ಮಿತ್ತಡ್ಕ ಅಂಗನವಾಡಿ ಕೇಂದ್ರದಲ್ಲಿ ಪೋಷಣ್ ಮಾಸಾಚರಣೆ

0

ಮರ್ಕಂಜ ಗ್ರಾಮದ ಮಿತ್ತಡ್ಕ ಅಂಗನವಾಡಿ ಕೇಂದ್ರದಲ್ಲಿ ಪೋಷಣ್ ಮಾಸಾಚರಣೆ ಕಾರ್ಯಕ್ರಮವು ಸೆ.12 ರಂದು ನಡೆಯಿತು.
ಗ್ರಾಪಂ ಸದಸ್ಯ ಯಶವಂತ ಸೂಟೆ ಗದ್ದೆ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು.


ಪ್ರಾರ್ಥಮಿಕ ಆರೋಗ್ಯ ಸುರಕ್ಷಾ ಅಧಿಕಾರಿ ಶ್ರೀಮತಿ ಲಾವಣ್ಯ ಪೌಷ್ಠಿಕ ಆಹಾರದ ಕುರಿತು ಮತ್ತು ಆರೋಗ್ಯ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಬಾಲವಿಕಾಸ ಸಮಿತಿ ಅಧ್ಯಕ್ಷೆ ಶ್ರೀಮತಿ ಕವಿತಾ, ಆಶಾ ಕಾರ್ಯಕರ್ತೆ ಶ್ರೀಮತಿ ಸೀಮಾ, ಮಕ್ಕಳ ಪೋಷಕರು, ಸಂಘದ ಸದಸ್ಯರು, ಅಂಗನವಾಡಿ ಸಹಾಯಕಿ ಹಾಗೂ ಮಕ್ಕಳು ಉಪಸ್ಥಿತರಿದರು.


ಮಕ್ಕಳ ಪೋಷಕರು ಮತ್ತು ಸಂಘದ ಸದಸ್ಯರು ಸುಮಾರು 45 ಬಗೆಯ ತಿನಿಸುಗಳನ್ನು ತಯಾರಿ ಮಾಡಿದ್ದರು.
ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ಜಲಜಾಕ್ಷಿ ಸ್ವಾಗತಿಸಿ ಜಯಲಕ್ಷ್ಮೀ ಹೊಸೋಳಿಕೆ ವಂದಿಸಿದರು.