ಸಜ್ಜನ ಪ್ರತಿಷ್ಠಾನದಿಂದ ನೆರೆ ಸಂತ್ರಸ್ತರೊಂದಿಗೆ ಸ್ವಾತಂತ್ರ್ಯ ಅಮೃತಮಹೋತ್ಸವ ಆಚರಣೆ

0

 

ಸಜ್ಜನ ಪ್ರತಿಷ್ಠಾನದ ವತಿಯಿಂದ ಧನಸಹಾಯ ಮತ್ತು ವಸ್ತ್ರ ಹಾಗೂ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ

ತಹಶೀಲ್ದಾರ್ ಅನಿತಾಲಕ್ಷ್ಮಿ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟನೆ, ನಿವೃತ್ತ ಶಿಕ್ಷಕ ಕೆ ಆರ್ ಗಂಗಾಧರ್ ಅವರಿಂದ ವಿಶೇಷ ಅಮೃತ ಮಹೋತ್ಸವ ಉಪನ್ಯಾಸ

ಸಜ್ಜನ ಪ್ರತಿಷ್ಠಾನ ಬೀಜದಕಟ್ಟೆ ಇದರ ವತಿಯಿಂದ ಸಜ್ಜನ ಕಾಳಜಿ ಕೇಂದ್ರದಲ್ಲಿರುವ ಕುಟುಂಬದೊಂದಿಗೆ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಆಚರಣೆಯನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಲಾಯಿತು.
ಸುಳ್ಯ ತಹಶಿಲ್ದಾರ್ ಅನಿತಲಕ್ಷ್ಮಿ ನೆರೆ ಸಂತ್ರಸ್ತರೊಂದಿಗೆ ಸ್ವಾತಂತ್ರೋತ್ಸವ ಅಮೃತ ಮಹೋತ್ಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮ ಅಧ್ಯಕ್ಷತೆಯನ್ನು ಸಜ್ಜನ ಪ್ರತಿಷ್ಠಾನ ಅಧ್ಯಕ್ಷ ಡಾ.ಉಮ್ಮರ್ ಬೀಜದಕಟ್ಟೆ ವಹಿಸಿದ್ದರು.

ವಿಶೇಷ ಭಾಷಣವನ್ನು
ನಿವೃತ್ತ ಶಿಕ್ಷಕ ಕೆ ಆರ್ ಗಂಗಾಧರ್ ಮಾಡಿದರು.
ಸಜ್ಜನ ಪ್ರತಿಷ್ಠಾನದ ವತಿಯಿಂದ ಕಾಳಜಿ ಕೇಂದ್ರದಲ್ಲಿರುವ ಕುಟುಂಬದ ಸದಸ್ಯರಿಗೆ ವಸ್ತ್ರವಿತರಣೆ,ಪುಸ್ತಕ ಹಾಗೂ ಧನಸಹಾಯ ಹಸ್ತಾಂತರ ಕಾರ್ಯಕ್ರಮ ನಡೆಯಿತು.
ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಜಿ.ಕೆ ಹಮೀದ್, ಶ್ರೀ ಶಾರದ ಅನುದಾನಿತ ವಿದ್ಯಾಸಂಸ್ಥೆ ಅಧ್ಯಕ್ಷ ರಾಮಚಂದ್ರ ಕಲ್ಲುಗದ್ದೆ,ಮುಖ್ಯೋಪಾಧ್ಯಾಯ ಹನುಮಂತ,ನಿವೃತ ಶಿಕ್ಷಕ ದಾಮೋದರ ಮಾಸ್ಟರ್, ತೆಕ್ಕಿಲ್ ಪ್ರತಿಷ್ಠಾನದ ಅಧ್ಯಕ್ಷ ಟಿ ಎಂ ಶಹೀದ್, ಸಂಪಾಜೆ ಸೊಸೈಟಿ ಉಪಾಧ್ಯಕ್ಷ ಮಹಮ್ಮದ್ ಕುಂಞಿ ಗೂನಡ್ಕ, ಸಂಪಾಜೆ ಗ್ರಾಮ ಪಂಚಾಯತ್ ಸದಸ್ಯರಾದ ಎಸ್ ಕೆ ಹನೀಫ್,ಜಗದೀಶ್ ರೈ,ವಿಸ್ಡಂ ವಿದ್ಯಾಸಂಸ್ಥೆ ಮಂಗಳೂರು ಇದರ ನಿರ್ದೇಶಕ ಆಶ್ರಫ್,ಈಶ್ವರಮಂಗಲ ಮಧುರಾ ವಿದ್ಯಾಸಂಸ್ಥೆ ಹನೀಫ್,ಜಾವೇದ್,ಉದ್ಯಮಿ ಸಲೀಂ ಪೆರಂಗೋಡಿ,ಸಜ್ಜನ ಪ್ರತಿಷ್ಠಾನ ನಿರ್ದೇಶಕ ರಹೀಮ್ ಬೀಜದಕಟ್ಟೆ,ಅಬ್ಬಾಸ್ ಹಾಜಿ ಸೆಂಟ್ಯಾರ್,ರಜಾಕ್ ಬೀಜದಕಟ್ಟೆ ಮೊದಲಾದವರು ಉಪಸ್ಥಿತರಿದ್ದರು.
ಕಾಳಜಿ ಕೇಂದ್ರದ ಚಿದಾನಂದ ಮತ್ತು ಚಂದ್ರ ವಿಲಾಸ್ ಸರ್ವರನ್ನು ‌ ಸ್ವಾಗತಿಸಿದರು. ಸಜ್ಜನ ಪ್ರತಿಷ್ಠಾನದ ನಿರ್ದೇಶಕ ಪತ್ರಕರ್ತ ಶರೀಫ್ ಜಟ್ಟಿಪಳ್ಳ ಪ್ರಸ್ತಾವಿಕ ಮಾತನಾಡಿದರು. ಕಮಲಾಕ್ಷ ಮಾಸ್ಟರ್ ಪೆರಂಗೋಡಿ ಕಾರ್ಯಕ್ರಮ ನಿರೂಪಿಸಿದರು. ಸಂಪಾಜೆ ಗ್ರಾ.ಪಂ ಸದಸ್ಯರು ಸಜ್ಜನ ಪ್ರತಿಷ್ಠಾನದ ಹಿತೈಷಿಗಳು ಇನ್ನಿತರು ಸಹಕರಿಸಿದರು.
ತೆಕ್ಕಿಲ್ ಶಾಲಾ ವಿದ್ಯಾರ್ಥಿಗಳಿಂದ ಹಾಗೂ ಕಾಳಜಿಕೇಂದ್ರದಲ್ಲಿರುವ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಪಟ್ಟಾಭಿರಾಮ ರವರಿಂದ ಮಿಮಿಕ್ರಿ ಕಾರ್ಯಕ್ರಮ ನಡೆಸಿಕೊಟ್ಟರು.
ಸಜ್ಜನ ಪ್ರತಿಷ್ಠಾನದ ವತಿಯಿಂದ ಸಹ ಭೋಜನ ಏರ್ಪಡಿಸಿದ್ದರು.
ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಿದ್ದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.