ಬಳ್ಪ: ಹೆಣ್ಣು ಶಿಶು ಪ್ರದರ್ಶನ, ಪೌಷ್ಟಿಕ ಆಹಾರ ಸಪ್ತಾಹ ಮತ್ತು ಬ್ಯಾಂಕಿಂಗ್ ಮಾಹಿತಿ

0

 

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಸುಳ್ಯ , ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸುಳ್ಯ, ಗ್ರಾಮ ಪಂಚಾಯತ್ ಬಳ್ಪ, ಯಶಸ್ವಿ ಸ್ತ್ರೀ ಶಕ್ತಿ ಗೊಂಚಲು ಬಳ್ಪ ಮತ್ತು ಕೇನ್ಯ ಹಾಗೂ ಆದರ್ಶ ಸಂಜೀವಿನಿ ಒಕ್ಕೂಟ ಬಳ್ಪ ಇವುಗಳ ಆಶ್ರಯದಲ್ಲಿ ಹೆಣ್ಣು ಶಿಶು ಪ್ರದರ್ಶನ ಹಾಗೂ ರಾಷ್ಟ್ರೀಯ ಪೋಷಣ್ ಅಭಿಯಾನ ಹಾಗೂ ಪೌಷ್ಟಿಕ ಆಹಾರ ಸಪ್ತಾಹ ಮತ್ತು ಬ್ಯಾಂಕಿಂಗ್ ಮಾಹಿತಿ ಕಾರ್ಯಕ್ರಮ ಬಳ್ಪ ಗ್ರಾಮ ಪಂಚಾಯತ್ ಸಭಾ ಭವನದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಬಳ್ಪ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ ಶ್ರೀಮತಿ ಕುಸುಮ ಎಸ್. ರೈ ಗೆಜ್ಜೆ ಕೇನ್ಯ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯಶಸ್ವಿ ಸ್ತ್ರೀ ಶಕ್ತಿ ಗೊಂಚಲಿನ ಅಧ್ಯಕ್ಷೆ ಶ್ರೀಮತಿ ಚಂದ್ರಕಲಾ ದೊಡ್ಡಮನೆ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಗಳಾಗಿ ಪ್ರಾಥಮಿಕ ಆರೋಗ್ಯ ಸುಕ್ಷಾಧಿಕಾರಿ ಶ್ರೀಮತಿ ಕವಿತಾ ಕುಮಾರಿ, ಸಿ.ಹೆಚ್.ಓ ಗಳಾದ ಶ್ರೀಮತಿ ಮಮತಾ ಹಾಗೂ ಪ್ರಥ್ವಿ ಕೇನ್ಯ ಪೌಷ್ಟಿಕ ಆಹಾರ ಮತ್ತು ಅಸಾಂಕ್ರಾಮಿಕ ರೋಗಗಳ ಬಗ್ಗೆ ಮಾಹಿತಿ ನೀಡಿದರು. ಸುಳ್ಯ ಕೆನರಾ ಬ್ಯಾಂಕಿನ ಸಿಬ್ಬಂದಿ ಸುಜಾತ ಬ್ಯಾಂಕಿಂಗ್ ಮಾಹಿತಿ ನೀಡಿದರು. ಪಂಜ ವಲಯ ಮೇಲ್ವಚಾರಕಿ ಶ್ರೀಮತಿ ರವೀಶ್ರೀ ಕೆ ಪ್ರಾಸ್ತಾವಿಕವಾಗಿ ಮಾತಾಡಿದರು. ವೇದಿಕೆಯಲ್ಲಿ ಬಾಲವಿಕಾಸ ಸಮಿತಿ ಅಧ್ಯಕ್ಷೆ ಶ್ರೀಮತಿ ತನುಜಾ, ಆದರ್ಶ ಸಂಜೀವಿನಿ ಒಕ್ಕೂಟ ದ ಅಧ್ಯಕ್ಷೆ ಶ್ರೀಮತಿ ಮೋಹಿನಿ ಪಲ್ಲತ್ತಡ್ಕ , ಬಳ್ಪ ಗ್ರಾಮ ಪಂಚಾಯತ್ ಉಪಾದ್ಯಕ್ಷೆ ಶ್ರೀಮತಿ ನೇತ್ರಾವತಿ ಉಪಸ್ಥಿತರಿದ್ದರು.

ದೀಪಿಕಾ ಮತ್ತು ಬಳಗ ಪ್ರಾರ್ಥನೆ ಮಾಡಿದರು. ಬಳ್ಪ ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ಮೋಹಿನಿ ಸ್ವಾಗತಿಸಿದರು. ಆದರ್ಶ ಸಂಜೀವಿನಿ ಒಕ್ಕೂಟದ ಎಂ.ಬಿ.ಕೆ ಶ್ರೀಮತಿ ಯಮುನಾ ಕಾರ್ಜ ಆಟೋಟ ಸ್ಪರ್ಧೆಗಳನ್ನು ನಡೆಸಿಕೊಟ್ಟು ಸಹಕರಿಸುವುದರ ಜೊತೆಗೆ ವಂದಿಸಿದರು. ಶಾಲೆಯ ಶಿಕ್ಷಕಿಯರು, ಸ್ತ್ರೀ ಶಕ್ತಿ ಸದಸ್ಯರು, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಸಂಜೀವಿನಿ ಒಕ್ಕೂಟದ ಎಲ್.ಸಿ.ಆರ್.ಪಿ ಮತ್ತು ಬಿ.ಸಿ ಸಖಿ ಹಾಗೂ ಅಂಗನವಾಡಿ ಪೋಷಕರು ಭಾಗವಹಿಸಿ, ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ಶ್ರೀಮತಿ ವನಜಾ ಎಸ್. ರೈ ಕೇನ್ಯ ಕಾರ್ಯಕ್ರಮ ನಿರೂಪಿಸಿದರು.