ಬೆಳ್ಳಾರೆ ಜ್ಞಾನದೀಪದಲ್ಲಿ ಪೂ. ಪ್ರಾ. ಶಾಲಾ ಶಿಕ್ಷಕಿಯರ ಚೈತನ್ಯ ತರಬೇತಿ ಕಾರ್ಯಗಾರ

0

 

ಮಗುವನ್ನು ಝೀರೋದಿಂದ ಹೀರೋ ಮಾಡಿ : ವಂದನಾ ರೈ

ಯಾವ ಮಗುವಿನಲ್ಲೂ ಬೇಧಭಾವ ಮಾಡದೆ ನಮ್ಮ ಮಗುವಿನಂತೆ ಪ್ರೀತಿ ತೋರಿಸಿ ಝೀರೋದಿಂದ ಹೀರೋ ಮಾಡುವ ಮಹತ್ತರ ಜವಾಬ್ಧಾರಿ ಪೂರ್ವ ಪ್ರಾಥಮಿಕ ಶಿಕ್ಷಕಿಯರ ಮೇಲಿದೆ ಎಂದು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶಿಕ್ಷಕಿ ವಂದನಾ ರೈ ಕಾರ್ಕಳ ಹೇಳಿದರು.
ಅವರು ಬೆಳ್ಳಾರೆಯ ಜ್ಞಾನದೀಪ ಸಂಸ್ಥೆಯಲ್ಲಿ ಜೇಸಿಐ ಬೆಳ್ಳಾರೆಯ ಆಶ್ರಯದಲ್ಲಿ ನಡೆದ ಜೇಸಿ ಸಪ್ತಾಹದಲ್ಲಿ ದಿ. ಗಂಗಾಧರ ಬೆಳ್ಳಾರೆ ಸ್ಮರಣಾರ್ಥ ನಡೆದ ತರಬೇತಿ ಕಾರ್ಯಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ತರಬೇತಿ ನೀಡಿದರು.
ಬೆಳ್ಳಾರೆ ಗ್ರಾಮ ಪಂಚಾಯತ್ ಅಧ್ಯಕ್ಷ ಚಂದ್ರಶೇಖರ್ ಪನ್ನೆ ಜೇಸಿ ಸಪ್ತಾಹವನ್ನು ಉದ್ಘಾಟಿಸಿ ಶುಭ ಹಾರೈಸಿದರು. ಬೆಳ್ಳಾರೆ ಟೌನ್ ರೋಟರಿ ಕ್ಲಬ್ ಅಧ್ಯಕ್ಷ ಕೇಶವಮೂರ್ತಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಬೆಳ್ಳಾರೆ ಜೇಸಿಐ ಅಧ್ಯಕ್ಷೆ ನಿರ್ಮಲ ಜಯರಾಮ್ ಅಧ್ಯಕ್ಷತೆ ವಹಿಸಿದ್ದರು. ಜ್ಞಾನದೀಪ ಸಂಸ್ಥೆಯ ನಿರ್ದೇಶಕ ಉಮೇಶ್ ಮಣಿಕ್ಕಾರ, ನಿಕಟಪೂರ್ವಧ್ಯಕ್ಷ ಪದ್ಮನಾಭ ಕಲಾಸುಮಾ ಉಸ್ಥಿತರಿದ್ದರು. ಪೂರ್ವಧ್ಯಕ್ಷ ಪ್ರದೀಪ್ ಕುಮಾರ್ ರೈ ಪನ್ನೆ ಪ್ರಸ್ತಾವಿಸಿದರು. ಕಾರ್ಯದರ್ಶಿ ಶಿವಕುಮಾರ್ ಮಣಿಕ್ಕಾರ ವಂದಿಸಿದರು. ಜ್ಞಾನದೀಪ ಮೊಂಟೆಸ್ಸರಿ ಶಿಕ್ಷಕಿಯರ ತರಬೇತಿಯ ವಿದ್ಯಾರ್ಥಿ ಶಿಕ್ಷಕಿಯರು, ಹಿರಿಯ ವಿದ್ಯಾರ್ಥಿ ಶಿಕ್ಷಕಿಯರು,ಸ್ಥಳೀಯ ಅಂಗನವಾಡಿ ಕೇಂದ್ರದ ಕಾರ್ಯಕರ್ತೆಯರು ತರಬೇತಿ ಕಾರ್ಯಗಾರದ ಪ್ರಯೋಜನ ಪಡೆದರು.