ಕೋಲ್ಚಾರಿನಲ್ಲಿ ಪೋಷಣ್ ಮಾಸಾಚರಣೆ ಅಭಿಯಾನದ ಮಾಹಿತಿ ಕಾರ್ಯಗಾರ

0

ಸುಳ್ಯ ಶಿಶು ಅಭಿವೃದ್ಧಿ ಯೋಜನೆ,ಕೋಲ್ಚಾರು ಅಂಗನವಾಡಿ ಕೇಂದ್ರ ಮತ್ತು ಸ್ತ್ರೀ ಶಕ್ತಿ ಸಂಘಗಳ ಸಂಯುಕ್ತ ಆಶ್ರಯದಲ್ಲಿ ಕೋಲ್ಚಾರು ಶಾರದಾಂಬಾ ಕಲಾ ಮಂದಿರದಲ್ಲಿ ಸೆ‌.9 ರಂದು ಪೋಷಣ್ ಮಾಸಾಚರಣೆ ಅಭಿಯಾನದ ಮಾಹಿತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಬಾಲವಿಕಾಸ ಸಮಿತಿ ಅಧ್ಯಕ್ಷೆ ಪ್ರೇಮಲತಾ ಕೋಲ್ಚಾರು ಅಧ್ಯಕ್ಷತೆ ವಹಿಸಿದ್ದರು.

ಪಂಚಾಯತ್ ಉಪಾಧ್ಯಕ್ಷ ದಿನೇಶ್ ಕಣಕ್ಕೂರು ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಪ್ರಮೀಳಾ ಪೋಷಣ್ ಮಾಸಾಚರಣೆಯ ಕುರಿತು ಮಾಹಿತಿ ನೀಡಿದರು. ಶಾಲೆಯ ಸಹ ಶಿಕ್ಷಕಿ ಜಲಜಾಕ್ಷಿ ಮಹಿಳೆಯರ ಸ್ವಾಸ್ತ್ಯದ ಬಗ್ಗೆ ಮಾಹಿತಿ ನೀಡಿದರು. ಅತಿಥಿಗಳಾಗಿ ಪಂಚಾಯತ್ ಸದಸ್ಯೆ ಶಂಕರಿ ಕೊಲ್ಲರಮೂಲೆ, ಗೀತಾ ಕೋಲ್ಚಾರು, ‌ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಮಧುಶ್ರೀ, ಸಮುದಾಯ ಆರೋಗ್ಯಾಧಿಕಾರಿ ಅನಿತಾ ಡೈನಾ ಡಿಸೋಜಾ, ಭಜನಾ ಮಂಡಳಿ ಅಧ್ಯಕ್ಷ ಯತಿರಾಜ್ ಕೊಯಿಂಗಾಜೆ, ಆಶಾ ಪೆಸಿಲಿಟೇರ್ ತಿರುಮಲೇಶ್ವರ, ಗೊಂಚಲಿನ ಉಪಾಧ್ಯಕ್ಷೆ ಸೌಮ್ಯ ಕೊಯಿಂಗಾಜೆ ಉಪಸ್ಥಿತರಿದ್ದರು. ಉಷಾಲತಾ ಪ್ರಾರ್ಥಿಸಿದರು.ಚಂಚಲಾಕ್ಷಿ ಹಾಸ್ಪಾರೆ ಸ್ವಾಗತಿಸಿ, ಆಶಾ ಕಾರ್ಯಕರ್ತೆ ಶಂಕರಿ ಕೊಲ್ಲರಮೂಲೆ ವಂದಿಸಿದರು. ಅಂಗನವಾಡಿ ಕಾರ್ಯಕರ್ತೆ ರತ್ನಾವತಿ ವಾಲ್ತಾಜೆ ಪ್ರಾಸ್ತಾವಿಕ ಮಾತನಾಡಿ ಕಾರ್ಯಕ್ರಮ ನಿರ್ವಹಿಸಿದರು.


ಈ ಸಂದರ್ಭದಲ್ಲಿ ಮಾತೃ ವಂದನಾ ಅರ್ಜಿ ಸ್ವೀಕಾರ, ಗರ್ಭಿಣಿಯರನ್ನು ಗೌರವಿಸಲಾಯಿತು. ಅಂಗನವಾಡಿ ಮಕ್ಕಳಿಂದ ಬಾಲ ಅಡುಗೆ ಭಟ್ಟ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಸಂಘದ ಸದಸ್ಯರು ಪೌಷ್ಠಿಕ ಆಹಾರ ತಯಾರಿಸಿ ಪ್ರದರ್ಶನ ಮಾಡಲಾಯಿತು. ಅಂಗನವಾಡಿ ಮಕ್ಕಳು,‌ ಪೋಷಕರು, ‌ಆಶಾ ಕಾರ್ಯಕರ್ತೆಯರು, ಆರೋಗ್ಯ ಸಹಾಯಕಿಯರು, ಸಂಘದ ಸದಸ್ಯರು, ಸ್ಥಳೀಯ ನಾಗರಿಕರು ಸಹಕರಿಸಿದರು.