ಮರ್ಕಂಜ : ಪಂಚಸ್ಥಾಪನೆಗಳ ಊರಿನಲ್ಲಿ ಮತ್ತೆ ಜೀರ್ಣೋದ್ಧಾರದ ಪರ್ವ

0

ಸೆ.17ರಂದು ಮಿನುಂಗೂರು ದೇವಸ್ಥಾನ ಮತ್ತು ಸೆ.18ರಂದು ಮುಂಡೋಡಿ ಮಾಳಿಗೆ ಜೀರ್ಣೋದ್ಧಾರದ ಕುರಿತು ಸಮಾಲೋಚನಾ ಸಭೆ

ಮರ್ಕಂಜ ಹಾಗೂ ನೆಲ್ಲೂರು ಕೆಮ್ರಾಜೆ ಗ್ರಾಮಗಳ ಕಾವೂರು ಶ್ರೀ ಮಹಾವಿಷ್ಣು ದೇವ ವಗೈರೆ ಪಂಚಸ್ಥಾಪನೆಗಳ ಮಿನುಂಗೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಮತ್ತು ಶೀರಾಡಿ ಯಾನೆ ರಾಜನ್ ದೈವದ ಮೂಲಸ್ಥಾನ ಮುಂಡೋಡಿ ಮಾಳಿಗೆಯ ಜೀರ್ಣೋದ್ಧಾರದ ಭಕ್ತಾಧಿಗಳ ಸಭೆಯು ಸೆ.17 ಮತ್ತು 18ರಂದು ನಡೆಯಲಿದೆ.

ಸುಮಾರು 30 – 40 ವರ್ಷಗಳ ಹಿಂದೆ ಮರ್ಕಂಜ ಗ್ರಾಮದಲ್ಲಿ ಅಶಾಂತಿ ತಲೆದೋರಿದೆ ಎಂದು ಊರಿನ ಪ್ರಮುಖರ ನೇತೃತ್ವದಲ್ಲಿ ಪ್ರಶ್ನಾ ಚಿಂತನೆ ನಡೆಸಿ
ಪ್ರಾಚೀನ ಇತಿಹಾಸವಿರುವ ಕಾರಣಿಕ ಕ್ಷೇತ್ರ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಮಿನುಂಗೂರು ಇದರ ಜೀರ್ಣೋದ್ಧಾರಕ್ಕೆ ನೆಲ್ಲೂರು ಕೆಮ್ರಾಜೆ ಮತ್ತು ಮರ್ಕಂಜ ಗ್ರಾಮದ ಭಕ್ತಾಧಿಗಳನ್ನು ಸೇರಿಸಿಕೊಂಡು ಜೀರ್ಣೋದ್ಧಾರದ ಕಾರ್ಯಕ್ಕೆ ಮುಂದಾದರು. ಬ್ರಹ್ಮಕಲಶೋತ್ಸವವು ವಿಜ್ರಂಭಣೆಯಿಂದ ನಡೆದಿತ್ತು. ಆ ಬಳಿಕ ಮರ್ಕಂಜ ದಲ್ಲಿ ಶಾಂತಿ ನೆಲೆಸಿರುವುದು ಅಭಿವೃದ್ಧಿ ಗೊಂಡಿರುವ ಸತ್ಯವನ್ನು ಊರವರು ಮನಗಂಡಿದ್ದಾರೆ.
ಆ ಬಳಿಕ 2011ರಲ್ಲಿ ಕಾವೂರು ದೇವಸ್ಥಾನ, ತೋಟಚಾವಡಿ ಉಳ್ಳಾಕುಲು ಚಾವಡಿ ಜೀರ್ಣೋದ್ಧಾರ, 2017ರಲ್ಲಿ ರೆಂಜಾಳ ಶ್ರೀ ಶಾಸ್ತಾವು ಸದಾಶಿವ ಮಹಾಗಣಪತಿ ದೇವಸ್ಥಾನ ಜೀರ್ಣೋದ್ಧಾರಗೊಂಡು ವೈಭವದ ಬ್ರಹ್ಮಕಲಶೋತ್ಸವಕ್ಕೆ ಸಾಕ್ಷಿಯಾಗಿತ್ತು.

ಇದೀಗ ಪಂಚಸ್ಥಾಪನೆಗಳ ಮಿನುಂಗೂರು ದೇವಸ್ಥಾನ ಮತ್ತು ಮುಂಡೋಡಿ ಮಾಳಿಗೆ ದೈವಸ್ಥಾನಗಳೆರಡು ಜೀರ್ಣೋದ್ಧಾರಕ್ಕೆ ಅಣಿಯಾಗುತ್ತಿದೆ.