ಸಂಪಾಜೆ :  ಪೇರಡ್ಕ ಮಸೀದಿ ಹಾಗು ದರ್ಗಾಕ್ಕೆ ಕೆ.ಪಿ.ಸಿ.ಸಿ ಸಂಯೋಜಕ ನಂದಕುಮಾರ್ ಭೇಟಿ

0

 

ನೆರೆಯಿಂದ ಹಾನಿಯಾದ ಸಂಪಾಜೆ ಗ್ರಾಮದ ಪೇರಡ್ಕ ಮುಹಿದ್ದೀನ್ ಜುಮಾಮಸೀದಿ ಮತ್ತು ಇತಿಹಾಸ ಪ್ರಸಿದ್ಧ ವಲಿಯುಲ್ಲಾಹಿ ದರ್ಗಾ ಶರೀಫ್‌ಗೆ ಕೆ.ಪಿ.ಸಿ.ಸಿ ಸಂಯೋಜಕ ನಂದಕುಮಾರ್‌ರವರು ಭೇಟಿ ನೀಡಿ ನೆರೆಯಿಂದ ಹಾನಿಯಾದ ಪ್ರದೇಶವನ್ನು ವೀಕ್ಷಿಸಿದರು. ಇತ್ತೀಚೆಗೆ ಸುರಿದ ಭಾರಿ ಮಳೆಯಿಂದ ಮಸೀದಿಯ ಸುತ್ತಲು ನಿರ್ಮಿಸಿದ ಆವರಣ ಗೋಡೆಯು ನೆರೆಗೆ ಸಂಪೂರ್ಣ ಕೊಚ್ಚಿ ಹೋಗಿ ಸುಮಾರು ರೂ. 1೦ ಲಕ್ಷ ನಷ್ಟ ಉಂಟಾಗಿರುವ ಬಗ್ಗೆ ಮಾಹಿತಿ ಪಡೆದುಕೊಂಡರು. ಈ ಸಂಧರ್ಭದಲ್ಲಿ ನಂದಕುಮಾರ್‌ರವರನ್ನು ಮಸೀದಿಯ ಗೌರವಾಧ್ಯಕ್ಷ ಟಿ.ಎಂ ಶಾಹೀದ್ ತೆಕ್ಕಿಲ್ ಶಾಲು ಹೊದಿಸಿ ಸನ್ಮಾನಿಸಿದರು.

 

ಖತೀಬರಾದ ರಿಯಾಝ್ ಪೈಝಿ ಎಮ್ಮೆಮಾಡು ದುವಾ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಮಡಿಕೇರಿ ಬ್ಲಾಕ್ ಕಾಂಗ್ರೇಸ್ ಉಪಾಧ್ಯಕ್ಷ ವಸಂತ, ಸಂಪಾಜೆ ಗ್ರಾಮ ಪಂಚಾಯತ್ ಸದಸ್ಯ ಅಬುಸಾಲಿ ಗೂನಡ್ಕ, ಮಸೀದಿಯ ಕಾರ್ಯದರ್ಶಿ ಟಿ.ಎಂ ಅಬ್ದುಲ್ ರಜಾಕ್ ತೆಕ್ಕಿಲ್, ಸಹಾಯಕ ಅಧ್ಯಾಪಕ ನೂರುದ್ದೀನ್ ಮುಸ್ಲಿಯಾರ್, ಹಂಸ ಮುಸ್ಲಿಯಾರ್, ಮಹಮ್ಮದ್‌ಕುಂಞ ತೆಕ್ಕಿಲ್ ಪೇರಡ್ಕ, ಅಶ್ರಪ್ ತೆಕ್ಕಿಲ್ ಪೇರಡ್ಕ, ತಾಜುದ್ಧೀನ್ ಅರಂತೋಡು, ಟಿ.ಎ.ಜುಬೈರ್ ತೆಕ್ಕಿಲ್ ಪೇರಡ್ಕ, ಟಿ.ಎ.ಸಾದುಮಾನ್ ತೆಕ್ಕಿಲ್ ಪೇರಡ್ಕ, ಮೊದಲಾದವರು ಉಪಸ್ಥಿತರಿದ್ದರು.