ಸುಬ್ರಹ್ಮಣ್ಯ ಪರ್ವತಮುಖಿ ಅಂಗನವಾಡಿ ಕೇಂದ್ರದಲ್ಲಿ ಸ್ವಾತಂತ್ರೋತ್ಸವ

0
96

 

75 ನೇ ಸ್ವಾತಂತ್ರ ದಿನಾಚರಣೆಯನ್ನು ಸುಬ್ರಹ್ಮಣ್ಯದ ಪರ್ವತಮುಖಿ ಅಂಗನವಾಡಿ ಕೇಂದ್ರದಲ್ಲಿ ಆ.15 ರಂದು ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಮೊದಲಿಗೆ ಲಯನ್ಸ್ ಕ್ಲಬ್ ಸುಬ್ರಹ್ಮಣ್ಯಇದರ ವತಿಯಿಂದ ದಿ.ಕುಕ್ಕಣ್ಣ ರೈ ಹಾಗೂ ದಿ .ಶ್ರೀಮತಿ ಸೀತಮ್ಮ ರೈ ಯವರ ಸ್ಮರಣಾರ್ಥ ಮೋಹನ್ ದಾಸ್ ರೈ ದೋಣಿಮಕ್ಕಿ ಕೊಡುಗೆಯಾಗಿ ನೀಡಿದ ನೂತನ ಧ್ವಜ ಸ್ತಂಭ ಉದ್ಘಾಟನೆ ನೆರವೇರಿಸಲಾಯಿತು . ಧ್ವಜ ಸ್ತಂಭದ ಉದ್ಘಾಟನೆಯನ್ನು ಲಯನ್ಸ್ ಕ್ಲಬ್ ಇದರ ಅಧ್ಯಕ್ಷರಾದ ರಂಗಯ್ಯ ಶೆಟ್ಟಿಗಾರ್ ಮಾಡಿ ಧ್ವಜಾರೋಹಣ ಮಾಡಿದರು. ಡಾ । ಶಿವಕುಮಾರ್ ಹೋಸೋಳಿಕೆ ಸ್ವಾತಂತ್ರ್ಯೋತ್ಸವದ ಬಗ್ಗೆ ಮಾತಾಡಿದರು. ಕಾರ್ಯಕ್ರಮದಲ್ಲಿ ರಂಗಯ್ಯ ಶೆಟ್ಟಿಗಾರ್ ಮತ್ತು ಡಾ। ರವಿ ಕಕ್ಕೆಪದವು ಇವರನ್ನು ಗೌರವಿಸಲಾಯಿತು. ಅಂಗನವಾಡಿ ಕಾರ್ಯಕರ್ತೆ ಸುಗುಣ. ವಿ.ಕಾರ್ಯಕ್ರಮ ನಿರ್ವಹಿಸಿದರು. ಪೋಷಕರು, ಮಕ್ಕಳು ಹಾಗೂ ಊರಿನ ಗಣ್ಯರು ಭಾಗವಹಿಸಿದರು.

LEAVE A REPLY

Please enter your comment!
Please enter your name here