ಗುತ್ತಿಗಾರು : ರಕ್ತದಾನ ಮೂಲಕ ಆಜಾದಿ ಕಾ ಸ್ವಾತಂತ್ರ್ಯೋತ್ಸವ ಅಮೃತ್ ಮಹೋತ್ಸವದ ಆಚರಣೆ

0

 

83 ರಕ್ತದಾನಿಗಳಿಗೆ ಸನ್ಮಾನ

ಸಾರ್ವಜನಿಕ ದೇಣಿಗೆಯ ಖರ್ಚು ವೆಚ್ಚಗಳ ಲೆಕ್ಕಪತ್ರ ಮಂಡನೆ-ಅನುಮೋದನೆ

ದಾನಿಗಳಿಂದ ಸಹಾಯಧನ ವಿತರಣೆ

ಗುತ್ತಿಗಾರಿನ ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್, ಅಮರ ಸೇನಾ ರಕ್ತ ದಾನಿಗಳ ತಂಡ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಸುಳ್ಯ,ಅಮರ ಯೋಗ ಕೇಂದ್ರ ಗುತ್ತಿಗಾರು. ಭಾರತೀಯ ರೆಡ್ ಕ್ರಾಸ್ ಸಂಸ್ಥೆ ದ. ಕ. ಜಿಲ್ಲೆ, ಪ್ರಾಥಮಿಕ ಆರೋಗ್ಯ ಕೇಂದ್ರ ಗುತ್ತಿಗಾರು, ಗ್ರಾಮ ಪಂಚಾಯತ್ ಗುತ್ತಿಗಾರು ಇವುಗಳ ಸಹಯೋಗದಲ್ಲಿ ಅಮೃತ ಮಹೋತ್ಸವ ಸ್ವತಂತ್ರ್ಯೋತ್ಸವದ ಅಂಗವಾಗಿ ಆಜಾದಿ ಕಾ ಅಮೃತ ಮಹೋತ್ಸವವನ್ನು ರಕ್ತದಾನ ಶಿಬಿರವನ್ನು 83 ಜನ ರಕ್ತದಾನ ಮಾಡುವ ಮೂಲಕ ದೇಶದ ಆರೋಗ್ಯ ಮತ್ತು ಅಭಿವೃದ್ಧಿಗೆ ವಿಶೇಷ ಕೊಡುಗೆ ನೀಡಲಾಯಿತು.

ಟ್ರಸ್ಟ್ ವತಿಯಿಂದ ತುರ್ತು ಸಂದರ್ಭದಲ್ಲಿ ರಕ್ತದಾನ ಮಾಡಿದ ಶ್ರವಣ್ ಸಂಪ್ಯಾಡಿ ಸೇರಿದಂತೆ 84 ರಕ್ತದಾನಿಗಳನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮವು ಆ. 14 ರಂದು ಗುತ್ತಿಗಾರು ಗ್ರಾಮ ಪಂಚಾಯತ್ ಸಭಾಭವನದಲ್ಲಿ ನಡೆಯಿತು.

ಇದೇ ಸಂದರ್ಭದಲ್ಲಿ ಟ್ರಸ್ಟ್ ವತಿಯಿಂದ ಆಂಬುಲೆನ್ಸ್ ಖರೀದಿಗಾಗಿ ಸಂಗ್ರಹಣೆ ಮಾಡಿ ಆಂಬುಲೆನ್ಸ್ ಖರೀದಿಸಿದ್ದ ಲೆಕ್ಕ ಪತ್ರಗಳನ್ನು ಕಾರ್ಯಕ್ರಮದ ಉದ್ಘಾಟನಾ ಸಂದರ್ಭದಲ್ಲಿ ವಾಚಿಸಿ ಸಾರ್ವಜನಿಕರು ಮತ್ತು ಸಭೆಯ ಅತಿಥಿಗಳಿಂದ ಅನುಭೋದನೆ ಪಡೆಯಲಾಯಿತು.

ಖರ್ಚು ವೆಚ್ಚಗಳನ್ನು ಹೋಗಲಾಗಿ ಒಟ್ಟು ಟ್ರಸ್ಟ್ ನಲ್ಲಿ 41071 ಉಳಿಕೆಯಾಗಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು ಭಾರತೀಯ ರೆಡ್ ಕ್ರಾಸ್ ಸುಳ್ಯ ತಾಲೂಕು ಅಧ್ಯಕ್ಷ ಪಿ. ಬಿ. ಸುಧಾಕರ್ ರೈ, ಕೋಶಾಧಿಕಾರಿ ಸಿ. ಎ. ಗಣೇಶ್ ಭಟ್, ಹಿರಿಯ ಆರೋಗ್ಯ ಸಹಾಯಕಿ ಪದ್ಮವೇಣಿ , ಗುತ್ತಿಗಾರು ರಬ್ಬರ್ ಬೆ. ಸಂ. ಸಂಘದ ಅಧ್ಯಕ್ಷ ನಿತ್ಯಾನಂದ ಮುಂಡೋಡಿ, ಗ್ರಾಮ ಪಂಚಾಯತ್ ಸದಸ್ಯರುಗಳಾದ ವೆಂಕಟ್ ವಳಲಂಬೆ, ಜಗದೀಶ್ ಬಾಕಿಲ, ಲತಾ ರವಿಕುಮಾರ್, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಭರತ್ ಮುಂಡೋಡಿ, ನಿವೃತ್ತ ಯೋಧರಾದ ಸೋಮಶೇಖರ್ ಮಾವಜಿ, ಮಹೇಶ್ ಕೊಪ್ಪತಡ್ಕ,ಮಾಧವ ಯೆರ್ದಡ್ಕ, ಮೋಹನ್ ಮುಕ್ಕೂರ್ ಎಲ್ಲಾ ಅತಿಥಿಗಳು ಜಂಟಿ ಆಗಿ ಉದ್ಘಾಟನೆ ಮಾಡಿದರು.

ಈ ಸಂದರ್ಭದಲ್ಲಿ ಟ್ರಸ್ಟ್ ಅಧ್ಯಕ್ಷ ಚಂದ್ರಶೇಖರ ಕಡೋಡಿ, ಕೋಶಾಧಿಕಾರಿ ಸುಕುಮಾರ್ ಕೋಡೊಂಬು, ಕಾರ್ಯದರ್ಶಿ ಯತೀಂದ್ರ ಕಟ್ಟೆಕೋಡಿ ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ನಿವೃತ್ತ ಯೋಧ ಮಹೇಶ್ ಮತ್ತು ಅನಿತಾ ದಂಪತಿಗಳು ಮತ್ತು ರೆಡ್ ಕ್ರಾಸ್ ವತಿಯಿಂದ ಸಭಾಪತಿ ಪಿ. ಬಿ ದಿವಾಕರ ರೈ ಟ್ರಸ್ಟ್ ಗೆ ಸಹಾಯ ಧನ ಹಸ್ತಾಂತರ ಮಾಡಿದರು. ಟ್ರಸ್ಟ್ ವತಿಯಿಂದ ನಡೆಯುವ 2ನೇ ರಕ್ತ ದಾನ ಶಿಬಿರ ಇದಾಗಿದ್ದು,

ಜೊತೆಯಾಗಿ ರಕ್ತದಾನ ಮಾಡಿದ ದಂಪತಿಗಳು, ಮಹೇಶ್ ಕೊಪ್ಪತಡ್ಕ, ಅನಿತಾ ಮಹೇಶ್ ಕೊಪ್ಪತಡ್ಕ, ಕೃಷ್ಣ ಕುಮಾರ್ ಪಿಲಿಂಜ, ಮಂಜುಳಾ ಕೃಷ್ಣ ಕುಮಾರ್ ಪಿಲಿಂಜ, ಸುಬ್ರಮಣ್ಯ ಆರೋಗ್ಯ ಇಲಾಖೆ ಸಿಬ್ಬಂದಿ ಬಸವರಾಜ್ ಮತ್ತು ಅವರ ಮಗ ನಂದೀಶ್ ಚಕ್ರದ. ಇವರುಗಳು ಒಂದು ಮನೆಯಿಂದ ಇಬ್ಬರು ರಕ್ತದಾನ ಮಾಡಿರುವುದು ಮತ್ತು 100ಕ್ಕೂ ಹೆಚ್ಚು ಬಾರಿ ರಕ್ತ ದಾನ ಮಾಡಿದ ತಾಲೂಕಿನ ಹೆಮ್ಮೆಯ ರಕ್ತದಾನಿ ಸುಧಾಕರ್ ರೈ ಅವರು ಕೂಡ ರಕ್ತದಾನ ಮಾಡಿದ್ದು ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿದರು.

ಬಳಿಕ ನಡೆದ ಸಮಾರೋಪ ಸಮಾರಂಭದಲ್ಲಿ ಅತಿಥಿಗಳಾಗಿ ಮೀನಾಕ್ಷಿ ಉಮೇಶ್ ಮುಂಡೋಡಿ, ಸುದ್ದಿ ಸಮೂಹ ಸಂಸ್ಥೆ ಕಚೇರಿ ವ್ಯವಸ್ಥಾಪಕ ಯಶ್ವಿತ್ ಕಾಳಮ್ಮನೆ, ಅಮರ ಸಂಜೀವಿನಿ ಘಟಕ ಅಧ್ಯಕ್ಷೆ ದಿವ್ಯ ಸುಜನ್ ಗುಡ್ಡೆಮನೆ, ನವೀನ್ ಬಾಳುಗೋಡು, ರಾಜೇಶ್ ಉತ್ರಂಬೆ, ಮೋಹನ್ ದಾಸ್ ಶಿರಾಜೆ, ಕೀರ್ತನ್ ಕೊಡಪಾಲ, ವಿಶ್ವನಾಥ್ ಛತ್ರಪ್ಪಾಡಿ , ರೆಡ್ ಕ್ರಾಸ್ ಸಂಸ್ಥೆ ಮಂಗಳೂರು ಇದರ ವತಿಯಿಂದ ಪ್ರವೀಣ್ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಕುಮಾರಿ ಹವೀಕ್ಷಾ ಗುತ್ತಿಗಾರ್ ಪ್ರಾರ್ಥನೆ ನೆರವೇರಿಸಿದರು.
ನಿರಂತ್ ದೇವಸ್ಯ ಮತ್ತು ಸಿಂಚನ ತುಪ್ಪದ ಮನೆ ಕಾರ್ಯಕ್ರಮ ನಿರೂಪಿಸಿದರು.