ದೇವರಕಾನ ಸ.ಹಿ.ಪ್ರಾ.ಶಾಲೆಯಲ್ಲಿ ಸ್ವಾತಂತ್ರ್ಯೋತ್ಸವ

0

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ದೇವರಕಾನದಲ್ಲಿ 75ನೇ ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು. ಊರಿನ ಹಿರಿಯರಾದ ಪದ್ಮನಾಭ ಗೌಡ ನೂಜಾಲು ದ್ವಜಾರೋಹಣವನ್ನು ನೆರವೇರಿಸಿದರು. ನಂತರ ಸಭಾ ಕಾರ್ಯಕ್ರಮ ನಡೆಸಲಾಯಿತು. ವಿದ್ಯಾರ್ಥಿಗಳಿಗೆ ಬಹುಮಾನ ಮತ್ತು ಸಿಹಿ ತಿಂಡಿ ವಿತರಿಸಲಾಯಿತು. ಈ ಸಂದರ್ಭದಲ್ಲಿ ಎಸ್ ಡಿ ಎಂ ಸಿ ಅಧ್ಯಕ್ಷರಾದ ನವೀನ್ ಸಾರಕರೆ, ಉಪಾಧ್ಯಕ್ಷರಾದ ಮಮತಾ ಎಡಮಲೆ, ಸೋಣಂಗೇರಿ ಕ್ಲಸ್ಟರ್ ಸಮನ್ವಯಾಧಿಕಾರಿಯಾದ ಅನುರಾಧ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸತೀಶ್ ಎಡಮಲೆ, ಎಸ್ ಡಿ ಎಂ ಸಿ ಯಾ ಎಲ್ಲ ಸದಸ್ಯರು, ಎಲ್ಲಾ ಪೋಷಕರು, ಹಿರಿಯ ವಿದ್ಯಾರ್ಥಿಗಳು, ಉಪಸ್ಥಿತರಿದ್ದರು. ಪ್ರಭಾರ ಮುಖ್ಯ ಶಿಕ್ಷಕಿ ಸೌಮ್ಯ ಸ್ವಾಗತಿಸಿ, ಅಶ್ವಿನಿ ಧನ್ಯವಾದ ಮಾಡಿದರು.