ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಂಭ್ರಮ

0

 

ಬಳ್ಪದಲ್ಲೊಂದು ‌ವಿಶೇಷ ಕಾರ್ಯಕ್ರಮ

ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಂಭ್ರಮದಲ್ಲಿ ಗ್ರಾಮ ವಿಕಾಸ ಪ್ರತಿಷ್ಠಾನ ಬಳ್ಪ -ಕೇನ್ಯ ಇದರ ವತಿಯಿಂದ ಬಳ್ಪ ಪರಿಸರದ ಶಾಲೆಯ ವಿದ್ಯಾರ್ಥಿಗಳಿಗೆ ವಿಶೇಷ ಕಾರ್ಯಕ್ರಮವೊಂದನ್ನು ಆಯೋಜಿಸಿದ್ದರು. ಬಳ್ಪ, ಬೀದಿಗುಡ್ಡೆ ಸಂಪ್ಯಾಡಿ,ಎಣ್ಣೆಮಜಲು,ಕೇನ್ಯ,
ಪೇರಳಕಟ್ಟೆ,ನೇಲ್ಯಡ್ಕ ಶಾಲೆಯ ವಿದ್ಯಾರ್ಥಿಗಳು ಅವರ ಪರಿಸರದ ಪ್ರದೇಶದಲ್ಲಿ ಬಿದ್ದಿರುವ ಪ್ಲಾಸ್ಟಿಕ್ ಸಂಗ್ರಹಿಸುವುದು.

 

 

ವಿಶೇಷವಾಗಿ ಅತೀ ಹೆಚ್ಚು ಸಂಗ್ರಹಿಸಿದ ಅನೇಕ ವಿದ್ಯಾರ್ಥಿಗಳಿಗೆ ಪುಸ್ತಕ ಬಹುಮಾನ ನೀಡಲಾಯಿತು. ಒಟ್ಟು ಸುಮಾರು 400 ಕೆ.ಜಿ. ಪ್ಲಾಸ್ಟಿಕ್ ಸಂಗ್ರಹವಾಗಿದ್ದು ಪ್ಲಾಸ್ಟಿಕ್ ಮುಕ್ತ ಪರಿಸರ ಸ್ವಚ್ಛತೆಯಲ್ಲಿ ಬಹಳಷ್ಟು ಪರಿಣಾಮ ಬೀರುವ ಕಾರ್ಯಕ್ರಮ ಇದಾಗಿತ್ತು.

ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂಭ್ರಮದೊಂದಿಗೆ ಸ್ವಚ್ಚ ಪರಿಸರದ ಕುರಿತು ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು.ಗ್ರಾಮ ವಿಕಾಸ
ಪ್ರತಿಷ್ಠಾನದ ಅಧ್ಯಕ್ಷ ವಿನೋದ್ ಬೊಳ್ಮಲೆ, ಪ್ರತಿಷ್ಠಾನದ
ಸದಸ್ಯರು ಪಾಲ್ಗೊಂಡಿದ್ದರು.ಶಿಕ್ಷಕರು, ಪೋಷಕರು ಸಹಕರಿಸಿದರು.