ಪಿಎಂ ಕಿಸಾನ್ ಯೋಜನೆ : ಇ – ಕೆವೈಸಿ ಮಾಡಲು ಸೆ.14 ಕೊನೆಯ ದಿನ

0

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಪರಿಹಾರ ಪಡೆಯಲು ಫಲಾನುಭವಿಗಳಿಗೆ ಇ-ಕೆವೈಸಿ ಮಾಡಲು ಕಡ್ಡಾಯವಾಗಿರುತ್ತದೆ. ಸೇವಾ ಕೇಂದ್ರದಲ್ಲಿ ಬಯೋಮೆಟ್ರಿಕ್ ಆಧಾರಿತವಾಗಿ ಅಥವಾ http://pmkisan.gov.in ಪೋರ್ಟಲ್‌ನ ಫಾರ್ಮರ್ಸ್ ಕೋರ್ನರ್ ಮೂಲಕ ಆಧಾರ್ ಸಂಖ್ಯೆ ದಾಖಲಿಸಿ ಸೆ.14ರೊಳಗೆ ಈ ಕೆವೈಸಿ ಮಾಡಿಸದಿದ್ದಲ್ಲಿ ಆರ್ಥಿಕ ನೆರವು ಸ್ಥಗಿತಗೊಳಿಸಲಾಗುವುದು.

PMKISAN YOJANA - Apps on Google Play

ಸುಳ್ಯ ತಾಲೂಕಿನ 4804ರೈತ ಫಲಾನುಭವಿಗಳು ಇ ಕೆವೈಸಿ ಮಾಡಲು ಬಾಕಿಯಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ರೈತ ಸಂಪರ್ಕ ಕೇಂದ್ರ ಅಥವಾ ಸುಳ್ಯ ಕೃಷಿ ಇಲಾಖೆಯನ್ನು ಸಂಪರ್ಕಿಸಬಹುದಾಗಿದೆ.