ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜಿನಲ್ಲಿ ಇಂಜಿನಿಯರ್‍ಸ್ ಡೇ ಆಚರಣೆ

0

ಕೆ.ವಿ.ಜಿ. ತಾಂತ್ರಿಕ ಮಹಾವಿದ್ಯಾಲಯದಲ್ಲಿ ಇಂಜಿನಿಯರ್‍ಸ್ ಡೇ ಆಚರಣೆ  ಸೆ.15 ರಂದು ಕಾಲೇಜಿನ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಕೆ.ವಿ.ಜಿ. ಪಾಲಿಟೆಕ್ನಿಕ್ ಪ್ರಾಂಶುಪಾಲ ಪ್ರೊ. ಜಯಪ್ರಕಾಶ್ ಕೆ.ಯವರು ಸರ್ ಎಂ. ವಿಶ್ವೇಶ್ವರಯ್ಯ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈಯುವುದರ ಮೂಲಕ ಉದ್ಘಾಟಿಸಿದರು.

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಇವರು ತಮ್ಮ ಉತ್ತಮ ಆಲೋಚನೆಗಳು ಮತ್ತು ಅವಿಷ್ಕಾರಗಳಿಂದ ಇಡೀ ಜಗತ್ತನ್ನು ಬದಲಿಸಿದ ಎಲ್ಲಾ ಇಂಜಿನಿಯರುಗಳಿಗೆ ಈ ದಿನವನ್ನು ಸಮರ್ಪಿಸಲಾಗಿದೆ. ಇಂಜಿನಿಯರ್‌ಗಳು ಸಮಾಜಕ್ಕೆ ನೀಡಿದ ಕೊಡುಗೆಯನ್ನು ಗೌರವಿಸಲು ಈ ದಿನವನ್ನು ಆಚರಿಸಲಾಗುತ್ತಿದೆ. ಜನ ಸಾಮಾನ್ಯರ ಜೀವನವನ್ನು ಸುಲಭ ಹಾಗೂ ಉತ್ತಮಗೊಳಿಸಲು ಇಂಜಿನಿಯರ್‌ಗಳ ಕೊಡುಗೆ ಅಪಾರ ಎಂದು ಹೇಳಿ ನೆರೆದಿದ್ದ ಎಲ್ಲರಿಗೂ ಶುಭಾಶಯಗಳನ್ನು ಕೋರಿದರು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಡೀನ್-ಅಕಾಡೆಮಿಕ್ ಹಾಗೂ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರು ಡಾ. ಉಮಾಶಂಕರ್ ಕೆ.ಎಸ್. ನಮ್ಮ ದೇಶದ ಹೆಮ್ಮೆಯ ಹಾಗೂ ಅತ್ಯುತ್ತಮ ಇಂಜಿನಿಯರ್ ಎನಿಸಿಕೊಂಡ ಭಾರತರತ್ನ ಸರ್. ಎಂ. ವಿಶ್ವೇಶ್ವರಯ್ಯ ಅವರ ಹುಟ್ಟುಹಬ್ಬದ ಸ್ಮರಣಾರ್ಥ ಇಂಜಿನಿಯರ್ ದಿನವನ್ನು ಆಚರಿಸಲಾಗುತ್ತದೆ. ಇವರು ಭಾರತೀಯ ಪ್ರಜೆಗಳಿಗೆ ನೀಡಿದ ಅತ್ಯುತ್ತಮ ಸಂದೇಶಗಳು, ಜೀವನಶೈಲಿ, ಹಾಗೂ ಕಾರ್ಯವೈಖರಿಯ ಬಗ್ಗೆ ನೆರೆದ ಸಭಿಕರಿಗೆ ಉಪನ್ಯಾಸ ನೀಡಿದರು.

ಕಾಲೇಜಿನ ಉಪಪ್ರಾಂಶುಪಾಲ ಡಾ. ಶ್ರೀಧರ್ ಕೆ. ಅವರು ಮಾತನಾಡಿ ವಿಶ್ವೇಶ್ವರಯ್ಯರವರು ಸರ್.ಎಂ.ವಿ. ಎಂದೇ ಪ್ರಖ್ಯಾತ ಹೊಂದಿದವರು, ಕೈಗಾರಿಕೀಕರಣ ಹೊಂದಿ ಇಲ್ಲವೇ ನಾಶವಾಗಿ ಎಂದು ದೇಶಕ್ಕೆ ಕರೆ ಕೊಟ್ಟ ಸರ್.ಎಂ.ವಿ. ಭಾರತ ಕಂಡ ಶ್ರೇಷ್ಠ ಸಿವಿಲ್ ಇಂಜಿನಿಯರ್ ಅಣೆಕಟ್ಟು ನಿರ್ಮಾತೃ. ಅರ್ಥಶಾಸ್ತ್ರಜ್ಞ, ದಿವಾನರಾಗಿ ಗುರುತಿಸಿಕೊಂಡವರು ಅಲ್ಲದೆ ದೇಶ ಕಟ್ಟುವ ನಿಟ್ಟಿನಲ್ಲಿ ಅವರ ಪಾತ್ರ ಮಹತ್ವದ್ದು ಎಂದು ಹೇಳಿ ಎಲ್ಲರಿಗೂ ಶುಭ ಹಾರೈಸಿದರು. ಕಾಲೇಜಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಕಂಪ್ಯೂಟರ್ ಸೈನ್ಸ್ & ಇಂಜಿನಿಯರಿಂಗ್ ವಿಭಾಗ ಮುಖ್ಯಸ್ಥರು ಡಾ. ಉಜ್ವಲ್ ಯು.ಜೆ. ಮಾತನಾಡಿ ನಾಡು ಕಂಡ ಮಹೋನ್ನತ ಇಂಜಿನಿಯರ್ ಸರ್.ಎಂ.ವಿ. ಅವರ ಹಾದಿಯಲ್ಲಿ ಸಾಗುತ್ತಿರುವ ಎಲ್ಲಾ ಇಂಜಿನಿಯರ್‌ಗಳಿಗೆ ಶುಭಕೋರಿ ದುಡಿಮೆಗೆ ಗುರಿ ಇರಲಿ ದುಡಿಯುವುದರಲ್ಲಿ ನಿಯಮವಿರಲಿ ಎಂಬ ಸರ್ ಎಂ.ವಿ.ಯವರ ಮಾತಿನಂತೆ ಜೀವನವನ್ನು ಮುನ್ನಡೆಸಿ ಎಂದು ಕರೆ ನೀಡಿದರು, ಅಲ್ಲದೆ ಮುಂದಿನ ಶೈಕ್ಷಣಿಕ ವರ್ಷದಲ್ಲಿ ತಾಲೂಕಿನ ಶಾಲೆಗಳಲ್ಲಿ ಕಾಲೇಜಿನ ವತಿಯಿಂದ ಹೊಸ ತಂತ್ರಜ್ಞಾನದ ತಿಳುವಳಿಕಾ ಕಾರ್ಯಕ್ರಮವನ್ನು ಆಯೋಜಿಸಲು ತೀರ್ಮಾನವನ್ನು ಕೈಗೊಳ್ಳಲಾಯಿತು ಹಾಗೂ ಇದರ ಜವಾಬ್ದಾರಿಯನ್ನು ಸ್ಟೆಪ್ ಡೈರೆಕ್ಟರ್ ಡಾ. ಚಂದ್ರಶೇಖರ್ ಎ. ಅವರಿಗೆ ವಹಿಸಲಾಯಿತು. ಕಾರ್ಯಕ್ರಮದಲ್ಲಿ ಇಂಜಿನಿಯರ್‍ಸ್ ಡೇ ಪ್ರಯುಕ್ತ ಪ್ರೊ. ಜಯಪ್ರಕಾಶ್ ಕೆ. ಯವರನ್ನು ಕಾಲೇಜಿನ ವತಿಯಿಂದ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಎಲೆಕ್ಟ್ರಾನಿಕ್ಸ್ & ಕಮ್ಯುನಿಕೇಶನ್ ಇಂಜಿನಿಯರಿಂಗ್ ವಿಭಾಗ ಮುಖ್ಯಸ್ಥ ಡಾ. ಕುಸುಮಾಧರ ಎಸ್., ಎಂ.ಬಿ.ಎ. ವಿಭಾಗ ಮುಖ್ಯಸ್ಥರು ಪ್ರೊ. ಕೃಷ್ಣಾನಂದ ಎ., ಭೌತಶಾಸ್ತ್ರ ವಿಭಾಗ ಮುಖ್ಯಸ್ಥರು ಹಾಗು ಡೀನ್-ಎಕ್ಸಾಮಿನೇಶನ್ ಡಾ. ಪ್ರವೀಣ ಎಸ್.ಡಿ., ರಸಾಯನ ಶಾಸ್ತ್ರ ವಿಭಾಗ ಮುಖ್ಯಸ್ಥರು ಡಾ. ಸುರೇಖ ಎಂ., ಟ್ರೈನಿಂಗ್ & ಪ್ಲೇಸ್‌ಮೆ೦ಟ್ ಆಫೀಸರ್ ಪ್ರೊಫೆಸರ್ ಅನಿಲ್ ಬಿ.ವಿ., ಡೀನ್-ಅಡ್ಮಿಶನ್ ಪ್ರೊ. ಬಾಲಪ್ರದೀಪ್ ಕೆ.ಎನ್., ಡೀನ್-ಹಾಸ್ಟೆಲ್ ಡಾ. ಭಾಗ್ಯ ಹೆಚ್.ಕೆ., ಡೈರೆಕ್ಟರ್ ಆಫ್ ಪಿ.ಜಿ. ಸ್ಟಡೀಸ್ ಡಾ. ಸವಿತಾ ಎಂ., ಡೀನ್-ರೀಸರ್ಚ್ ಡಾ. ಸವಿತಾ ಸಿ.ಕೆ., ದೈಹಿಕ ಶಿಕ್ಷಣ ನಿರ್ದೇಶಕರಾದ ಭಾಸ್ಕರ್ ಎಸ್. ಬೇಲೆಗದ್ದೆ, ಕಾಲೇಜಿನ ಆಡಳಿತಾಧಿಕಾರಿ ನಾಗೇಶ್ ಕೊಚ್ಚಿ ಮತ್ತು ಇತರ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಅನುಷಾಲಕ್ಶ್ಮಿ ಪ್ರಾರ್ಥನೆಗೈದು ಡಾ. ಪ್ರಜ್ಞಾ ಎಂ ಆರ್. ಕಾರ್ಯಕ್ರಮ ನಿರೂಪಿಸದರು. ವಿದ್ಯಾರ್ಥಿ ಕ್ಷೇಮಾಧಿಕಾರಿಗಳಾದ ಪ್ರೊ. ಲೋಕೇಶ್ ಪಿ.ಸಿ. ಮತ್ತು ಡಾ. ಪ್ರಜ್ಞಾ ಎಂ.ಆರ್. ಕಾರ್ಯಕ್ರಮ ಆಯೋಜಿಸಿದರು.