ನೀಟ್: ಚಿನುವಾ ಪೈಲೂರಿಗೆ 297ನೇ ರ‌್ಯಾಂಕ್

0

 

ವೈದ್ಯಕೀಯ ಪದವಿ ವ್ಯಾಸಂಗಕ್ಕೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್ ಟಿಎ) ನಡೆಸಿದ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯಲ್ಲಿ (ನೀಟ್) ಸುಳ್ಯ ತಾಲೂಕಿನ ಚೊಕ್ಕಾಡಿ ಮೂಲದ ಚಿನುವಾ ಪೈಲೂರು 690 ಅಂಕಗಳೊಂದಿಗೆ ಅಖಿಲ ಭಾರತ ಮಟ್ಟದಲ್ಲಿ 297ನೇ ರ‌್ಯಾಂಕ್ ಪಡೆದಿದ್ದಾರೆ.

ಇವರು ಬೆಂಗಳೂರಿನ ದೀಕ್ಷಾ (ಯಲಹಂಕ) ಶಿಕ್ಷಣ ಸಂಸ್ಥೆಯಲ್ಲಿ ದ್ವಿತೀಯ ಪಿಯುಸಿ ಪೂರೈಸಿ 583 ಅಂಕ ಹಾಗೂ ರಾಜ್ಯದ ಸಿಇಟಿಯಲ್ಲಿ ಎಂಜಿನಿಯರಿಂಗ್ ವಿಭಾಗದಲ್ಲಿ 255ನೇ ರ‌್ಯಾಂಕ್ ಪಡೆದಿದ್ದರು.

ಧಾರವಾಡದ ಬಾಲಬಳಗ ಮತ್ತು ಬೆಂಗಳೂರಿನ ಪೂರ್ಣ ಲರ್ನಿಂಗ್ ಸೆಂಟರಿನಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲೆ ವ್ಯಾಸಂಗ ಮಾಡಿದ್ದ ಚಿನುವಾ, ಶಿವರಾಂ ಪೈಲೂರು – ಅನಿತಾ ಪೈಲೂರು ದಂಪತಿಯ ಪುತ್ರ.

ಏಕಾಂಗಿ ಪ್ರವಾಸದಲ್ಲಿ (ಸೋಲೊ ಟ್ರಿಪ್) ಆಸಕ್ತಿ ಹೊಂದಿರುವ ಇವರು ವಿವಿಧೆಡೆಗೆ ಕೈಗೊಂಡಿದ್ದ ಪ್ರವಾಸಗಳಿಗೆ ಸಂಬಂಧಿಸಿದ ವೀಡಿಯೋಗಳನ್ನು ತಮ್ಮದೇ ಯೂಟ್ಯೂಬ್ ಚಾನೆಲ್ ಮೂಲಕ ಹಂಚಿಕೊಂಡಿದ್ದಾರೆ. ಚದುರಂಗ ಮತ್ತು ಟ್ವೈಕಾಂಡೋದಲ್ಲಿಯೂ ಅನೇಕ ಬಹುಮಾನಗಳನ್ನು ಪಡೆದಿದ್ದಾರೆ. ದೇಶದ ಯಾವುದಾರೂ ಪ್ರತಿಷ್ಠಿತ ವೈದ್ಯಕೀಯ ಕಾಲೇಜಿನಲ್ಲಿ ಪದವಿ ವ್ಯಾಸಂಗ ಮಾಡುವುದು ಚಿನುವಾ ಅವರ ಗುರಿ.