ತಾಲೂಕು ಆಡಳಿತದಿಂದ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ

0

 

ಸಮಾಜದಲ್ಲಿ ಅಸಮಾನತೆ ಹೋಗಲಾಡಿಸಿದ ಧೀಮಂತ : ಅನಿತಾಲಕ್ಷ್ಮೀ

 

ತಾಲೂಕು ಆಡಳಿತಕ್ಕೆ ಸುಳ್ಯ, ಬ್ರಹ್ಮಶ್ರೀ ನಾರಾಯಣ ಗುರು ಬಿಲ್ಲವ ಸಂಘದ ವತಿಯಿಂದ ಬ್ರಹ್ಮಶ್ರೀ ನಾರಾಯಣ ಗುರುಗಳ 168 ನೇ ಜಯಂತಿ ಕಾರ್ಯಕ್ರಮ ಸುಳ್ಯ ತಾಲೂಕು ಕಚೇರಿ ಸಭಾಂಗಣದಲ್ಲಿ ನಡೆಯಿತು.

 

ಅಧ್ಯಕ್ಷತೆ ವಹಿಸಿದ್ದ ತಹಶೀಲ್ದಾರ್ ಕು.ಅನಿತಾಲಕ್ಷ್ಮೀ ನಾರಾಯಣ ಗುರುಗಳ ‌ಭಾವಚಿತ್ರದೆದುರು ದೀಪ ಬೆಳಗಿದರು. “ಸಮಾಜದಲ್ಲಿ ಇದ್ದ ಅಸಮಾನತೆ ಹೋಗಲಾಡಿಸಲು ಹೋರಾಡಿದ ಧೀಮಂತರು ನಾರಾಯಣ ಗುರುಗಳು. ಹಿಂದುಳಿದವರ ಏಳಿಗೆಗೆ ಶ್ರಮನಿಸಿದ ಇವರ ಆದರ್ಶಗಳು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು” ಎಂದು ಅವರು ಹೇಳಿದರು.

ಸುಳ್ಯ ಸ.ಪ.ಪೂ. ಕಾಲೇಜು ಶಿಕ್ಷಕಿ ಚಂದ್ರಮತಿ ಉಪನ್ಯಾಸ ನೀಡಿದರು.

ಬಿಲ್ಲವ ಸಂಘದ ತಾಲೂಕು ಅಧ್ಯಕ್ಷ
ಎನ್.ಎಸ್.ಡಿ. ವಿಠಲದಾಸ್, ಬಿಲ್ಲವ ಸಂಘದ ಯುವ ವಾಹಿನಿ ಸಂಘದ ಅಧ್ಯಕ್ಷ ಅನಿಲ್ ಪೂಜಾರಿ, ಮಹಾ ಘಟಕದ ಶಶಿಕಲಾ ನೀರಬಿದಿರೆ, ನ.ಪಂ. ಉಪಾಧ್ಯಕ್ಷೆ ಸರೋಜಿನಿ ಪೆಲ್ತಡ್ಕ, ಸ್ಥಾಯಿ ಸಮಿತಿ ಅಧ್ಯಕ್ಷೆ ಶೀಲಾ ಕುರುಂಜಿ, ನ.ಪಂ. ಸದಸ್ಯರುಗಳಾದ ಶಿಲ್ಪಾ ಸುದೇವ್, ಪೂಜಿತಾ ಕೆ.ಯು., ಪ್ರವಿತಾ ಪ್ರಶಾಂತ್, ಸುಶೀಲ ಜಿನ್ನಪ್ಪ, ಸುಧಾಕರ ಕುರುಂಜಿಭಾಗ್, ಕಿಶೋರಿ ಶೇಟ್, ಯತೀಶ್ ಬೀರಮಂಗಲ, ಶಿಕ್ಷಣ ಸಂಯೋಜಕರುಗಳಾದ ಚಂದ್ರಶೇಖರ, ನಳಿನಿ, ಬಿಸಿಎಂ ಇಲಾಖೆಯ‌ ವಿಜಯ ಸುಳ್ಯ‌ನ.ಪಂ. ಮುಖ್ಯಕಾರ್ಯನಿರ್ವಹಣಾಧಿಕಾರ ಸುಧಾಕರ ಎಂ.ಹೆಚ್ ಅಧಿಕಾರಿ‌ ಸುಹಾನ, ಪಿಡಬ್ಲ್ಯೂಡಿ ಇಂಜಿನಿಯರ್ ಪರಮೇಶ್ವರ, ನ.ಪಂ.‌ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಸುಧಾಕರ್, ಎ.ಪಿ.ಎಂ.ಸಿ. ಮಾಜಿ ಉಪಾಧ್ಯಕ್ಷ ನವೀನ್ ಸಾರಕರೆ, ತೋಟಗಾರಿಕೆ ಸಹಾಗಕ ನಿರ್ದೇಶಕಿ ಸುಹಾನ ಮೊದಲಾದವರಿದ್ದರು.

ಕವನ ಪ್ರಾರ್ಥಿಸಿದರು. ಶಿಕ್ಷಕಿ ಶ್ರೀಮತಿ ‌ಆಶಾ ಅಂಬೆಕಲ್ಲು ಕಾರ್ಯಕ್ರಮ ನಿರೂಪಿಸಿದರು.