ಪ್ರವೀಣ್ ನೆಟ್ಟಾರ್ ಕುಟುಂಬಸ್ಥರಿಂದ ಸಂಸದ ನಳಿನ್ ಕುಮಾರ್ ಭೇಟಿ

0

 

ದುಷ್ಕರ್ಮಿಗಳಿಂದ ಹತ್ಯೆಯಾದ ಬಿಜೆಪಿ ಯುವ ಮೋರ್ಚಾ ಮುಖಂಡ ಪ್ರವೀಣ್ ನೆಟ್ಟಾರ್ ಅವರ ಮನೆಯವರು ನಿನ್ನೆ ರಾತ್ರಿ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಸಂಸದರಾದ ನಳಿನ್ ಕುಮಾರ್ ಕಟೀಲ್ ಅವರ ಮನೆಗೆ ತೆರಳಿ ಮಾತುಕತೆ ನಡೆಸಿದರು.

 

ಬೆಂಗಳೂರಿನಲ್ಲಿ ನಡೆದ ಜನಸ್ಪಂದನ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳು ಘೋಷಿಸಿದ ಉದ್ಯೋಗದ ಬಗ್ಗೆ ಸಹಕರಿಸಿದ ಮುಖ್ಯಮಂತ್ರಿಗಳು ಮತ್ತು ಅವರಿಗೆ ಶಿಫಾರಸ್ಸು ಮಾಡಿದ ಸಂಸದ ನಳಿನ್ ಕುಮಾರ್ ಕಟೀಲ್ ಅವರಿಗೆ ಕುಟುಂಬಸ್ಥರು ಧನ್ಯವಾದಗಳನ್ನು ಅರ್ಪಿಸಿದರೆಂದು ತಿಳಿದುಬಂದಿದೆ.

ಈ ಸಂದರ್ಭದಲ್ಲಿ ಪ್ರವೀಣ್ ಕುಟುಂಬಕ್ಕೆ ಮನೆ ಕಟ್ಟಿಕೊಡುವ ಬಗ್ಗೆ ಸಂಸದರು ಮತ್ತೊಮ್ಮೆ ಪುನರುಚ್ಚರಿಸಿದ್ದು ಕೂಡಲೇ ಗುತ್ತಿಗೆದಾರರನ್ನು ಕಳುಹಿಸಿ ಸುಂದರವಾದ ಮನೆ ನಿರ್ಮಾಣ ಮಾಡಿಕೊಡುವುದರ ಬಗ್ಗೆ ಸಂಸದರು ಭರವಸೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಮಹಾಲಯ ಕಳೆದ ನಂತರ ಮನೆಯ ಕಾಮಗಾರಿ ಆರಂಭಿಸುವ ಬಗ್ಗೆ ಪ್ರವೀಣ್ ಮನೆಯವರು ಸಲಹೆ ನೀಡಿದ್ದಾರೆ ಎನ್ನಲಾಗಿದೆ. ಕುಟುಂಬದ ನಿಯೋಗದಲ್ಲಿ ಪ್ರವೀಣ್ ತಂದೆ , ಪತ್ನಿ ಸೇರಿ ಕುಟುಂಬಸ್ಥರು ಮತ್ತು ಸ್ಥಳಿಯ ಬಿಜೆಪಿ ಪ್ರಮುಖರು ಉಪಸ್ಥಿತರಿದ್ದರು.

ಬಿಜೆಪಿ ಮಂಡಲ ಅಧ್ಯಕ್ಷ ಹರೀಶ್ ಕಂಜಿಪಿಲಿ, ಪ್ರ.ಕಾರ್ಯಧರ್ಶಿ ರಾಕೇಶ್ ರೈ ಕೆಡೆಂಜಿ, ಕಾರ್ಯದರ್ಶಿ ಶ್ರೀನಾಥ್ ರೈ ಬಾಳಿಲ‌,ಪ್ರವೀಣ್ ನೆಟ್ಟಾರು ತಂದೆ ಶೇಖರ ಪೂಜಾರಿ, ತಾಯಿ ಶ್ರೀಮತಿ ರತ್ನಾವತಿ , ಪತ್ನಿ ಶ್ರೀಮತಿ ನೂತನ,ವಜ್ರನಾಥ ಕಲ್ಲಡ್ಕ ಮತ್ತು ಕುಟುಂಬದ ಸದಸ್ಯರು ಈ ಸಂದರ್ಭದಲ್ಲಿದ್ದರು.