ಸುಬ್ರಹ್ಮಣ್ಯ ಗ್ರಾ.ಪಂ ನಿಂದ ಅಮೃತ ಸ್ವಾತಂತ್ರ್ಯ ಮಹೋತ್ಸವ

0

 

 

ಸುಬ್ರಹ್ಮಣ್ಯ ಗ್ರಾ.ಪಂ ನಿಂದ ಸ್ವಾತಂತ್ರ್ಯೋತ್ಸವ ಅಮೃತಮಹೋತ್ಸವ ಆಚರಣೆ ಗ್ರಾ.ಪಂ ಬಳಿಯಲ್ಲಿ ಧ್ವಜಾರೋಹಣ ನಡೆಯಿತು . ಬಳಿಕ ಶಾಲಾ ಕಾಲೇಜಿನವರಿದ್ದು, ಕಡಬ ತಾಲೂಕು ಮಾಜಿ ಸೈನಿಕರು, ಎನ್ ಡಿ ಆರ್ ಎಫ್, ಎಸ್ ಡಿ ಆರ್ ಎಫ್ ನವರಿದ್ದು, ಸಂಜೀವಿನಿ ಒಕ್ಕೂಟ ಸಂಘ ಸಂಸ್ಥೆಗಳಿದ್ದು ಅದ್ದೂರಿ ಮೆರವಣಿಗೆ ನಡೆಯಿತು.ಗ್ರಾ.ಪಂ ನಿಂದ ಹೊರಟು, ರಥಬೀದಿವರೆಗೆ ತೆರಳಿ ವಲ್ಲೀಶ ಸಭಾಭವನದ ವರೆಗೆ ಸಾಗಿತು. ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಬಳಿ ಸೈನಿಕರಿಗೆ ಸನ್ಮಾನ, ವೀರ ಮರಣ ಹೊಂದಿದ ಯೋಧರ ಮನೆಯವರಿಗೆ ಸನ್ಮಾನ ನಡೆಯಿತು. ಬಳಿಕ ವಲ್ಲೀಶ ಸಭಾಭವನದಲ್ಲಿ ಸಭಾ ಕಾರ್ಯಕ್ರಮ ನಡೆಯಿತು.

ಮೋಹನರಾಂ ಸುಳ್ಳಿಯವರಿಂದ ಸಭಾ ಕಾರ್ಯಕ್ರಮ ಉದ್ಘಾಟನೆ, ನಿವೃತ್ತ ಶಿಕ್ಷಕ ಚಿದಾನಂದ ಅವರಿ ವಿಶೇಷ ಅಮೃತ ಮಹೋತ್ಸವ ಉಪನ್ಯಾಸ

 

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಎದುರು ಸೈನಿಕರಿಗೆ ಸನ್ಮಾನ, ವೀರ ಮರಣ ಹೊಂದಿದ ಯೋಧರ ಮನೆಯವರಿಗೆ ಸನ್ಮಾನ

 

 

ಗ್ರಾ.ಪಂ ಅಧ್ಯಕ್ಷೆ ಲಲಿತಾ ಗುಂಡಡ್ಕ ವಹಿಸಿದ್ದರು.ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನ್‌ರಾಂ ಸುಳ್ಳಿ ಸಭಾ ಕಾರ್ಯಕ್ರಮ ಉದ್ಘಾಟಿಸಿದರು.

ವಿಶೇಷ ಭಾಷಣವನ್ನುನಿವೃತ್ತ ಶಿಕ್ಷಕ ಚಿದಾನಂದ ಯು.ಎಸ್ ಮಾಡಿದರು. ಮುಖ್ಯ ಅತಿಥಿಗಳಾಗಿ ಕಾರ್ಯನಿರ್ವಹಣಾಧಿಕಾರಿ ಡಾ| ನಿಂಗಯ್ಯ, ಎಸ್ ಎಸ್ ಪಿ ಯು ಕಾಲೇಜು ಪ್ರಾಂಶುಪಾಲ ಸೋಮಶೇಖರ್ ನಾಯಕ್,ಉದ್ಯಮಿಗಳು ಯಜ್ಞೇಶ್ ಆಚಾರ್, ಹರೀಶ್ ಕಾಮತ್, ಅನುಗ್ರಹ ಎಜುಕೇಶನ್ ಟ್ರಸ್ಟ್ ಸಂಚಾಲಕರು ಗಣೇಶ್ ನಾಯರ್ , ಏನೆಕಲ್ಲುಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘ ಅಧ್ಯಕ್ಷ ಭವಾನಿಶಂಕರ ಪೂಂಬಾಡಿ, ಸುಬ್ರಹ್ಮಣ್ಯ-ಐನೆಕಿದು ಪ್ರಾಥಮಿಕ ಕೃಷಿಪತ್ತಿನ ಸಹಕಾರಿಸಂಘ ಸುಬ್ರಹ್ಮಣ್ಯದ ಅಧ್ಯಕ್ಷ ಜಯಪ್ರಕಾಶ್ ಕೂಜುಗೋಡು, ಕಡಬ ತಾಲೂಕು ನಿವೃತ್ತ ಸೈನಿಕರ ಸಂಘದ ಅಧ್ಯಕ್ಷ ಜೆ.ಪಿ.ಎಂ ಚೆರಿಯನ್ ಉಪಸ್ಥಿತರಿದ್ದರು. ರಾಜೇಶ್‌ ಎನ್ ಸ್ವಾಗತಿಸಿದರು, ಸುಬ್ರಹ್ಮಣ್ಯ ಗ್ರಾ.ಪಂ ಪಿಡಿಒ ಯು ಡಿ ಶೇಖರ್ ಪ್ರಸ್ತಾವಿಕ ಮಾತನಾಡಿದರು. ಭಾರತಿ ದಿನೇಶ್, ವಿಶ್ವನಾಥ ನಡುತೋಟ, ರತ್ನಾಕರ ಸುಬ್ರಹ್ಮಣ್ಯ ಕಾರ್ಯಕ್ರಮ ನಿರ್ವಹಿಸಿದರು. ಸುಬ್ರಹ್ಮಣ್ಯ ಗ್ರಾ.ಪಂ ಸಿಬ್ಬಂದಿಗಳು, ಗ್ರಾ.ಪಂ ಸದಸ್ಯರು ಇನ್ನಿತರು ಸಹಕರಿಸಿದರು.ಎಸ್ ಎಸ್ ಪಿ ಯು ಕಾಲೇಜು ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಗೀತಗಾಯನ, ಹಾಗೂ ಪ್ರವೀಣ ಏನೆಕಲ್ ಅವರ ಕೊಳಲು ವಾದನ ನಡೆಯಿತು.

ಪೋಟೋ: ಶಾಂತಲ ಸ್ಟುಡಿಯೋ ಸುಬ್ರಹ್ಮಣ್ಯ