ಸುಳ್ಯ: ಡಿ.ಸಿ ಮನ್ನಾ ಜಾಗ ಅತಿಕ್ರಮಣ ತೆರವುಗೊಳಿಸಿ, ತಪ್ಪಿತಸ್ಥರ ವಿರುದ್ದ ಕ್ರಮವಹಿಸಿ ಅಂಬೇಡ್ಕರ್ ರಕ್ಷಣಾ ವೇದಿಕೆ ಆಗ್ರಹ

0

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಮೀಸಲಿಟ್ಟ ಡಿ.ಸಿ ಮನ್ನಾ ಜಮೀನನ್ನು ಅತಿಕ್ರಮಣ ಮಾಡಿದವರ ವಿರುದ್ಧ ಕ್ರಮವಹಿಸಿ ಆ ಜಾಗವನ್ನು ಸರಿಪಡಿಸುವಂತೆ ಮತ್ತು‌ ಜಾಗವನ್ನು ಅರ್ಹರಿಗೆ ಒದಗಿಸಲು ಸುಳ್ಯ ತಹಶೀಲ್ದಾರರಿಗೆ ಅಂಬೇಡ್ಕರ್ ರಕ್ಷಣಾ ವೇದಿಕೆಯಿಂದ ಮನವಿ ಸಲ್ಲಿಸಲಾಯಿತು.

ಬ್ರಿಟಿಷ್ ಸರ್ಕಾರ 1932 ರಿಂದ 1939 ರ ಅವಧಿಯಲ್ಲಿ ದಲಿತ ಸಮುದಾಯಕ್ಕೆ ಮೀಸಲಿಟ್ಟ ಡಿಸಿ ಮನ್ನಾ ಜಮೀನು ಇಂದಿಗೂ ಹಂಚಿಕೆಯಾಗದಿರುವುದು ದುರಂತ. ಹಾಗೆ ಸುಳ್ಯ ತಾಲೂಕಿನ 31 ಗ್ರಾಮದಲ್ಲಿ 676.38 ಎಕರೆ 326.82 ಎಕರೆ ಜಮೀನು ಪ.ಜಾ ಮತ್ತು ಪ.ಪ ದವರ ಕೈ ಸೇರಿದೆ. ಹಾಗೆ ಸುಳ್ಯದ ಗಾಂಧಿನಗರ ಭಾಗದಲ್ಲಿ 276/ 1E, 1B ಯಲ್ಲಿರುವ 3 ಎಕರೆ ಜಮೀನಿನಲ್ಲಿ 12 ಕುಟುಂಬ ಮೇಲ್ವರ್ಗದವರಿಗೆ ಅಕ್ರಮವಾಗಿ ರೆಕಾರ್ಡ್ ಮಾಡಿ ಕೊಡಲಾಗಿದೆ.
ಹಾಗಾಗಿ ಪರಿಶಿಷ್ಟ ಜಾತಿ ಮತ್ತುಪರಿಶಿಷ್ಟ ಮೀಸಲಿಟ್ಟ ಡಿಸಿ ಮನ್ನಾ ಜಮೀನನ್ನು ಮೇಲ್ವರ್ಗದವರಿಗೆ ರೆಕಾರ್ಡ್ ಮಾಡಿಕೊಟ್ಟಂತ ಅಧಿಕಾರಿಗಳ ಮೇಲೆ ಕ್ರಿಮಿನಲ್ ಕೇಸ್ ದಾಖಲು ಮಾಡಿ ಡಿಸಿ ಮನ್ನಾ ಜಮೀನನ್ನು ಯಾರೆಲ್ಲ ಅಕ್ರಮವಾಗಿ ರೆಕಾರ್ಡ್ ಮಾಡಿಕೊಂಡಿದ್ದಾರ ಅವರ ರೆಕಾರ್ಡ್ ಅನ್ನು ರದ್ದು ಮಾಡಬೇಕು ಮತ್ತು ಡಿಸಿ ಮನ್ನಾ ಜಮೀನನ್ನು ಪ. ಜಾತಿ ಮತ್ತು ಪ. ಪಂಗಡದವರಿಗೆ ಸರ್ವೆ ಮಾಡಿಕೊಡಬೇಕು ಎಂದು ಸುಳ್ಯ ತಹಶೀಲ್ದಾರರಿಗೆ, ದ.ಕ ಜಿಲ್ಲಾಧಿಕಾರಿಗೆ ಮತ್ತು ಕಂದಾಯ ಸಚಿವರಿಗೆ ಮನವಿ ಸಲ್ಲಿಸಲಾಯಿತು.

ತಪ್ಪಿದಲ್ಲಿ ಅಂಬೇಡ್ಕರ್ ರಕ್ಷಣಾ ವೇದಿಕೆಯಿಂದ ತಾಲೂಕು ಕಚೇರಿಯ ಮುಂಭಾಗ ಪ್ರತಿಭಟನೆಯ ಮಾಡುವುದಾಗಿ ಅಂಬೇಡ್ಕರ್.ರ.ವೇದಿಕೆಯ ಜಿಲ್ಲಾಧ್ಯಕ್ಷರಾದ ಸುಂದರ ಪಾಟಾಜೆ ತಿಳಿಸಿದ್ದಾರೆ.