ಕೆವಿಜಿ ಐಪಿಎಸ್ ನಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವ

0

ಕೆವಿಜಿ ಇಂಟರ್ನ್ಯಾಷನಲ್ ಪಬ್ಲಿಕ್ ಸ್ಕೂಲ್ ನಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಕೆವಿಜಿ ಐಪಿಎಸ್, ಕೆವಿಜಿ ಐಟಿಐ ಮತ್ತು ಕೆವಿಜಿ ಅಮರಜ್ಯೋತಿ ಪಿಯು ಕಾಲೇಜು ಜಂಟಿಯಾಗಿ ಅ.15 ರಂದು ಆಚರಿಸಲಾಯಿತು. ಮುಖ್ಯ ಅತಿಥಿಯಾಗಿ ಆಗಮಿಸಿದ ನಿವೃತ್ತ ಸೈನಿಕ ಸಂಘ ಸುಳ್ಯ ಇದರ ಉಪಾಧ್ಯಕ್ಷ ಮಾಧವ ಬಿ ಧ್ವಜಾರೋಹಣ ಮಾಡಿ ‘ ನಾವು ಈ ಸಂದರ್ಭದಲ್ಲಿ ನಮ್ಮ ದೇಶದ ಸ್ವಾತಂತ್ರ್ಯಕ್ಕೆ ಬಲಿದಾನರಾದ ಹಿರಿಯ ಜೀವಗಳನ್ನು ನೆನಪಿಸಿಕೊಳ್ಳೋಣ.

ನಾವು ನಮ್ಮ ಕರ್ತವ್ಯವನ್ನು ಅಚ್ಚುಕಟ್ಟಾಗಿ ಮಾಡಿ ದೇಶ ಸೇವೆಯನ್ನು ಮಾಡಬೇಕು. ಜೊತೆಗೆ ವೈಯಕ್ತಿಕ ಚಾರಿತ್ರ್ಯ ದ ಕಡೆಗೆ ಗಮನ ಕೊಡಬೇಕು. ಒಗ್ಗಟ್ಟಿನಲ್ಲಿ ಬಲವಿದೆ, ಭಾರತೀಯರೆಲ್ಲರೂ ಒಟ್ಟು ಸೇರಿ ದೇಶಸೇವೆಗೆ ಮುನ್ನುಗ್ಗಬೇಕು’ಎಂದು ತಿಳಿಸಿದರು. ಆ ಬಳಿಕ ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ನ ಪ್ರಧಾನ ಕಾರ್ಯದರ್ಶಿಗಳಾದ ಡಾ. ರೇಣುಕಾಪ್ರಸಾದ್ ಕೆವಿ ‘ ದೇಶ ಕಟ್ಟಲು ಇಂದಿನ ವಿದ್ಯಾರ್ಥಿಗಳೇ ರೂವಾರಿಗಳು. ಆದುದರಿಂದ ವಿದ್ಯಾರ್ಥಿಗಳೇ ದೇಶವನ್ನು ಬಲಿಷ್ಠಗೊಳಿಸಬೇಕು ‘ಎಂದರು. ಹತ್ತನೇ ತರಗತಿ ವಿದ್ಯಾರ್ಥಿನಿ ಸೃಜನಿ ಬಿ.ಕೆ ಸ್ವಾತಂತ್ರ್ಯ ಆಚರಣೆಯ ಮಹತ್ವದ ಕುರಿತು ತಿಳಿಸಿದಳು. ಈ ಸಂದರ್ಭದಲ್ಲಿ ಅಂಕುರ್ ಪಬ್ಲಿಕ್ ಸ್ಕೂಲ್, ನಾಪೋಕ್ಲು ಶಾಲೆಯಲ್ಲಿ ರಾಜ್ಯ ಮಟ್ಟದ ಕೆಸರು ಗದ್ದೆ ಕ್ರೀಡಾಕೂಟದಲ್ಲಿ ವಿಶೇಷ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಡಾ. ರೇಣುಕಾಪ್ರಸಾದ್ ಕೆ. ವಿ, ಕೆವಿಜಿ ಐಪಿಎಸ್ ನ ಕಾರ್ಯನಿರ್ವಹಣಾ ಅಧಿಕಾರಿ ಡಾ. ಉಜ್ವಲ್ ಯು. ಜೆ ಮತ್ತು ಮುಖ್ಯ ಅತಿಥಿಗಳು ಸೇರಿ ಪ್ರಶಸ್ತಿ ಪತ್ರಗಳನ್ನು ನೀಡಿ ಸನ್ಮಾನಿಸಿದರು. ಬಳಿಕ ಕೆವಿಜಿ ಐಪಿಎಸ್ ಮತ್ತು ಕೆವಿಜಿ ಅಮರ ಜ್ಯೋತಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಂದ ದೇಶಭಕ್ತಿಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು. ಕೆವಿಜಿ ಐಪಿಎಸ್ ನ ಪ್ರಾಂಶುಪಾಲ ಅರುಣ್ ಕುಮಾರ್ ಸ್ವಾಗತಿಸಿದರು. ಕೆವಿಜಿಐಟಿಐ ಸಿಬ್ಬಂದಿ ಭವಾನಿ ಶಂಕರ್ ಅಡ್ತಲೆ ಮುಖ್ಯ ಅತಿಥಿ ಮಾಧವ ಬಿ. ಕೆ ಅವರನ್ನು ಪರಿಚಯಿಸಿದರು. ಕೆವಿಜಿ ಅಮರಜ್ಯೋತಿ ಕಾಲೇಜಿನ ಪ್ರಾಂಶುಪಾಲೆ ಶ್ರೀಮತಿ ಯಶೋಧ ರಾಮಚಂದ್ರ ವಂದಿಸಿದರು. ಕಾರ್ಯಕ್ರಮವನ್ನು ಅಮರ ಜ್ಯೋತಿ ಕಾಲೇಜಿನ ವಿದ್ಯಾರ್ಥಿಗಳಾದ ಮನಸ್ವಿ ಮತ್ತು ದೃತಿಕ ನಿರೂಪಿಸಿದರು. ಕೆವಿಜಿ ಐಟಿಐನ ಪ್ರಾಂಶುಪಾಲರಾದ ಚಿದಾನಂದ, ಅಮರಜ್ಯೋತಿ ಪಿಯು ಕಾಲೇಜಿನ ಉಪಪ್ರಾಂಶುಪಾಲ ದೀಪಕ್, ಕೆವಿಜಿ ಐಪಿಎಸ್ ನ ಉಪಪ್ರಾಂಶುಪಾಲೆ ಶಿಲ್ಪ ಬಿದ್ದಪ್ಪ, ನಿವೃತ್ತ ಪೊಲೀಸ್ ಅಧೀಕ್ಷಕರು ರಾಮದಾಸ್ ಗೌಡ, ಎನ್. ಎ ರಾಮಚಂದ್ರ, ಶ್ರೀಮತಿ ಲೀಲಾವತಿ ಮಾಧವ, ಪ್ರಸನ್ನ ಕಲ್ಲಾಜೆ, ಮಾಧವ ಬಿ ಟಿ, ಡಾ. ಮನೋಜ್, ಡಾ. ರೇವಂತ್ ಉಪಸ್ಥಿತರಿದ್ದರು.

ಕಾರ್ಯಕ್ರಮ ಮುಗಿದ ಬಳಿಕ ಸ್ವಾತಂತ್ರ್ಯ ದಿನದ ಅಂಗವಾಗಿ ಎಲ್ಲಾ ವಿದ್ಯಾರ್ಥಿಗಳು ಮಾಡಿದ ಕ್ರಾಫ್ಟ್ ವರ್ಕ್ ನ ಪ್ರದರ್ಶನವನ್ನು ಅತಿಥಿಗಳು ಮತ್ತು ಪೋಷಕರು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.