ವಿ.ಹೆಚ್.ಪಿ ಬಜರಂಗದಳ ವತಿಯಿಂದ ಅಖಂಡ ಭಾರತ ಸಂಕಲ್ಪ ದಿನ

0

 

ಹಿಂದೂ ಬಾಂಧವರು ಸಂಘಟಿತರಾಗಿ ಮತೀಯ ಶಕ್ತಿಗಳ ಕಡಿವಾಣಕ್ಕೆ ಪಣ ತೊಡಗಬೇಕು – ಸುದರ್ಶನ್ ಬಜ

ಸ್ವಾತಂತ್ರ್ಯ ಅಮೃತ ಮಹೋತ್ಸವದ ಸುಸಂದರ್ಭದಲ್ಲಿ
ಅಖಂಡ ಭಾರತದ ಸಂಕಲ್ಪದೊಂದಿಗೆ ಹಿಂದೂ ಬಾಂಧವರು ಸಂಘಟಿತರಾಗಬೇಕು. ಬೆಳ್ಳಾರೆಯಲ್ಲಿ ಪ್ರವೀಣ್ ನೆಟ್ಟಾರು ರವರ ಹತ್ಯೆ ವ್ಯಾಪಾರದ ದೃಷ್ಟಿ ಕೋನವನ್ನಿಟ್ಟು ಕೃತ್ಯವೆಸಗಿದ್ದಾರೆ. ಹಿಂದೂಗಳ ವ್ಯಾಪಾರ ವ್ಯವಹಾರದಿಂದ ಬೆಳೆದ ಮತೀಯ ಶಕ್ತಿಗಳಿಗೆ ಕಡಿವಾಣ ಹಾಕಲು ನಾವುಗಳು ಸಂಘಟಿತರಾಗಬೇಕು ಎಂದು ಬಂಟ್ವಾಳ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಸುದರ್ಶನ್ ಬಜ ರವರು ಕರೆ ನೀಡಿದರು.
ಸುಳ್ಯ ಚೆನ್ನಕೇಶವ ದೇವಸ್ಥಾನದ ವಠಾರದಲ್ಲಿ ನಡೆದ ಅಖಂಡ ಭಾರತ ಸಂಕಲ್ಪ ದಿನದ ಸಮಾವೇಶದಲ್ಲಿ ಅವರು ದಿಕ್ಸೂಚಿ ಭಾಷಣ ಮಾಡಿದರು.

 

ವಿಶ್ವ ಹಿಂದೂ ಪರಿಷದ್ ಬಜರಂಗದಳ ಸುಳ್ಯ ಪ್ರಖಂಡ ವತಿಯಿಂದ ನಡೆದ ಸಮಾವೇಶದಲ್ಲಿ ಮಾತನಾಡಿದ ಅವರು ಇತಿಹಾಸದ ಪುಟ ತೆರೆದಾಗ ತಿರುಚಿದ ಪಠ್ಯ ವನ್ನು ಭೋದಿಸಿ ಗುಲಾಮ ಸಂತತಿ ಎಂದು ಕರೆಯಲ್ಪಟ್ಟರು. ನಾವು ಗುಲಾಮ ಸಂತತಿಯವರಲ್ಲ ಎಂಬ ಉತ್ತರ ನೀಡುವ ಕಾಲ ಸನ್ನಿಹಿತವಾಗಿದೆ.ಭಾರತ ದೇಶವನ್ನು ಮುಸ್ಲಿಂ ರಾಷ್ಟ್ರವನ್ನಾಗಿ ಮಾಡುವ ಷಡ್ಯಂತ್ರ ಮತೀಯ ಶಕ್ತಿಗಳಿಂದ ನಿರಂತರವಾಗಿ ನಡೆಯುತ್ತಿದೆ. ತಾಯಿ ಭಾರತ ಮಾತೆಯನ್ನು ವಿಶ್ವ ಗುರುವಾಗಿ ಪ್ರಕಾಶಿಸುವಂತೆ ಮಾಡಲು ನಾವಿಂದು ಸಂಕಲ್ಪ ಮಾಡಬೇಕು ಎಂದು ಅವರು ಹೇಳಿದರು.

ದೇಶ ಸೇವೆಗೆ ಯುವಕರು ಮುಂದಾಗಬೇಕು. ಅಗ್ನಿಪಥ್ ಯೋಜನೆಯ ಮೂಲಕ ದೇಶ ಸೇವೆಗೆ ಯುವ ಶಕ್ತಿ ತೊಡಗಿಸಿಕೊಳ್ಳಬೇಕು. ಸೈನಿಕರಿಗೆ ದೇಶ ಪ್ರೇಮ ಹೆಚ್ಚು. ಉಗ್ರವಾದಿಗಳನ್ನು ಸದೆ ಬಡಿದು ರಾಷ್ಟ್ರ ಪತಿಯವರಿಂದ ಪ್ರಶಸ್ತಿ ಪಡೆದ ನಾನು ಇಂದಿಗೂ ದೇಶದ ಹಿತಕ್ಕಾಗಿ ಪ್ರಾಣ ತ್ಯಾಗ ಮಾಡಲು ಸಿದ್ದ ಎಂದು ನಿವೃತ್ತ ಸೈನಿಕ ರಾಷ್ಟ್ರ ಪತಿ ಶೌರ್ಯ ಚಕ್ರ ಪ್ರಶಸ್ತಿ ಪುರಸ್ಕೃತ ಚಂದ್ರಶೇಖರ ಎ.ಎಲ್.ರವರು ಹೇಳಿದರು.

ಸುಳ್ಯ ತಾಲೂಕು
ವಿ.ಹೆಚ್.ಪಿ.ಅಧ್ಯಕ್ಷ ಸೋಮಶೇಖರ ಪೈಕ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು. ಆರಂಭದಲ್ಲಿ ದೀಪ ಪ್ರಜ್ವಲಿಸಿ ಭಾರತ ಮಾತೆಗೆ ಪುಷ್ಪಾರ್ಚನೆ ಮಾಡಲಾಯಿತು.
ಬಜರಂಗದಳ ಜಿಲ್ಲಾ ಸಹ ಸಂಚಾಲಕ ಲತೀಶ್ ಗುಂಡ್ಯ ರವರು ಅಖಂಡ ಭಾರತ ಸಂಕಲ್ಪ ದಿನದ ಪ್ರತಿಜ್ಞೆಯನ್ನು ಭೋದಿಸಿದರು.
ಬಜರಂಗದಳ ಸಹ ಸಂಯೋಜಕ ಸಂದೀಪ್ ವಳಲಂಬೆ ಪ್ರಾಸ್ತಾವಿಕ ಮಾತಿನೊಂದಿಗೆ ಸ್ವಾಗತಿಸಿದರು. ಪುಷ್ಪಾದರ ಕೊಡೆಂಕೇರಿ ವಂದೇ ಮಾತರಂ ಗೀತೆಯನ್ನು ಹಾಡಿದರು. ಬಜರಂಗದಳ ಸಹ ಸಂಯೋಜಕ ನವೀನ್ ಎಲಿಮಲೆ ವಂದಿಸಿದರು. ಪ್ರದೀಪ್ ಕೊಲ್ಲರಮೂಲೆ ಕಾರ್ಯಕ್ರಮ ನಿರೂಪಿಸಿದರು. ವಿಶ್ವ ಹಿಂದೂ ಪರಿಷದ್ ಬಜರಂಗದಳ ಕಾರ್ಯಕರ್ತರು ಭಾಗವಹಿಸಿದರು. ಕಾರ್ಯಕ್ರಮದ ಕೊನೆಯ ಕ್ಷಣದಲ್ಲಿ ಪಂಜಿನ ಮೆರವಣಿಗೆ ರದ್ದು ಮಾಡಲಾಗಿತ್ತು.