ಯೇನೆಕಲ್ಲು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 75ನೇ ಸ್ವಾತಂತ್ರ್ಯೋತ್ಸವ

0

ಯೇನೆಕಲ್ಲು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 75ನೇ ಸ್ವಾತಂತ್ರ್ಯೋತ್ಸವನ್ನು ಆ. 15 ರಂದು ಆಚರಿಸಲಾಯಿತು.

ಹಿರಿಯ ನಿವೃತ್ತ ಯೋಧ ವಾಸುದೇವ ಗೌಡ ಪರಮಲೆ ಧ್ವಜಾರೋಹಣ ನೆರವೇರಿಸಿದರು. ನಂತರದ ಸಭಾ ಕಾರ್ಯಕ್ರಮದಲ್ಲಿ ಮಾಜಿ ಸೈನಿಕರಾದ ವಾಸುದೇವ ಗೌಡ ಪರಮಲೆ ಮತ್ತು ಹರಿಶ್ಚಂದ್ರ ಪರಮಲೆ, ಸದ್ರಿ ಶಾಲೆಯಲ್ಲಿ‌ ಕಲಿತ ಹಿರಿಯರಾದ 82 ರ ಹರೆಯದ ನಿವೃತ್ತ ಅಂಚೆ ‌ಪೇದೆ ಸುಬ್ಬಯ್ಯ ಗೌಡ ‌ಅಂಬೆಕಲ್ಲು ಮತ್ತು ದಾನಿಗಳಾದ ರುಕ್ಮಯ್ಯಗೌಡ ಮಲ್ಲಾರ‌ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಹಿರಿಯರಾದ ಸೋಮಪ್ಪ ದೋಣಿ ಮನೆ, ಹಿರಿಯ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಶಿವಪ್ರಸಾದ್ ಮಾದನಮನೆ, ಶಾಲಾ ಎಸ್.ಡಿ .ಎಂ ಸಿ .ಅಧ್ಯಕ್ಷರಾದ ಅಶೋಕ್ ಕುಮಾರ್ ಅಂಬೆಕಲ್ಲು, ಶಿಕ್ಷಕ ವೃಂದ, ಪೋಷಕ ಬಂಧುಗಳು, ಎಸ್.ಡಿ.ಎಂ.ಸಿ ಸದಸ್ಯರು, ಅಂಗನವಾಡಿ ಕಾರ್ಯಕರ್ತೆ ಜಯಲಕ್ಷ್ಮಿ, ಪುಟಾಣಿಗಳು ‌‌ಉಪಸ್ಧಿತರಿದ್ದರು. ಮುಖ್ಯ ಶಿಕ್ಷಕಿ ಚಂದ್ರಿಕಾ. ಬಿ.ಸಿ, ಸ್ವಾಗತಿಸಿ, ಶಿಕ್ಷಕಿ ಕಮಲ ಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶಿಕ್ಷಕಿ ಅಂಬಿಕಾ ಕಾರ್ಯಕ್ರಮ ‌ನಿರೂಪಿಸಿ, ಶಿಕ್ಷಕಿ ರತ್ನಾವತಿ ಯವರು ವಂದಿಸಿದರು. ವಿದ್ಯಾರ್ಥಿಗಳಿಂದ ಹಾಗೂ ಪೋಷಕರಿಂದ ದೇಶಭಕ್ತಿ ಗೀತಗಾಯನ ಕಾರ್ಯಕ್ರಮ ನಡೆಯಿತು.