ಹಳೆಗೇಟು : ಸಾಂಸ್ಕೃತಿಕ ಸಂಘದ ವಿಘ್ನ ವಿನಾಯಕನ ವೈಭವದ ಶೋಭಾಯಾತ್ರೆ

0

 

  ಭಕ್ತಾದಿಗಳ ನಡುವೆ ವಾದ್ಯ ಸಂಗೀತದೊಂದಿಗೆ ಮೆರವಣಿಗೆ ಮೂಲಕ ಸಾಗಿ ಬಂದ ವಿಘ್ನ ವಿನಾಯಕ 

ಸುಳ್ಯ ನಗರದ ಸಾಂಸ್ಕೃತಿಕ ಸಂಘ ಹಳೆಗೇಟಿನ ಗಣೇಶೋತ್ಸವ ಅಗಸ್ಟ್ 31 ರಂದು ಪ್ರತಿಷ್ಟಾಪನೆ ಗೊಂಡು ಮೂರು ದಿನಗಳ ಕಾಲ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಿಘ್ನ ವಿನಾಯಕನ ವೈಭವದ ಶೋಭಾಯಾತ್ರೆಯೊಂದಿಗೆ ಸೆಪ್ಟೆಂಬರ್ 2 ರಂದು ರಾತ್ರಿ ವಿಸರ್ಜನೆ ನಡೆಯಿತು.


ಮಧ್ಯಾಹ್ನ 1 ಗಂಟೆಗೆ ಮಹಾಪೂಜೆ ನಡೆದು 1:30 ಕ್ಕೆ ಸಾರ್ವಜನಿಕರಿಗೆ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಿತು. ನೂರಾರು ಮಂದಿ ಭಕ್ತ ಅಭಿಮಾನಿಗಳು ಪೂಜೆಯಲ್ಲಿ ಭಾಗವಹಿಸಿ ಪ್ರಸಾದವನ್ನು ಸ್ವೀಕರಿಸಿದರು. ಸಂಜೆ 5:30ಕ್ಕೆ ಹಳೆ ಗೇಟಿನಿಂದ ಆರಂಭಗೊಂಡ ಶೋಭಾ ಯಾತ್ರೆ ಅಬ್ಬರದ ಸಿಡಿಮದ್ದು , ಸಾಂಸ್ಕೃತಿಕ ಕಲಾತಂಡಗಳ ನೃತ್ಯ ಪ್ರದರ್ಶನದೊಂದಿಗೆ ಸುಳ್ಯ ನಗರದ ಮುಖ್ಯಬೀದಿಗಳಲ್ಲಿ ಸಾಗಿ ರಥ ಬೀದಿಯಿಂದ ವಿವೇಕಾನಂದ ಸರ್ಕಲ್ ಬಳಿ ಬಂದು ಜೂನಿಯರ್ ಕಾಲೇಜ್ ರಸ್ತೆ ಮೂಲಕ ಸಾಗಿ ಹಳೆಗೇಟಿನ ಬ್ರಹ್ಮರ ಗಯ ಬಳಿ ನದಿಯಲ್ಲಿ ರಾತ್ರಿ 10.30 ರ ವೇಳೆಗೆ ಜಲಸ್ಥಂಭನ ಗೊಂಡಿತು.


ಪುರೋಹಿತ ನಾಗರಾಜ್ ಭಟ್ ಹಳೆಗೇಟು,  ನಟರಾಜ್ ಭಟ್ ಪೂಜಾ ಕಾರ್ಯಕ್ರಮವನ್ನು ನೆರವೇರಿಸಿದರು.
ಈ ಸಂದರ್ಭದಲ್ಲಿ  ಸಾಂಸ್ಕೃತಿಕ ಸಂಘ ಹಳೆಗೇಟು ಇದರ ಅಧ್ಯಕ್ಷ ಶ್ರೀನಿವಾಸ್ ರಾವ್, ಪ್ರಧಾನ ಕಾರ್ಯದರ್ಶಿ ಶಿವನಾಥ್ ರಾವ್ ಹಳೆಗೇಟು, ಕಾರ್ಯದರ್ಶಿ ರಾಕೇಶ್ ಕುಂಟಿಕಾನ, ಖಜಾಂಜಿ ಚಿತ್ತರಂಜನ್, ಉಪಾಧ್ಯಕ್ಷ ಬಾಲಗೋಪಾಲ ಸೇರ್ಕಜೆ, ಗೌರವ ಅಧ್ಯಕ್ಷ ಪುಂಡರಿಕ ಭಟ್, ಹಾಗೂ ಸಂಘದ ಎಲ್ಲಾ ಸದಸ್ಯರು,ಸ್ಥಳೀಯ ನೂರಾರು ಸಾರ್ವಜನಿಕರು ಉಪಸ್ಥಿತರಿದ್ದರು.