ದುಗ್ಗಲಡ್ಕ – ಕೊಡಿಯಾಲಬೈಲ್- ಸುಳ್ಯ ರಸ್ತೆ ಅಭಿವೃದ್ಧಿಗೆ ಚಾಲನೆ

0

 

50ಲಕ್ಷದ ಕಾಮಗಾರಿಗೆ ಸಚಿವ ಅಂಗಾರರಿಂದ ಗುದ್ದಲಿಪೂಜೆ

ಬಹುಬೇಡಿಕೆಯ ದುಗ್ಗಲಡ್ಕ – ಕೊಡಿಯಾಲಬೈಲ್- ಸುಳ್ಯ ರಸ್ತೆಯು
ಶಾಸಕರ ಅನುದಾನದ ರೂ.50 ಲಕ್ಷ ಅನುದಾನದಲ್ಲಿ ಆಯ್ದ ಕಡೆಗಳಲ್ಲಿ ಕಾಂಕ್ರೀಟೀಕರಣಗೊಳ್ಳಲಿದ್ದು ಇಂದು ಬಂದರು,ಮೀನುಗಾರಿಕೆ ಮತ್ತು ಒಳನಾಡು ಜಲಸಾರಿಗೆ ಸಚಿವರಾದ ಎಸ್.ಅಂಗಾರರವರು ದುಗ್ಗಲಡ್ಕದಲ್ಲಿಗುದ್ದಲಿ ಪೂಜೆ ನೆರವೇರಿಸಿದರು.

ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದ ಸಚಿವರು ಅಭಿವೃದ್ಧಿ ಕಾರ್ಯಗಳು ಆಗುವ ಸಂದರ್ಭದಲ್ಲಿ ರಾಜಕೀಯ ಲಾಭ ಪಡೆಯುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ವಾಟ್ಸಾಪ್,ಪೇಪರ್ ನಲ್ಲಿ ,ಪ್ರತಿಭಟನೆ, ಬಹಿಷ್ಕಾರ ಹಾಕಲು ಎಲ್ಲರಿಗೂ ಅಧಿಕಾರವಿದೆ.ಅದು ಪ್ರಜಾಪ್ರಭುತ್ವದ ಮಾದರಿ,ಇದರಿಂದ ಏನೂ ಕೆಲಸವಾಗುವುದಿಲ್ಲ. ಇದರ ಬಗ್ಗೆ ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ.ಅಭಿವೃದ್ಧಿ ಬಗ್ಗೆ ಚಿಂತನೆ ಮಾಡಿದಾಗ ಮಾತ್ರ ಕೆಲಸವಾಗುತ್ತದೆ.ಮುಂದೆ ಈ ರಸ್ತೆ ಗೆ ಒಂದು ಕೋಟಿ ರೂ ಅನುದಾನ ಒದಗಿಸಿ ಅಭಿವೃದ್ಧಿ ಪಡಿಸುತ್ತೇನೆ.ಎಂದು ಹೇಳಿದರು.

 

ಈ ಸಂದರ್ಭದಲ್ಲಿ ಬಿಜೆಪಿ ಸುಳ್ಯ ಮಂಡಲ ಅಧ್ಯಕ್ಷರಾದ ಹರೀಶ್ ಕಂಜಿಪಿಲಿ, ಸುಳ್ಯ ನಗರ ಪಂಚಾಯತ್ ಅಧ್ಯಕ್ಷರಾದ ವಿನಯ್ ಕುಮಾರ್ ಕಂದಡ್ಕ, ಉಪಾಧ್ಯಕ್ಷೆ ಸರೋಜಿನಿ ಪೆಲ್ತಡ್ಕ, ನಗರ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷರಾದ ಶೀಲಾ ಕುರುಂಜಿ,ಸದಸ್ಯರಾದ ಶಶಿಕಲಾ ನೀರಬಿದಿರೆ, ಬಾಲಕೃಷ್ಣ ರೈ ದುಗ್ಗಲಡ್ಕ,ಬುದ್ಧ ನಾಯ್ಕ,ಸುಧಾಕರ್ ಕುರುಂಜಿ ಭಾಗ್, ಮಾಜಿ ಆಧ್ಯಕ್ಷೆ ಶೀಲಾವತಿ ಮಾಧವ, ಸುಳ್ಯ ಬಿಜೆಪಿ ಮಂಡಲ ಕಾರ್ಯದರ್ಶಿ ಸುಭೋದ್ ಶೆಟ್ಟಿ ಮೇನಾಲ, ಮಂಡಲ ಸಮಿತಿ ಸದಸ್ಯ ದಿನೇಶ್ ಡಿ.ಕೆ.,ಬಿಜೆಪಿ ವಾರ್ಡ್ ಸಮಿತಿ ಅಧ್ಯಕ್ಷ ಧನಂಜಯ ( ಮನು) ದುಗ್ಗಲಡ್ಕ, ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಕೇರ್ಪಳ, ನಗರ ಪಂಚಾಯತ್ ನಾಮನಿರ್ದೇಶಿತ ಸದಸ್ಯರಾದ ಬೂಡು ರಾಧಾಕೃಷ್ಣರೈ ,ಉಬರಡ್ಕ ಗ್ರಾ.ಪಂ. ಉಪಾಧ್ಯಕ್ಷರಾದ ಪ್ರಶಾಂತ್ ಪಾನತ್ತಿಲ, ನ್ಯಾಯವಾದಿ ಶ್ಯಾಮ್ ಪಾನತ್ತಿಲ,ಹರಿಪ್ರಸಾದ್ ಪಾನತ್ತಿಲ,ಶಶಿಧರ ನಾಯರ್ ಉಬರಡ್ಕ, ರಾಜೇಶ್ ಭಟ್ ನೆಕ್ಕಿಲ, ದುಗ್ಗಲಡ್ಕ ದುಗ್ಗಲಾಯ ದೈವಸ್ಥಾನದ ಅಧ್ಯಕ್ಷ ಸುಂದರ ರಾವ್,ಗೌರವಾಧ್ಯಕ್ಷ ದಯಾನಂದ ಸಾಲಿಯಾನ್ ಮೂಡೆಕಲ್ಲು,ಕಾರ್ಯದರ್ಶಿ ಕುಶಾಲಪ್ಪ ಗೌಡ ಕಜೆ, ಭಾಸ್ಕರ ರಾವ್ ಉಬರಡ್ಕ,ಚಂದ್ರಶೇಖರ ಗೌಡ ಮೋಂಟಡ್ಕ,ಶ್ರೀಕಾಂತ್ ಮಾವಿನಕಟ್ಟೆ,ವಸಂತ ಕಾರ್ಗಿಲ್,ಶಿವರಾಮ ಮಡಪ್ಪಾಡಿ, ಚಂದ್ರಶೇಖರ ನೆಡಿಲ್,ಮತ್ತಿತರರು ಉಪಸ್ಥಿತರಿದ್ದರು.