ಕೆವಿಜಿ ಡೆಂಟಲ್ ಕಾಲೇಜಿನಲ್ಲಿ ಬಾಯಿ ಸ್ವಚ್ಛತಾ ದಿನಾಚರಣೆ

0

ಕೆ.ವಿ.ಜಿ ದಂತ ಮಹಾವಿದ್ಯಾಲಯದ ಪೆರಿಯೋಡೊಂಟೊಲೊಜಿ ವಸಡು ವಿಭಾಗದಿಂದ ಆಗಸ್ಟ್ 1ರಂದು ಬಾಯಿ ಸ್ವಚ್ಚತಾ ದಿನದಆಚರಣೆ ನಡೆಯಿತು.
ಈ ಆಚರಣೆಯ ಅಂಗವಾಗಿ ಸುಳ್ಯ ತಾಲೂಕಿನ ವಿವಿಧಕಾಲೇಜು ವಿದ್ಯಾರ್ಥಿಗಳಿಗೆ ಹಲವಾರು ಸ್ಪಧೆಗಳು ಏರ್ಪಡಿಸಲಾಯಿತು.ಸುಮಾರು ನೂರಕ್ಕುಅಧಿಕ ವಿದ್ಯಾರ್ಥಿ- ವಿದ್ಯಾರ್ಥಿನಿಯರು ಪ್ರಬಂಧ ಹಾಗೂ ಪೋಸ್ಟರ್ ಸ್ಪರ್ದೆಯಲ್ಲಿ ಭಾಗವಹಿಸಿದ್ದರು.
ಈ ಕಾರ್ಯಕ್ರಮದ ಉದ್ಘಾಟನೆಯನ್ನು ಬಿ.ಇ.ಒ. ಪ್ರಾಂಶುಪಾಲರಾದ ಡಾ. ಶ್ರೀಮತಿ ಮೋಕ್ಷಾ ನಾಯಕ್, ವಿಭಾಗ ಮುಖ್ಯಸ್ಥರಾದ ಡಾ.ಜಯಪ್ರಸಾದ್ ಆನೇಕಾರ್, ಡಾ.ಕೃಷ್ಣಪ್ರಸಾದ್, ಡಾ.ಸವಿತಾ ಸತ್ಯಪ್ರಸಾದ್, ಡಾ.ಪ್ರಸನ್ನಕುಮಾರ್ ಹಾಗೂ ಇನ್ನಿತರರ ಉಪಸ್ಥಿತಿಯಲ್ಲಿ ನಡೆಸಲಾಯಿತು. ಡಾ.ದಯಾಕರ್‌ರವರು ಸ್ವಾಗತಿಸಿದರು.
ಶಿಕ್ಷಕರ ತರಭೇತಿ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಕೆ.ವಿ.ಜಿ. ದಂತ ಮಹಾವಿದ್ಯಾಲಯದ ಬಾಯಿ ರೋಗ ಪತ್ತೆ ವಿಭಾಗ ಮುಖ್ಯಸ್ಥರಾದ ಡಾ. ಜಯಪ್ರಸಾದ್ ಆನೇಕರ್ ಬಾಯಿಯ ರೋಗಗಳು ವಿಷಯದ ಕುರಿತು ಮಾಹಿತಿ ನೀಡಿದರು.
ಸುಳ್ಯ ತಾಲೂಕಿನ ಎಲ್ಲಾ ಶಾಲಾ ಶಿಕ್ಷಕರಿಗೆ ಬಾಯಿ ಆರೋಗ್ಯದ ಬಗ್ಗೆ ಕಾರ್ಯಗಾರ ಏರ್ಪಡಿಸಲಾಯಿತು. ೬೦ಕ್ಕೂ ಅಧಿಕ ಶಿಕ್ಷಕರು ಇದರ ಪ್ರಯೋಜನ ಪಡೆದರು.
ಶಿಕ್ಷಕರ ತರಭೇತಿಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಕೆ.ವಿ.ಜಿ. ದಂತ ಮಹಾವಿದ್ಯಾಲಯದ ಬಾಯಿ ರೋಗ ಪತ್ತೆ ವಿಭಾಗ ಮುಖ್ಯಸ್ಥರಾದ ಡಾ. ದಯಾಕರ್ ಬಾಯಿಯ ರೋಗಗಳ ತಡೆಗಟ್ಟುವಿಕೆ ವಿಷಯದ ಕುರಿತು ಮಾಹಿತಿ ನೀಡಿದರು.
ಪ್ರಬಂಧ ಸ್ಪರ್ಧೆಯ ಕನ್ನಡ ವಿಭಾಗದಲ್ಲಿ ಆಲೆಟ್ಟಿ ಸರಕಾರಿ ಪ್ರೌಡಶಾಲೆಯ ೯ನೇ ತರಗತಿ ವಿದ್ಯಾರ್ಥಿ ಕು. ದಿಶಾ ಎ.ವಿ. ಪ್ರಥಮ, ನೆಹರೂ ಮೆಮೋರಿಯಲ್‌ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿಕೃತಿ ಜಿ. ರಾವ್ ದ್ವಿತೀಯ ಪ್ರಶಸ್ತಿ ಪಡೆದರು. ಇಂಗ್ಲಿಷ್ ವಿಭಾಗದಲ್ಲಿ ಕೆ.ವಿ.ಜಿ.ಅವ್ಮರಜ್ಯೋತಿ ಕಾಲೇಜಿನ ದೀಪ್ತಿ ವೈ.ಪ್ರಥಮ ಹಾಗೂ ಶಾರದಾ ಪಿ.ಯು.ಕಾಲೇಜಿನ ದ್ವಿತೀಯ ಪಿ.ಯು.ಸಿ.ವಿದ್ಯಾರ್ಥಿ ಚೈತ್ರಾ ದ್ವೀತಿಯ ಪ್ರಶಸ್ತಿಯನ್ನು ಬಿ.ಇ.ಒ. ರಿಂದ ಪಡೆದರು.
ದಂತ ವಿದ್ಯಾಲಯದಲ್ಲಿ ಶಾಲಾ-ಕಾಲೇಜು ಮಕ್ಕಳಿಗಾಗಿ ವಸ್ತು ಪ್ರದರ್ಶನಏರ್ಪಡಿಸಲಾಗಿತ್ತು. ಸುಮಾರು 300 ವಿದ್ಯಾರ್ಥಿಗಳು ದಂತ ಸಂರಕ್ಷಣೆಯ ಬಗ್ಗೆ ಅರಿವನ್ನು ಪಡೆದರು.ವಸಡು ವಿಭಾಗದ ಪ್ರಾಚಾರ್ಯರಾದಡಾ.ಪ್ರಕಾಶ್ ಪೈ ವಂದಿಸಿದರು. ವಿಭಾಗದದಂತ ಮಹಾವಿದ್ಯಾಲಯದಎಲ್ಲಾ ವಿಭಾಗಗಳ ವೈದ್ಯರುಇದರಲ್ಲಿ ಭಾಗವಹಿಸಿದರು.
ಬಾಯಿ ಸ್ವಚ್ಛತಾ ದಿನದ ಅಂಗವಾಗಿ ಆ.8ರಂದು ಉಚಿತ ದಂತ ಶಿಬಿರವನ್ನು ನಗರ ಪಂಚಾಯಿತಿ ಸುಳ್ಯದಲ್ಲಿ ಆಯೋಜಿಸಲಾಯಿತು. ಇದರ ಉದ್ಘಾಟನೆಯನ್ನು ಕೆ.ವಿ.ಜಿ. ದಂತ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಮೋಕ್ಷಾ ನಾಯಕ್ ಮತ್ತು ನಗರ ಪಂಚಾಯಿತಿಅಧ್ಯಕ್ಷರಾದ ವಿನಯ್‌ಕುಮಾರ್‌ಕಂದಡ್ಕ ಉದ್ಘಾಟಿಸಿದರು. ಈ ಶಿಬಿರದಿಂದಾಗಿ ನಗರ ಪಂಚಾಯಿತಿಯ ಸಿಬ್ಬಂದಿ ವರ್ಗದವರಿಗೆ ಉಪಯೋಗವಾಯಿತು.