿದ್ದು. ಕುಸುಮಾಧರರು ಅಲ್ಲೇ ಪಕ್ಕದಲ್ಲಿ ಅನೇಕ ವರ್ಷಗಳಿಂದ ಅಂಗಡಿ ನಡೆಸುತ್ತಿದ್ದಾರೆ.
ಆ.೧ರಂದು ಪ್ರಕೃತಿ ವಿಕೋಪದಿಂದ ಅವರ ಮನೆಯ ಮೇಲೆ ಗುಡ್ಡ ಕುಸಿತ ಗೊಂಡು ಮನೆಯೊಳಗೆ ಇದ್ದ ದಂಪತಿಗಳ ಮಕ್ಕಳಾದ ಶೃತಿ ಮತ್ತು ಗಾನಶ್ರೀ ದಾರುಣವಾಗಿ ಮೃತಪಟ್ಟಿದ್ದಾರೆ. ಇದೇ ವೇಳೆ ಮನೆಯೊಳಗಿದ್ದ ಶ್ರೀಮತಿ ರೂಪಾಶ್ರೀ ರವರ ತಾಯಿ ಶ್ರೀಮತಿ ಅಮ್ಮಣಿಯವರನ್ನು ರಕ್ಷಿಸಲಾಗಿದ್ದು , ಗುಡ್ಡ ಮತ್ತಷ್ಟು ಕುಸಿವಾದರಿಂದ ಮಕ್ಕಳನ್ನು ಉಳಿಸಲು ಅಸಾಧ್ಯವಾಯಿತು.