ಸಂಪಾಜೆ : ವಲಯ ಮಟ್ಟದ ಕ್ರೀಡಾಕೂಟ

0

ಸಂಪಾಜೆ ವಲಯ ಮಟ್ಟದ ಕ್ರೀಡಾಕೂಟವು   ಸಂಪಾಜೆ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆಯಿತು.


ಈ ಕ್ರೀಡಾಕೂಟದಲ್ಲಿ 13 ಹಿ. ಪ್ರಾ. ಶಾಲೆಗಳು ಭಾಗವಹಿಸಿದವು.
ಹಿರಿಯ ಪ್ರಾಥಮಿಕ ಶಾಲೆ ಸಂಪಾಜೆ ಸಮಗ್ರ ಚಾಂಪಿಯನ್ ಪಡೆಯಿತು. ಸಮಾರೋಪ ಸಮಾರಂಭದಲ್ಲಿ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ನಿರ್ಮಲ ಭರತ್, ಪಂಚಾಯತ್ ಸದಸ್ಯರಾದ ಶ್ರೀಮತಿ ರಮಾದೇವಿ, ನವೀನಕುಮಾರ್, ಕುಮಾರ್ ಚೆದ್ಕಾರ್, ನಿವೃತ್ತಿ ಶಿಕ್ಷಕಿಯರಾದ ಪಾರ್ವತಿ ಎಂ, ಯಶೋದ ಎಂ. ಎಸ್. ಇವರುಗಳು ಹಾಜರಿದ್ದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಎಸ್. ಡಿ. ಎಂ. ಸಿ ಅಧ್ಯಕ್ಷರಾದ ಶ್ರೀಧರ್ ಪಡ್ಪುರವರು ವಹಿಸಿದ್ದರು. ದೈಹಿಕ ಶಿಕ್ಷಕರಾದ ಶ್ರೀಮತಿ ಕವಿತಾ, ಶ್ರೀಮತಿ ಶಾಂತಲಾ ನಾಯ್ಕ, ಶ್ರೀಮತಿ ಮೀನಾಕ್ಷಿ ಪಿ. ಜಿ, ಶ್ರೀಮತಿ ಚೇತನಾರವರು ಕಾರ್ಯಕ್ರಮವನ್ನು ನಿರೂಪಿಸಿ ವಂದನೆ ಸಲ್ಲಿಸಿದರು. ಕ್ಲಸ್ಟರ್ ನ ಎಲ್ಲಾ ಶಿಕ್ಷಕರು ಎಸ್.ಡಿ.ಎಂ.ಸಿ ಕ್ರೀಡಾಕೂಟಕ್ಕೆ ಸಹಕಾರ ನೀಡಿದರು.