ಸುಳ್ಯ ಸೈಂಟ್ ಜೋಸೆಫ್ ಶಾಲೆಯಲ್ಲಿ ಶ್ರೀಕೃಷ್ಣಾಷ್ಟಮಿ ಆಚರಣೆ

0

 

ಪುಟಾಣಿಗಳಿಗೆ ಮುದ್ದು ಕೃಷ್ಣ ವೇಷ ಸ್ಪರ್ಧೆ

ಸೈಂಟ್ ಜೋಸೆಫ್ ಶಾಲೆಯಲ್ಲಿ ಶ್ರೀಕೃಷ್ಣಜನ್ಮಾಷ್ಠಮಿಯನ್ನು ಆ.17 ರಂದು ಆಚರಿಸಲಾಯಿತು. ಶಾಲಾ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಬಿನೋಮರವರು ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ವಿದ್ಯುಕ್ತ ಚಾಲನೆಯನ್ನು ನೀಡಿದರು.
ವೇದಿಕೆಯಲ್ಲಿ ಪೂರ್ವ ಪ್ರಾಥಮಿಕ ಶಾಲಾ ವಿಭಾಗದ ಪೋಷಕ ಸಮಿತಿಯ ಅಧ್ಯಕ್ಷರಾದ ಡಾ. ಅನುರಾಧ ಕುರುಂಜಿಯವರು ಹಾಗೂ ಶಾಲಾ ಶಿಕ್ಷಕಿ ಶ್ರೀಮತಿ ಚೈತ್ರ ರವರು ಉಪಸ್ಥಿತರಿದ್ದರು.
ಕಾರ್ಯಕ್ರಮದ ವಿಶೇಷತೆ ಕುರಿತು ಸಹಶಿಕ್ಷಕಿ ಶ್ರೀಮತಿ ಆಶಾರವರು ಮಾತನಾಡಿದರು.ನಂತರ ಕಾರ್ಯಕ್ರಮದ ಅಂಗವಾಗಿ ಪೂರ್ವ ಪ್ರಾಥಮಿಕ ವಿಭಾಗದ ಪುಟಾಣಿಗಳಿಗೆ ಮುದ್ದುಕೃಷ್ಣ ವೇಷ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಯಿತು . 53 ವಿದ್ಯಾರ್ಥಿಗಳು ಕೃಷ್ಣ ವೇಷ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ತೀರ್ಪುಗಾರರಾಗಿ ಸಹ ಶಿಕ್ಷಕರಾದ ಭಾನುಪ್ರಕಾಶ್, ಶ್ರೀಮತಿ ವಿದ್ಯಾ ಸರಸ್ವತಿ, ಹಾಗೂ ಶ್ರೀಮತಿ ಕವಿತಾ ಡಿಸೋಜರವರು ಸಹಕರಿಸಿದರು.ಈ ಸ್ಪರ್ಧೆಯಲ್ಲಿ ಎಲ್.ಕೆ.ಜಿ. ವಿಭಾಗದಲ್ಲಿ ಫಾತಿಮಾ ಹೆಝ ಪ್ರಥಮ ಸ್ಥಾನವನ್ನು ಆರ್ವಿ ದ್ವಿತೀಯ ಸ್ಥಾನವನ್ನು ಅಂಶಾಲ್ ಬಿಳಿನೆಲೆ ತೃತೀಯ ಸ್ಥಾನವನ್ನು ಹಾಗೂ ಯು.ಕೆ.ಜಿ.ವಿಭಾಗದಿಂದ ಆರಾಧ್ಯ ಪ್ರಥಮ ಸ್ಥಾನ, ರಿಶಾಂಕ ದ್ವಿತೀಯ ಸ್ಥಾನ ವತ್ಸ್ ಆಚಾರ್ಯ ತೃತೀಯ ಸ್ಥಾನವನ್ನು ಪಡೆದುಕೊಂಡರು. ಭಾಗವಹಿಸಿದ ಎಲ್ಲಾ ಪುಟಾಣಿಗಳಿಗೆ ಪ್ರೋತ್ಸಾಹಕ ಬಹುಮಾನವನ್ನು ನೀಡಿ ಗೌರವಿಸಲಾಯಿತು.ಈ ಕಾರ್ಯಕ್ರಮದಲ್ಲಿ ಪೂರ್ವ ಪ್ರಾಥಮಿಕ ವಿಭಾಗದ ಶಿಕ್ಷಕಿಯರಾದ ಮರಿಯ ಕ್ರಾಸ್ತ, ರೇಷ್ಮಾ ಮಾಡ್ತಾ ಹಾಗೂ ಸುಮತಿಯವರು ಸಹಕರಿಸಿದರು.