ಬೆಳ್ಳಾರೆ ಕರ್ನಾಟಕ ಪಬ್ಲಿಕ್ ಸ್ಕೂಲ್ : ತಾಲೂಕು ಮಟ್ಟದ ಬಾಲಕ ಮತ್ತು ಬಾಲಕಿಯರ ಬಾಲ್ ಬ್ಯಾಡ್ಮಿಂಟನ್ ಪಂದ್ಯಾಟದ ಉದ್ಘಾಟನಾ ಸಮಾರಂಭ

0

 

ತಾಲೂಕು ಮಟ್ಟದ ಬಾಲ್ ಬ್ಯಾಡ್ಮಿಂಟನ್ ಪಂದ್ಯಾಟವನ್ನು ಕೆ.ಪಿ.ಎಸ್. ಬೆಳ್ಳಾರೆ ಪ್ರಾಥಮಿಕ ವಿಭಾಗದಲ್ಲಿ ಸೆ. ೯ರಂದು ಆಯೋಜಿಸಲಾಯಿತು. ಬೆಳ್ಳಾರೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಚಂದ್ರಶೇಖರ ಪನ್ನೆ ಪಂದ್ಯಾಟವನ್ನು ದೀಪ ಬೆಳಗಿಸಿ ಉದ್ಘಾಟಿಸಿ, ಸ್ಪರ್ಧಾ ಮನೋಭಾವದಿಂದ ಭಾಗವಹಿಸಿ ಸೋಲುಗೆಲುವನ್ನು ಸಮಾನವಾಗಿ ಸ್ವೀಕರಿಸಿ ಎಂದು ಸಲಹೆನೀಡಿದರು.

ಮುಖ್ಯಅತಿಥಿಗಳಾಗಿ ಮಾತನಾಡಿದ ಪದ್ಮನಾಭ ನೆಟ್ಟಾರು, ಕೆ.ಪಿ.ಎಸ್. ಬೆಳ್ಳಾರೆ ಸಂಸ್ಥೆಯು ಜಿಲ್ಲೆ, ರಾಜ್ಯ ಮಟ್ಟದಲ್ಲಿ ಗುರುತಿಸುವಂತಾಗಿರುವುದು ಹೆಮ್ಮೆಯ ವಿಷಯ, ಮುಂದೆಯೂಇಲ್ಲಿನ ವಿದ್ಯಾರ್ಥಿಗಳು ರಾಷ್ಟ್ರಮಟ್ಟದಲ್ಲಿ ಗುರುತಿಸುವಂತಾಗಲಿಎಂದು ಶುಭನುಡಿದರು. ಮುಖ್ಯ ಅತಿಥಿಗಳಾಗಿ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷರಾದ ಧನಂಜಯ ದೈಹಿಕ ಶಿಕ್ಷಕರು ಸ.ಹಿ.ಪ್ರಾ.ಶಾಲೆ ಸಂಪಾಜೆ, ಬೆಳ್ಳಾರೆ ಕ್ಲಸ್ಟರ್ ಸಮೂಹ ಸಂಪನ್ಮೂಲ ವ್ಯಕ್ತಿ ಶ್ರೀಮತಿ ಸವಿತಾಕುಮಾರಿ, ಕೆ.ಪಿ.ಎಸ್. ನ ಪ್ರಾಂಶುಪಾಲರಾದವಿಶ್ವನಾಥ, ಉಪಪ್ರಾಂಶುಪಾಲರಾದ ಶ್ರೀಮತಿ ಉಮಾಕುಮಾರಿ, ಕೆ.ಪಿ.ಎಸ್. ಕಟ್ಟಡ ಸ್ಥಾಯಿಸಮಿತಿ ಅಧ್ಯಕ್ಷರಾದ ಹರ್ಷ ಜೋಗಿಬೆಟ್ಟು, ಎಸ್.ಡಿ.ಎಂ.ಸಿ. ಸದಸ್ಯರಾದ ಆರಿಫ್ ಬೆಳ್ಳಾರೆ, ಪ್ರೌಢಶಾಲಾ ದೈಹಿಕ ಶಿಕ್ಷಕಿ ಶ್ರೀಮತಿ ಪುಷ್ಪಾ, ಕೆ.ಪಿ.ಎಸ್. ಪ್ರಾಥಮಿಕ ವಿಭಾಗದ ಮುಖ್ಯಗುರುಗಳಾದ ಮಾಯಿಲಪ್ಪ ಜಿ. ಉಪಸ್ಥಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶ್ರೀನಾಥ್ ಬಾಳಿಲ ಅವರು ಸ್ಪರ್ಧಾರ್ಥಿಗಳಿಗೆ ಶುಭ ಹಾರೈಸಿದರು. ಶಾಲಾ ಮುಖ್ಯಗುರುಗಳಾದ ಮಾಯಿಲಪ್ಪ ಜಿ. ಸ್ವಾಗತಿಸಿ, ದೈಹಿಕ ಶಿಕ್ಷಣ ಶಿಕ್ಷಕಿ ಶ್ರೀಮತಿ ಪಾರ್ವತಿಯವರು ವಂದಿಸಿದರು. ಸಹ ಶಿಕ್ಷಕ ದಿನೇಶ್ ಕಾರ್ಯಕ್ರಮ ನಿರೂಪಿಸಿದರು.

ಈ ಸಂದರ್ಭದಲ್ಲಿ ಕೆಪಿಎಸ್ ಬೆಳ್ಳಾರೆಯ ಏಳನೇ ತರಗತಿಯ ವಿದ್ಯಾರ್ಥಿನಿ ಲಾವಣ್ಯ ಶೆಟ್ಟಿ ಇವಳ ಅನಾರೋಗ್ಯದ ಕಾರಣ ಶಾಲಾಪೋಷಕರು ನೀಡಿದರು. ೩೩,೦೦೦ ಮೊತ್ತವನ್ನು ತಂದೆ ರಾಧಾಕೃಷ್ಣರಿಗೆ ಹಸ್ತಾಂತರಿಸಲಾಯಿತು.

 

ತಾಲೂಕು ಮಟ್ಟದ ಪಂದ್ಯಾಟದ ಸಮಾರೋಪ ಸಮಾರಂಭವು ಕೆ.ಪಿ.ಎಸ್. ಪ್ರಾಥಮಿಕ ವಿಭಾಗದಲ್ಲಿ ನಡೆಯಿತು. ವೇದಿಕೆಯಲ್ಲಿ ಕೆ.ಪಿ.ಎಸ್. ಉಪಪ್ರಾಂಶುಪಾಲೆ ಶ್ರೀಮತಿ ಉಮಾಕುಮಾರಿ, ಕಟ್ಟಡ ಸ್ಥಾಯಿ ಸಮಿತಿ ಅಧ್ಯಕ್ಷರಾದ ಶ್ರೀಹರ್ಷ ಜೋಗಿಬೆಟ್ಟು, ಕೆ.ಪಿ.ಎಸ್. ಪ್ರೌಢ ವಿಭಾಗದ ದೈಹಿಕ ಶಿಕ್ಷಕಿ ಶ್ರೀಮತಿ ಪುಷ್ಪಾ, ಸೈಂಟ್ ಬ್ರಿಜಿಡ್ಸ್ ಸುಳ್ಯದ ದೈಹಿಕ ಶಿಕ್ಷಣ ಶಿಕ್ಷಕರಾದ ಉಮೇಶ್, ಕೆ.ಪಿ.ಎಸ್. ಪ್ರಾಥಮಿಕ ವಿಭಾಗದ ಮುಖ್ಯಗುರುಗಳಾದ ಮಾಯಿಲಪ್ಪ ಜಿ., ಕೆ.ಪಿ.ಎಸ್. ಪ್ರಾಥಮಿಕ ವಿಭಾಗದ ದೈಹಿಕ ಶಿಕಣ ಶಿಕ್ಷಕಿ ಶ್ರೀಮತಿ ಪಾರ್ವತಿ ಉಪಸ್ಥಿತರಿದ್ದರು. ಅಧ್ಯಕ್ಷತೆ ವಹಿಸಿದ್ದ ಉಪಪ್ರಾಂಶುಪಾಲೆ ಮಾತನಾಡಿ ಎಲ್ಲಾ ಪಂದ್ಯಾಟಗಳಲ್ಲಿ ಸ್ಪರ್ಧಾ ಸ್ಫೂರ್ತಿಯಿಂದ ಭಾಗವಹಿಸಿದ ವಿದ್ಯಾರ್ಥಿಗಳನ್ನು ಅಭಿನಂದಿಸಿದರು.

ಪಂದ್ಯಾಟದಲ್ಲಿ ಎರಡೂ ವಿಭಾಗಗಳಲ್ಲಿವಿಜೇತರಾದ ಸುಳ್ಯ ಸೈಂಟ್ಬ್ರಿಜಿಡ್ಸ್ತಂಡ ಜಿಲ್ಲಾ ಮಟ್ಟದಲ್ಲಿಯೂ ಗೆದ್ದು ತಾಲೂಕಿಗೆ ಹೆಸರು ತರಲಿ ಎಂದು ಶುಭ ಹಾರೈಸಿದರು. ಬಾಲಕರ ಹಾಗೂ ಬಾಲಕಿಯರ ಎರಡೂ ವಿಭಾಗಗಳಲ್ಲಿಯೂ ಸೈಂಟ್ ಬ್ರಿಜಿಡ್ಸ್ ಸುಳ್ಯ ತಂಡ ಪ್ರಥಮ ಸ್ಥಾನ ಹಾಗೂ ಕೆ.ಪಿ.ಎಸ್. ಬೆಳ್ಳಾರೆ ತಂಡ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿತು. ಕೆ.ಪಿ.ಎಸ್. ತಂಡದ ಮನ್ವಿತ ಉತ್ತಮ ಆಟಗಾರ್ತಿಯಾಗಿ ಹೊರಹೊಮ್ಮಿದರು. ಸಹಶಿಕ್ಷಕರಾದ ದಿನೇಶ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.