ಕೊಡಗಿನ ಗಡಿಭಾಗದಲ್ಲಿ ರಾತ್ರಿ ಸುರಿದ ಭಾರೀ ಮಳೆಗೆ ಕೊಯನಾಡಿನಲ್ಲಿ ಐದು ಮನೆಗಳು ಜಲಾವೃತ

0

ಊರುಬೈಲು ಮಾರ್ಪಡ್ಕ ಸೇತುವೆಯ ಎರಡೂ ಬದಿ ಮತ್ತೆ ಕುಸಿತ

ಕೊಯನಾಡಿನ ಕಿಂಡಿಅಣೆಕಟ್ಟಿಗೆ ಬಂದು ಅಡ್ಡಲಾಗಿ ನಿಂತಿರುವ ಮರದ ದಿಮ್ಮಿಗಳು

 

ಕೊಡಗಿನ ಗಡಿ ಭಾಗದಲ್ಲಿ ಸುರಿದ ಭಾರೀ ಮಳೆಗೆ ಕೊಯನಾಡು, ಚೆಂಬು ಗ್ರಾಮದಲ್ಲಿ ಹಲವು ಮನೆಗಳಿಗೆ ನೀರು ನುಗ್ಗಿದ್ದು , ಮಾರ್ಪಡ್ಕ ಊರುಬೈಲು ಸೇತುವೆಯ ಎರಡೂ ಬದಿ ಕುಸಿತವಾಗಿದ್ದು, ಕೊಯನಾಡಿನಲ್ಲಿ ಕಿಂಡಿ ಅಣೆಕಟ್ಟಿಗೆ ಬೃಹತ್ ಗಾತ್ರದ ಮರದ ದಿಮ್ಮಿಗಳು ಬಂದು ಅಡ್ಡಲಾಗಿ ನಿಂತಿದ್ದು, ಈ ಪರಿಸರದ ಹಲವು ಮನೆಗಳು ಜಲಾವೃತಗೊಂಡಿರುವ ಘಟನೆ ವರದಿಯಾಗಿದೆ.
ಚೆಂಬು ಗ್ರಾಮದ ಆನೆಹಳ್ಳ ಎಂಬಲ್ಲಿ ಕಿಂಡಿ ಅಣೆಕಟ್ಟು ನೀರಿನಲ್ಲಿ ಕೊಚ್ಚಿಹೋಗಿದ್ದು , ದಬ್ಬಡ್ಕದಲ್ಲೂ ಗುಡ್ಡ ಕುಸಿದಿದ್ದು, ಸಮೀಪದ ರವಿ ಎಂಬವರ ಮನೆಗೆ ಹಾನಿ ಸಂಭವಿಸಿದೆ.
ಇತ್ತೀಚಿಗೆ ತಾತ್ಕಾಲಿಕವಾಗಿ ದುರಸ್ತಿ ಮಾಡಿದ್ದ ಮಾರ್ಪಡ್ಕ – ಊರುಬೈಲು ಸೇತುವೆಯ ಎರಡೂ ಬದಿ ಸಂಪೂರ್ಣ ಕೊಚ್ಚಿಕೊಂಡು ಹೋಗಿದ್ದು, ದಿಢೀರ್ ಸುರಿದ ಭಾರೀ ಮಳೆಯಿಂದಾಗಿ ಈ ಪರಿಸರದ ಹಲವು ಕೃಷಿಕರ ಅಡಿಕೆ ತೋಟಗಳು ನೀರಿನಿಂದ ಆವೃತವಾಗಿರುವುದಾಗಿ ತಿಳಿದುಬಂದಿದೆ.