ಕೆ.ವಿ.ಜಿ.ಪಾಲಿಟೆಕ್ನಿಕ್ : ಸದ್ಭಾವನಾ ದಿನಾಚರಣೆ

0

 

 

ಕುರುಂಜಿ ವೆಂಕಟ್ರಮಣ ಗೌಡ ಪಾಲಿಟೆಕ್ನಿಕ್ ವತಿಯಿಂದ ರಾಷ್ಟ್ರೀಯ ಸೇವಾ ಯೋಜನೆ ಹಾಗೂ ಯುವ ರೆಡ್ ಕ್ರಾಸ್ ಘಟಕಗಳ ಸಹಯೋಗದಲ್ಲಿ ಸದ್ಭಾವನಾ ದಿನಾಚರಣೆ ಆ. 19ರಂದು ನಡೆಯಿತು. ಕಾಲೇಜಿನ ಪ್ರಾಂಶುಪಾಲ ಜಯಪ್ರಕಾಶ ಕೆ ಸದ್ಭಾವನಾ ಪ್ರತಿಜ್ಞಾ ವಿಧಿ ಬೋಧಿಸಿ ಮಾತನಾಡಿ ಪ್ರಸ್ತುತ ಕಾಲಘಟ್ಟದಲ್ಲಿ ಪರಸ್ಪರ ಸದ್ಭಾವನೆ ಬಹಳ ಮುಖ್ಯವಾಗಿದೆ.

 

ಜಾತಿ ಮತಗಳ ಬೇಧಬಾವವಿಲ್ಲದೇ ಎಲ್ಲರೂ ಸಮಾನರಾಗಿ ಪರಸ್ಪರ ಹೊಂದಿಕೊಂಡು ನಡೆದರೆ ಸದ್ರಢ ಸಮಾಜ ನಿರ್ಮಾಣ ಸಾಧ್ಯ . ನಮ್ಮ ಸಂಸ್ಥೆಯ ಸ್ಥಾಪಕಾಧ್ಯಕ್ಷರಾದ ಡಾ. ಕುರುಂಜಿ ವೆಂಕಟ್ರಮಣ ಗೌಡರು ಮೊದಲು ಪಡೆದ ಪ್ರಶಸ್ತಿಯೇ ಸದ್ಭಾವನಾ ಪ್ರಶಸ್ತಿ. ಯಾಕೆಂದರೆ ಪರಸ್ಪರ ಸೌಹಾರ್ಧತೆಗೆ ಅವರು ಜೀವಂತ ಉದಾಹರಣೆಯಾಗಿದ್ದರು. ‌ ಈಗ ನಮ್ಮ ಸಂಸ್ಥೆಯ ಆಡಳಿತ ಪರಿಷತ್ ನ ಅಧ್ಯಕ್ಷರಾಗಿರುವ ಡಾ. ರೇಣುಕಾ ಪ್ರಸಾದ್ ಕೆ.ವಿ.ಯವರೂ ಕೂಡಾ ಅದೇ ದಾರಿಯಲ್ಲಿ ಮುನ್ನಡೆಯುತ್ತಿದ್ದಾರೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಎನ್ನೆಸ್ಸೆಸ್ ಕಾರ್ಯಕ್ರಮಾಧಿಕಾರಿ ಸುನಿಲ್ ಕುಮಾರ್ ಎನ್.ಪಿ, ಉಪನ್ಯಾಸಕರಾದ ಫಾಲಚಂದ್ರ ವೈ.ವಿ, ವಿವೇಕ್ ಪಿ, ಶಿಕ್ಷಕರಾದ ಪ್ರಮೋದ್ ಬಿ.ಡಿ, ದಿವಾಕರ ಕೆ. ಧರ್ಮಪಾಲ ಮೊದಲಾದವರು ಉಪಸ್ಥಿತರಿದ್ದರು. ಎನ್ನೆಸ್ಸೆಸ್ ಕಾರ್ಯಕ್ರಮಾಧಿಕಾರಿ ಚಂದ್ರಶೇಖರ ಬಿಳಿನೆಲೆ ಸ್ವಾಗತಿಸಿ ವಂದಿಸಿದರು.