ಜೇಸಿಐ ಸುಳ್ಯ ಪಯಸ್ವಿನಿ ಜೇಸಿಐ ಸಪ್ತಾಹ : ಕಾಯರ್ತೋಡಿಯಲ್ಲಿ ಮಾಹಿತಿ ಕಾರ್ಯಾಗಾರ ಮತ್ತು ಪ್ರತಿಭಾ ಪುರಸ್ಕಾರ

0

 

ಸುಳ್ಯದ ಕಾಯರ್ತೋಡಿ ಅಂಗನವಾಡಿ ಕೇಂದ್ರ, ಸೂರ್ತಿಲದಲ್ಲಿ ಬಾಲವಿಕಾಸ ಸಮಿತಿ ಜಂಟಿಯಾಗಿ ಮಕ್ಕಳ ಶಿಕ್ಷಣದಲ್ಲಿ ಪೋಷಕರ ಪಾತ್ರ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಸುಳ್ಯ ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ರೀಮತಿ ರಶ್ಮಿ ಕೆ ಎಂ ನೆರವೇರಿಸಿ ಸ್ಥಳೀಯ ಪ್ರತಿಭೆಗಳಾದ ಜೀವನ್ ಕುದ್ಪಾಜೆ ಹಾಗೂ ಭೂಮಿಕಾ ಕೋಲ್ಚಾರುರವರನ್ನು ಗೌರವಿಸಿದರು.

ಸಂಪನ್ಮೂಲ ವ್ಯಕ್ತಿಯಾಗಿ ಎಂಜಿಎಂ ಪ್ರೌಢಶಾಲೆ ಕೊಡಿಯಾಲಬೈಲ್ ಇದರ ಪೂರ್ವ ಮುಖ್ಯ ಗುರುಗಳಾದ ಜೇಸಿ ಚಿದಾನಂದ ಕೇನಾಜೆಯವರು ಆಗಮಿಸಿ ಸಾಂದರ್ಭಿಕ ಮಾಹಿತಿ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು
ಘಟಕಾದ್ಯಕ್ಷರಾದ ಜೇಸಿ ರಂಜಿತ್ ಕುಕ್ಕೆಟ್ಟಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಅಂಗನವಾಡಿ ಕೇಂದ್ರ ಕಾಯರ್ತೋಡಿ ಬಾಲವಿಕಾಸ ಸಮಿತಿ ಅಧ್ಯಕ್ಷೆ ಶ್ರೀಮತಿ ಅರ್ಪಿತಾ ಅನಿಲ್ ಕುಮಾರ್, ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ಲತಾ ರಾಧಾಕೃಷ್ಣ, ನಿಕಟಪೂರ್ವ ಅಧ್ಯಕ್ಷ ಜೇಸಿ ಗುರುರಾಜ್ ಅಜ್ಜಾವರ, ಸಪ್ತಾಹ ನಿರ್ದೇಶಕಿ ಜೇಸಿ ಶೋಭಾ ಅಶೋಕ್ ಚೂಂತಾರು, ಯೋಜನಾ ನಿರ್ದೇಶಕರುಗಳಾದ ಜೇಸಿ ಅನಿಲ್ ಕುಮಾರ್ ಬಳ್ಳಡ್ಕ, ಉಪಸ್ಥಿತರಿದ್ದರು.
ಈ ಸಂದರ್ಭಲ್ಲಿ ಜೇಸಿಐ ಪೂರ್ವ ವಲಾಯಾದ್ಯಕ್ಷರಾದ ಜೇಸಿ ಅಶೋಕ್ ಚೂಂತರ್, ಪೂರ್ವ ಅಧ್ಯಕ್ಷರಾದ ಜೇಸಿ ದೇವರಾಜ ಕುದ್ಪಾಜೆ, ಜೇಸಿ ತಾರಾ ಮಾದವ ಗೌಡ ಇದ್ದರು.

ಕಾರ್ಯದರ್ಶಿ ಜೇಸಿ ನವೀನ್ ಕುಮಾರ್ ವಂದಿಸಿದರು.