ಇಂಡಿಯನ್ ಗ್ರಾನೈ ಟ್ & ಟೈಲ್ಸ್ ಮಾಲಕ ಅಶ್ರಫ್‌ರವರಿಗೆ ಅತ್ಯುತ್ತಮ ಕೃಷಿಕ ಹಾಗೂ ಹೈನುಗಾರಿಕೆ ಪ್ರಶಸ್ತಿ

0

 

ದೇಲಂಪಾಡಿ ಗ್ರಾಮ ಪಂಚಾಯತ್ ವತಿಯಿಂದ ನೀಡಲಾಗುವ ಅತ್ಯುತ್ತಮ ಕೃಷಿಕ ಹಾಗೂ ಹೈನುಗಾರಿಕೆ ಪ್ರಶಸ್ತಿಯು ಸುಳ್ಯದ ಇಂಡಿಯನ್ ಗ್ರಾನೈಟ್ಸ್ & ಟೈಲ್ಸ್ ಮಾಲಕ ಕೃಷಿಕರಾದ ಸಿ.ಹೆಚ್. ಮಹಮ್ಮದ್ ಅಶ್ರಫ್ ಚಂಡಮೂಲೆ ಅವರಿಗೆ ಆ.೧೭ರಂದು ಗ್ರಾಮ ಪಂಚಾಯತ್‌ನಲ್ಲಿ ನಡೆದ ಕೃಷಿ ದಿನಾಚರಣೆ ಸಂದರ್ಭದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಮೂಲತಃ ಪರಪ್ಪೆಯವರಾದ ಅಶ್ರಫ್‌ರವರು ಅತ್ಯುತ್ತಮ ಪ್ರಗತಿ ಪರ ಕೃಷಿಕರು ಹಾಗೂ ಉತ್ತಮ ಹೈನುಗಾರಿಕೆಯನ್ನು ಮಾಡಿ ಹಲವರಿಗೆ ಅನ್ನದಾತರಾಗಿದ್ದಾರೆ.
ತಮ್ಮ ಮನೆಯಲ್ಲಿ ಸುಮಾರು ೧೦೦ಕ್ಕೂ ಹೆಚ್ಚು ಹಸುಗಳನ್ನು ಸಾಕುತ್ತಿರುವ ಇವರು ಅತ್ಯುತ್ತಮ ಹೈನುಗಾರರಾಗಿದ್ದಾರೆ,
ಸುಳ್ಯದಲ್ಲಿ ಗ್ರಾನೈಟ್ ಮತ್ತು ಟೈಲ್ಸ್ ವ್ಯವಹಾರ ನಡೆಸುವ ಇವರು ಗ್ರಾಹಕರಲ್ಲಿ ಉತ್ತಮ ಸಂಬಂಧವನ್ನು ನೀಡಿ ವ್ಯವಹಾರ ಕ್ಷೇತ್ರದಲ್ಲೂ ಸಾಧನೆ ಗೈದಿದ್ದಾರೆ. ಪ್ರಸ್ತುತ ಪುತ್ತೂರಿನಲ್ಲಿ ಇಂಡಿಯನ್ ಟೈಲ್ ಮಳಿಗೆ ಕಾರ್ಯನಿರ್ವಹಿಸುತ್ತಿದೆ.

 

LEAVE A REPLY

Please enter your comment!
Please enter your name here