ಕೆವಿಜಿ ಐಪಿಎಸ್ ನಲ್ಲಿ ರಾಷ್ಟ್ರೀಯ ಹಿಂದಿ ದಿನಾಚರಣೆ

0

ಕೆವಿಜಿ ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್ ನಲ್ಲಿ ಸೆ.14 ರಂದು ರಾಷ್ಟ್ರೀಯ ಹಿಂದಿ ದಿನಾಚರಣೆಯನ್ನು ಹಿಂದಿ ಶಿಕ್ಷಕಿಯರಾದ ಶ್ರೀಮತಿ ಲಲಿತಾ ಭಟ್, ಶ್ರೀಮತಿ ಲಕ್ಷ್ಮಿ ಲಾವಣ್ಯ ಮತ್ತು ಶ್ರೀಮತಿ ಚಂದ್ರಪ್ರಭ ಇವರ ನೇತೃತ್ವದಲ್ಲಿ ಆಚರಿಸಲಾಯಿತು. ಕಾರ್ಯಕ್ರಮದ ಮೊದಲಿಗೆ ಶಾಲಾ ಪ್ರಾಂಶುಪಾಲ ಅರುಣ್ ಕುಮಾರ್ ಹಿಂದಿ ಭಾಷೆಯ ಮಹತ್ವದ ಕುರಿತು ತಿಳಿಸಿದರು. ಬಳಿಕ 9ನೇ ತರಗತಿಯ ಷೇಕ್ ಶಾಮಿಕ್ ಹಿಂದಿ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು. 9ನೇ ತರಗತಿಯ ದೃಶ್ಯ ಪಾನತ್ತಿಲ ಹಿಂದಿ ದಿನದ ಪ್ರಾಮುಖ್ಯತೆಯ ಕುರಿತು ತಿಳಿಸಿದಳು.

ಏಳನೇ ತರಗತಿಯ ಆಕಾಶ್ ಮತ್ತು ಸ್ಪಂದನ ಹಿಂದಿ ಕವಿತಾ ವಾಚನ ಮಾಡುವುದರ ಮೂಲಕ ಕಾರ್ಯಕ್ರಮದ ಮೆರುಗನ್ನು ಹೆಚ್ಚಿಸಿದರು. ಬಳಿಕ ಎಂಟನೇ ತರಗತಿಯ ವಿದ್ಯಾರ್ಥಿನಿಯರು ಹಾಡಿದ ಹಿಂದಿ ಗೀತೆಯು ಕಾರ್ಯಕ್ರಮಕ್ಕೆ ಮತ್ತಷ್ಟುಶೋಭೆಯನ್ನು ತಂದುಕೊಟ್ಟಿತ್ತು. ಶಾಲಾ ಆಡಳಿತ ಮಂಡಳಿಯ ಸಂಚಾಲಕ ಡಾ. ರೇಣುಕಾಪ್ರಸಾದ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಉಜ್ವಲ್ ಯು. ಜೆ ವಿದ್ಯಾರ್ಥಿಗಳಲ್ಲಿ ಭಾಷಾಪ್ರೇಮ ಬೆಳೆಸಲು ಇದೊಂದು ಉತ್ತಮ ಕಾರ್ಯಕ್ರಮ ಎಂಬುದಾಗಿ ತಿಳಿಸಿದರು. ಈ ಕಾರ್ಯಕ್ರಮವನ್ನು 9ನೇತರಗತಿಯ ಅನನ್ಯ ಸ್ವಾಗತಿಸಿ, ಅನ್ಸಿಫ್ ಧನ್ಯವಾದವನ್ನು ಸಲ್ಲಿಸಿದನು. ಈ ಸಂದರ್ಭದಲ್ಲಿ ಎಲ್ಲಾ ಶಿಕ್ಷಕ ಮತ್ತು ಶಿಕ್ಷಕೇತರ ವರ್ಗದವರು ಉಪಸ್ಥಿತರಿದ್ದರು.