ಶಾಂತಿನಗರ ಶಾಲೆಯಲ್ಲಿ ಸ್ವಾತಂತ್ರ್ಯೋತ್ಸವ

0

 

ಶಾಂತಿನಗರ.ಸ.ಉ.ಹಿ.ಪ್ರಾ.ಶಾಲೆ ಯಲ್ಲಿ 75 ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯನ್ನು ಆಚರಿಸಲಾಯಿತು. ಧ್ವಜಾರೋಹಣವನ್ನು ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ನಝೀರ್ ಶಾಂತಿನಗರ ನೆರವೇರಿಸಿದರು.
ಮುಖ್ಯ ಅತಿಥಿಗಳಾಗಿ ನಿವೃತ್ತ ಸೈನಿಕರು ಆಗಮಿಸಿ ಗೌರವ ವಂದನೆ ಸ್ವೀಕರಿಸಿದರು. ಹಾಗೂ KMF ಮಂಗಳೂರು ಇಲ್ಲಿನ ಸಹಾಯಕ ವ್ಯವಸ್ಥಾಪಕರಾದ ಡಾ. ಪೂಜಾ, ವಿಘ್ನೇಶ್ ಕಾರಂತ್ ಡೈರಿ ಸೂಪರ್ವೈಸರ್,ಅಭಿಷೇಕ್ ಮಾರುಕಟ್ಟೆ ವಿಭಾಗ ಇವರು ಆಗಮಿಸಿದ್ದರು. ಕಾರ್ಯಕ್ರಮದಲ್ಲಿ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸದಸ್ಯರಿಗೆ ಅಭಿನಂದನಾ ಪತ್ರ ನೀಡಲಾಯಿತು. ವಿದ್ಯಾರ್ಥಿಗಳಿಂದ ಶ್ರದ್ದೆ ಹಾಗೂ ಗೌರವಯುತ ಪಥ ಸಂಚಲನ ನಡೆಯಿತು. ಶಾಲೆಯಿಂದ ಪೈಚಾರಿನವರೆಗೆ ಅತಿಥಿ ಗಣ್ಯರು ಹಾಗೂ ವಿದ್ಯಾರ್ಥಿ ವೃಂದದಿಂದ ಅಮೃತ ನಡಿಗೆ ಮಾಡಲಾಯಿತು. ನಂತರ KMF ನಿಂದ ಮಕ್ಕಳಿಗೆ ನಂದಿನಿ ಗುಡ್ ಲೈಫ್ ಚಾಕಲೇಟ್ ಮತ್ತು ಗುಡ್ ಲೈಫ್ ಸುವಾಸಿತ ಹಾಲು ವಿತರಿಸಲಾಯಿತು.
ಬಳಿಕ ಸಭಾ ಕಾರ್ಯಕ್ರಮ ನಡೆಸಲಾಯಿತು.
ವೇದಿಕೆಯಲ್ಲಿ SDMC ಅಧ್ಯಕ್ಷರು, ನಿವೃತ್ತ ಸೈನಿಕರು, ದತ್ತಿನಿಧಿ ದಾನಿಗಳು ಹಾಗೂ ದೀಪಾಂಜಲಿ ಮಂಡಳಿಯ ಅಧ್ಯಕ್ಷರು, ಶಿಕ್ಷಕವೃಂದ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಿಗೆ ದತ್ತಿನಿಧಿ ಹಾಗೂ ಆಜಾದಿಕ ಅಮೃತ ಮಹೋತ್ಸವದ ಪ್ರಯುಕ್ತ ನಡೆದ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ನೀಡಲಾಯಿತು. ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ರಘುನಾಥ ದೈಹಿಕ ಶಿಕ್ಷಣ ಶಿಕ್ಷಕರು ಸ್ವಾಗತಿಸಿದರು, ದತ್ತಿನಿಧಿ ಹಾಗೂ ಬಹುಮಾನ ಪಡೆದವರ ಪಟ್ಟಿಯನ್ನು ಕು. ರಮ್ಯಶ್ರೀ ಯವರು ವಾಚಿಸಿದರು. ಹಾಗೂ ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮವನ್ನು ಶ್ರೀಮತಿ ವಿದ್ಯಾಶ್ರೀ ಯವರು ನೆರವೇರಿಸಿದರು.
ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ತುಳಸಿ ಕೆ ವಂದಿಸಿದರು. ಕಾರ್ಯಕ್ರಮದ ಒಟ್ಟು ನಿರ್ವಹಣೆಯನ್ನು ಶ್ರೀಮತಿ ಪವಿತ್ರ ನಿರ್ವಹಿಸಿದರು. ಕಾರ್ಯಕ್ರಮದಲ್ಲಿ ಸಿಹಿತಿಂಡಿಯ ವ್ಯವಸ್ಥೆಯನ್ನು ವಿವಿಧ ಸಂಘ ಸಂಸ್ಥೆಯವರು ಮಾಡಿದರು. ಹಾಗೂ ಮಧ್ಯಾಹ್ನದ ಭೋಜನ ಶಂಕರ್ ಹಾಗೂ ಮನೆಯವರು ನೀಡಿದರು.
ಈ ಸಂದರ್ಭದಲ್ಲಿ 75 ನೇ ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವದ ಪ್ರಯುಕ್ತ 75 ವಿವಿಧ ಬಗೆಯ ಗಿಡ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.