ಪೆರುವಾಜೆಯಲ್ಲಿ ಭಾರೀ ಸುರಿದ ಮಳೆಗೆ

0

 

ದೇವಸ್ಥಾನದ ಒಳಗೆ ನುಗ್ಗಿದ ಮಳೆ ನೀರು

ಪೆರುವಾಜೆಯಲ್ಲಿ ಇಂದು ಸಂಜೆ ಸುರಿದ ಭಾರೀ ಮಳೆಗೆ ಮಳೆ ನೀರು ಶ್ರೀ ಜಲದುರ್ಗಾದೇವಿ ದೇವಸ್ಥಾನದ ಒಳಗೆ ನುಗ್ಗಿದ್ದು ಒಳಾಂಗಣ ಜಲಾವೃತವಾಗಿದೆ.


ಕೆಲವು ಸಮಯದ ಹಿಂದೆಯೂ ಇದೇ ರೀತಿ ಮಳೆ ನೀರು ಒಳನುಗ್ಗಿ ಸಮಸ್ಯೆಯಾಗಿದೆ.
ದೇವಸ್ಥಾನದ ಎದುರು ಭಾಗದಿಂದ ಬರುವ ನೀರು ಒಮ್ಮೆಲೆ ಚರಂಡಿಯಿಂದ ಮೇಲೆ ಬಂದು ದೇವಸ್ಥಾನದ ಕಡೆಗೆ ಹರಿಯುತ್ತದೆ.
ಇದರಿಂದ ತುಂಬಾ ಸಮಸ್ಯೆಯಾಗುತ್ತಿದ್ದು ನೀರನ್ನು ಬೇರೆ ಕಡೆ ಹರಿಯುವಂತೆ ಚರಂಡಿ ನಿರ್ಮಾಣ ಮಾಡಬೇಕಾಗಿದೆ.