ಸೋಣಂಗೇರಿ ಸ.ಹಿ.ಪ್ರಾ. ಶಾಲೆಯಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ

0

 

ಜಾಲ್ಸೂರು ಗ್ರಾಮದ ಸೋಣಂಗೇರಿ ಸ.ಹಿ.ಪ್ರಾ.ಶಾಲೆಯಲ್ಲಿ ಸ್ವಾತಂತ್ರ್ಯೋತ್ಸವ ಅಮೃತಮಹೋತ್ಸವನ್ನು ಆ.15ರಂದು ಆಚರಿಸಲಾಯಿತು.

ಶಾಲಾ ಎಸ್.ಡಿ.ಎಂ. ಸಿ. ಅಧ್ಯಕ್ಷೆ ಶ್ರೀಮತಿ ಪ್ರೇಮ ಸುರೇಶ್ ರೈ ಅವರು ಧ್ವಜಾರೋಹಣ ಮಾಡಿದರು. ಈ ಸಂದರ್ಭದಲ್ಲಿ ಸುಳ್ಯದ ಶಾರದಾ ಪದವಿ ಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲೆ ಶ್ರೀಮತಿ ತಂಗಮ್ಮ , ನಿವೃತ್ತ ಅಧ್ಯಾಪಕ ಅರುಳಪ್ಪನ್ ಮಾಸ್ತರ್, ಜಾಲ್ಸೂರು ಗ್ರಾ.ಪಂ.ಸದಸ್ಯರಾದ ಶಿವಪ್ರಸಾದ್ ಕುಕ್ಕಂದೂರು, ಈಶ್ವರ ನಾಯ್ಕ ಕುಕ್ಕಂದೂರು, ಶ್ರೀಮತಿ ದೀಪ ಅಜಕಳಮೂಲೆ, ಮಾಜಿ ಗ್ರಾ.ಪಂ. ಸದಸ್ಯರಾದ ಶಿವಕುಮಾರ್ ಕುಕ್ಕಂದೂರು, ಸುಬ್ಬಯ್ಯ ಗೌಡ ನಾಯರ್ ಹಿತ್ಲು, ಮಲ್ಲಿಕಾ ಕುಕ್ಕಂದೂರು, ಶ್ರೀಮತಿ ಸುಮಂಗಲಿ ನಾಯಕ್, ಶಾಲಾ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ನಿರಂಜನ ಮಿತ್ತಮಜಲು, ಹಿರಿಯರಾದ ಕೆ.ಕೆ. ಬಾಲಕೃಷ್ಣ , ಗೋಪಾಲಕೃಷ್ಣ ಗೌಡ ಸುತ್ತುಕೋಟೆ, ಶಾಂತಪ್ಪಗೌಡ ಮೋಂಟಡ್ಕ, ಚಿದಾನಂದ ಕುಕ್ಕಂದೂರು, ಗಿರಿಧರ ಗೌಡ ನಾಯರ್ ಹಿತ್ಲು , ಮಿತ್ರಬಳಗದ ಸದಸ್ಯರುಗಳಾದ ಯೋಗೀಶ್ ಎಸ್.ಕೆ., ಸತ್ಯಶಾಂತಿ ತ್ಯಾಗಮೂರ್ತಿ, ಶಾಲಾ ಅಧ್ಯಾಪಕರುಗಳು, ವಿದ್ಯಾರ್ಥಿಗಳ ಪೋಷಕರುಗಳು, ಸ್ತ್ರೀಶಕ್ತಿ ಸಂಘದ ಸದಸ್ಯರುಗಳು ಹಾಗೂ ಊರವರು ಉಪಸ್ಥಿತರಿದ್ದರು.