ಆಶ್ರಯ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಿದ ಫಲಾನುಭವಿಗಳಿಗೆ ಕೂಡಲೇ ನಿವೇಶನ ನೀಡುವಂತೆ ಆಮ್ ಆದ್ಮಿಪಕ್ಷ ಆಗ್ರಹ

0

 

ಕುದ್ಪಾಜೆ ಪರಿಸರದಲ್ಲಿ ರಾಜೀವ್ ಗಾಂಧಿ ವಸತಿ ಯೋಜನೆ ಅಡಿಯಲ್ಲಿ ಕಾಯ್ದಿರಿಸಿದ ಜಾಗದ ದಾಖಲೆಯೊಂದಿಗೆ ತಹಶೀಲ್ದಾರರಿಗೆ ಮನವಿ

ವಾಜಪೇಯಿ ವಸತಿ ಯೋಜನೆ ಅಡಿಯಲ್ಲಿ ನಿವೇಶನಕ್ಕಾಗಿ ಮನವಿ ನೀಡಿರುವ ಫಲಾನುಭವಿಗಳಿಗೆ ಅತ್ಯಂತ ಶೀಘ್ರವಾಗಿ ಮನೆ ನಿವೇಶನ ನೀಡುವಂತೆ ಆಗ್ರಹಿಸಿ ಇಂದು ಸುಳ್ಯ ತಾಲೂಕು ಕಚೇರಿಗೆ ಫಲಾನುಭವಿಗಳ ಜೊತೆ ಬಂದು ಆಮ್ ಆದ್ಮಿ ಪಕ್ಷದ ಮುಖಂಡರುಗಳು ತಹಶೀಲ್ದಾರ್ ಅನಿತಾ ಲಕ್ಷ್ಮಿ ರವರಿಗೆ ಮನವಿ ನೀಡಿದರು.


ಈ ಸಂದರ್ಭದಲ್ಲಿ ಮಾತನಾಡಿದ ಆಮ್ ಆದ್ಮಿ ಪಕ್ಷದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ರಶೀದ್ ಜಟ್ಟಿಪಳ್ಳ ಕಳೆದ 15 ವರ್ಷಗಳಿಂದ ಸುಳ್ಯ ನಗರ ಪ್ರದೇಶದ ಕೆಲವು ಬಡ ಕುಟುಂಬಸ್ಥರು ರಾಜೀವ್ ಗಾಂಧಿ ವಸತಿ ಯೋಜನೆ ಅಡಿಯಲ್ಲಿ ನಿವೇಶನಕ್ಕಾಗಿ ಮನವಿಯನ್ನು ನೀಡಿ ಕಚೇರಿಗೆ ಅಲೆದಾಡುತ್ತಿದ್ದಾರೆ. ಆದರೆ ಸಂಬಂಧಪಟ್ಟ ನಗರ ಪಂಚಾಯತ್ ಅಧಿಕಾರಿಗಳು ಬಡವರನ್ನು ಸತಾಯಿಸುತ್ತ ಬರುತ್ತಿದ್ದು . ಮನೆಗೆ ಅರ್ಜಿ ನೀಡಿರುವ ಫಲಾನುಭವಿಗಳಿಂದಲೇ ಮನೆ ನಿವೇಶದಕ್ಕಾಗಿ ನಗರ ವ್ಯಾಪ್ತಿಯಿಂದ ಜಾಗ ಹುಡುಕಿ ಕೊಡುವಂತೆ ಹೇಳುತ್ತಿದ್ದಾರೆ.
ಆದ್ದರಿಂದ ಆಮ್ ಆದ್ಮಿ ಪಕ್ಷದ ವತಿಯಿಂದ ನಗರ ಪ್ರದೇಶಗಳಲ್ಲಿ ಬಡವರ ನಿವೇಶನಕ್ಕಾಗಿ ಸರಕಾರಿ ಕಾಲಿ ಜಮೀನನ್ನು ಹುಡುಕುತ್ತಾ ಹೊರಟಾಗ ನಗರ ವ್ಯಾಪ್ತಿಯ ದುಗ್ಗಲಡ್ಕ ಮತ್ತು ಕುತ್ಪಾಜೆ ಭಾಗದಲ್ಲಿ ರಾಜೀವ್ ಗಾಂಧಿ ವಸತಿ ಯೋಜನೆ ಅಡಿಯಲ್ಲಿ ಬಡವರಿಗೆ ನಿವೇಶನ ಕಲ್ಪಿಸಲು ಕಾದಿರಿಸಿರುವ ಜಾಗದ ಮಾಹಿತಿ ಲಭಿಸಿದೆ. ಅದರ ದಾಖಲೆಗಳನ್ನು ಸಂಗ್ರಹಿಸಿ ಸ್ಥಳದ ಆರ್‌ಟಿಸಿಯೊಂದಿಗೆ ಪಕ್ಷದ ವತಿಯಿಂದ ಇಂದು ನಿಮ್ಮ ಬಳಿ ಬಂದಿರುತ್ತೇವೆ . ಕೂಡಲೇ ಇದರ ಬಗ್ಗೆ ಪರಿಶೀಲನೆ ನಡೆಸಿ ನಿಯಮನುಸರವಾಗಿ ಅರ್ಜಿ ನೀಡಿರುವ ಫಲಾನುಭವಿಗಳಿಗೆ ನಿವೇಶನವನ್ನು ನೀಡುವಂತೆ ತಹಸಿಲ್ದಾರ್ ಅನಿತಾ ಲಕ್ಷ್ಮಿ ರವರನ್ನು ಮನವಿ ಮಾಡಿಕೊಂಡರು.
ಈ ವೇಳೆ ಇವರು ತಂದ ಆರ್ ಟಿ ಸಿ ಪತ್ರವನ್ನು ಪರಿಶೀಲಿಸಿ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳನ್ನು ಎರಡು ಮೂರು ದಿನಗಳಲ್ಲಿ ಕರೆಸಿ ಈ ಜಾಗದ ಬಗ್ಗೆ ಸಂಪೂರ್ಣ ಮಾಹಿತಿ ಪಡೆದು ಕ್ರಮ ಕೈಗೊಳ್ಳುವುದಾಗಿ ತಹಶೀಲ್ದಾರ್ ಭರವಸೆಯನ್ನು ನೀಡಿರುತ್ತಾರೆ.

ಈ ಸಂದರ್ಭದಲ್ಲಿ ಸುಳ್ಯ ಕ್ಷೇತ್ರ ಸಂಯೋಜಕ ಗಣೇಶ್ ಪ್ರಸಾದ್ ಕಂದಡ್ಕ, ಸುಳ್ಯ ನಗರ ಸಮಿತಿ ಕಾರ್ಯದರ್ಶಿ ಶ್ರೀಮತಿ ಸುಮನ, ನಗರ ಜತೆ ಕಾರ್ಯದರ್ಶಿ ಕಬೀರ್ ಕಲ್ಲುಮುಟ್ಲು, ಬಷೀರ್ ಅರಂಬೂರು ಮತ್ತು ಫಲಾನುಭವಿಗಳು ಉಪಸ್ಥಿತರಿದ್ದರು.