ಸಂತ ಬ್ರಿಜಿಡ್ಸ್ ಮಾತೆಯ ದೇವಾಲಯದಲ್ಲಿ ಹಿರಿಯರ ದಿನಾಚರಣೆ ಕಾರ್ಯಕ್ರಮ

0

ಕಥೋಲಿಕ ಸಭೆ ಸುಳ್ಯ ಘಟಕ, ಚರ್ಚ್ ಪಾಲನಾ ಸಮಿತಿ ಹಾಗೂ ಕುಟುಂಬ ಆಯೋಗದ ಜಂಟಿ ಸಹಯೋಗದಲ್ಲಿ ಆಗಸ್ಟ್ 14ರಂದು ಹಿರಿಯರ ದಿನಾಚಣೆ ಕಾರ್ಯಕ್ರಮವನ್ನು ಸಂತ ಬ್ರಿಜಿಡ್ಸ್ ಮಾತೆಯ ದೇವಾಲಯದಲ್ಲಿ ಆಚರಿಸಲಾಯಿತು. ಬೆಳಗ್ಗೆ 9.30 ಕ್ಕೆ ಹಿರಿಯರಿಗೆ ಪಾಪನಿವೇದನೆ ಸಂಸ್ಕಾರ ಹಾಗೂ ದಿವ್ಯ ಬಲಿಪೂಜೆಯನ್ನು ವಂದನೀಯ ಫಾದರ್ ವಿಕ್ಟರ್ ಡಿಸೋಜರವರು ನೆರವೇರಿಸಿದರು.

ನಂತರ ಸ್ವಾತಂತ್ರ್ಯ ಅಮೃತ ಮಹೋತ್ಸವದ ಸವಿ ನೆನಪಿಗಾಗಿ ಸುಳ್ಯ ಸಂತ ಬ್ರಿಜಿಡ್ಸ್ ಮಾತೆಯ ದೇವಾಲಯದ ವ್ಯಾಪ್ತಿಗೆ ಒಳಪಟ್ಟ 75 ವರ್ಷ ಮೇಲ್ಪಟ್ಟ ಎಲ್ಲಾ ಹಿರಿಯ ನಾಗರೀಕರನ್ನು ಗುರುತಿಸಿ ಸನ್ಮಾನಿಸಿ ಗೌರವಿಸಲಾಯಿತು ಹಾಗೂ 65ವರ್ಷ ಮೇಲ್ಪಟ್ಟವರನ್ನು ಗುರುತಿಸಿ ಉಡುಗೊರೆ ನೀಡಿ ಗೌರವಿಸಲಾಯಿತು. ವಂದನೀಯ ಫಾದರ್ ವಿಕ್ಟರ್ ಡಿಸೋಜರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ, ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು.

ವೇದಿಕೆಯಲ್ಲಿ ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷರಾದ ಗೋಡ್‌ಪ್ರೀ ಮೊಂತೆರೊ, ಕಥೋಲಿಕ ಸಭೆಯ ಅಧ್ಯಕ್ಷರಾದ ಜೋಸೆಫ್ ಅರುಣ್ ಕ್ರಾಸ್ತ, ಮುಖ್ಯ ಅತಿಥಿಯಾಗಿ ನಗರ ಪಂಚಾಯತ್ ಸದಸ್ಯರಾದ ಡೇವಿಡ್ ಧೀರಾ ಕ್ರಾಸ್ತ, ಚರ್ಚ್ ಪಾಲನಾ ಸಮಿತಿಯ ಕಾರ್ಯದರ್ಶಿ ಜೂಲಿಯಾ ಕ್ರಾಸ್ತ, ಕುಟುಂಬ ಆಯೋಗದ ಸಂಚಾಲಕರಾದ ಶ್ರೀಮತಿ ಅನಿತಾ ಲಸ್ರಾದೊ, ಹಿರಿಯರಾದ ಶ್ರೀಮತಿ ಸಿಸಿಲಿಯಾ ಗೊನ್ಸಾಲ್ವಿಸ್, ರೈಮಂಡ್ ಕಾನ್ವೆಂಟಿನ ಸುಪೀರಿಯರ್ ಸಿಸ್ಟರ್ ಗ್ರೇಸಿ ಡಿಸೋಜ ಹಾಗೂ ಅಸಿಸಿ ಸದನ ಕಾನ್ವಂಟಿನ ಸುಪೀರಿಯರ್ ಸಿಸ್ಟರ್ ಸಿಸಿಲಿ ರವರು ಉಪಸ್ಥಿತರಿದ್ದರು. ಶ್ರೀಮತಿ ಕವಿತಾ ಡಿಸೋಜರವರು ಮನೋರಂಜನಾ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಮಧ್ಯಾಹ್ನ ಸಹ ಭೋಜನದ ವ್ಯವಸ್ಥೆಯನ್ನು ಮಾಡಲಾಯಿತು. ಜೋಸೆಪ್ ಅರುಣ್ ಕ್ರಾಸ್ತರವರು ಸ್ವಾಗತಿಸಿ, ಗೋಡ್‌ಪ್ರೀ ಮೊಂತೆರೊ ರವರು ವಂದಿಸಿದರು. ಶ್ರೀಮತಿ ಪ್ರೀಮಾ ಗೊನ್ಸಾಲ್ವಿಸ್ ಕಾರ್ಯಕ್ರಮ ನಿರೂಪಿಸಿದರು.