ಕೊಲ್ಲಮೊಗ್ರು: 14ನೇ ವರ್ಷದ ಶ್ರೀ ಗಣೇಶೋತ್ಸವ

0

 

ಸಾರ್ವಜನಿಕ ಗಣೇಶೋತ್ಸವ ಸಮಿತಿ ಕೊಲ್ಲಮೊಗ್ರು ಇದರ ವತಿಯಿಂದ 14ನೇ ವರ್ಷದ ಶ್ರೀ ಗಣೇಶೋತ್ಸವ ಆ.31 ರಂದು ನಡೆಯಿತು.

ಬೆಳಗ್ಗೆ ಗಣಪತಿ ಹವನ ನಡೆಯಿತು. ಬಳಿಕ ಶ್ರೀ ಗೌರಿ ಗಣೇಶ ಮೂರ್ತಿಯ ಪ್ರತಿಷ್ಠಾಪನೆ ನಡೆದು ಸ್ಥಳೀಯ ಭಜನಾ ಮಂಡಳಿಗಳಿಂದ ಹಾಗೂ ನಂದ ಕಲಾ ಕುಟುಂಬ ಮೆಟ್ಟಿನಡ್ಕ ಇವರಿಂದ ಭಜನಾ ಕಾರ್ಯಕ್ರಮ ನಡೆಯಿತು. ಮಹಾಪೂಜೆ ಬಳಿಕ ಪ್ರಸಾದ ವಿತರಣೆ ನಡೆದು ಅನ್ನ ಸಂತರ್ಪಣೆ ನಡೆಯಿತು. ಅಪರಾಹ್ನ ಸಾರ್ವಜನಿಕರಿಗೆ ವಿವಿಧ ಸ್ಪರ್ಧೆಗಳು, ಮಕ್ಕಳಿಗೆ ಮುದ್ದು ಶ್ರೀ ಕೃಷ್ಣವೇಷ ಸ್ಪರ್ಧೆ ನಡೆಯಿತು. ಸಂಜೆ ಶೋಭಾಯಾತ್ರೆ ನಡೆದು ಗಣೇಶ ಮೂರ್ತಿಯ ಜಲ ಸ್ತಂಭನ ನಡೆಯಿತು. ಸಾರ್ವಜನಿಕ ಗಣೇಶೋತ್ಸವ ಸಮಿತಿ ಕೊಲ್ಲಮೊಗ್ರು ಇದರ ಪದಾಧಿಕಾರಿಗಳು, ನೂರಾರು ಸಂಖ್ಯೆ ಸಾರ್ವಜನಿಕರು ಭಾಗವಹಿಸಿದ್ದರು.