ಮಂಡೆಕೋಲಿನಲ್ಲಿ ಪೋಷಣ್ ಮಾಸಾಚರಣೆ

0

 

 

ಮಹಿಳಾ ಮತ್ತು ‌ಮಕ್ಕಳ ಅಭಿವೃದ್ಧಿ ಇಲಾಖೆ, ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಸುಳ್ಯ, ಗ್ರಾಮ ಪಂಚಾಯತ್ ಮಂಡೆಕೋಲು, ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಮಂಡೆಕೋಲು, ಮಹಾವಿಷ್ಣು ಸ್ತ್ರೀ ಶಕ್ತಿ ಗೊಂಚಲು ಸಮಿತಿ ಮಂಡೆಕೋಲು, ವೀರವನಿತೆ ಕ್ರೀಡಾ ಮತ್ತು ಕಲಾ ಸಂಘ ಮಂಡೆಕೋಲು , ಆರೋಗ್ಯ ಉಪಕೇಂದ್ರ ಮಂಡೆಕೋಲು, ರೋಟರಿ ಕ್ಲಬ್ ಸುಳ್ಯ ಇವರ ಸಹಯೋಗದಲ್ಲಿ ಪೋಷಣ್ ಮಾಸಾಚರಣೆ, ಹೆಣ್ಣು ಮಗು ಉಳಿಸಿ, ಹೆಣ್ಣು ಮಗು ಓದಿಸಿ ಯೋಜನೆಯಡಿ ಅರೋಗ್ಯವಂತ ಹೆಣ್ಣು ಶಿಶು ಪ್ರದರ್ಶನ ಹಾಗೂ ಪೋಷಣ್ ಕಿಟ್ ವಿತರಣೆ ‌ಕಾರ್ಯಕ್ರಮ ಮಂಡೆಕೋಲು ಅಮೃತ ಸಭಾ ಭವನದಲ್ಲಿ 16ರಂದು ನಡೆಯಿತು.

ಮಂಡೆಕೋಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ರಾಮಕೃಷ್ಣ ರೈ ಕಾರ್ಯಕ್ರಮ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಸಿಡಿಪಿಒ ಶ್ರೀಮತಿ ರಶ್ಮಿ ಕೆ.ಎಂ. ಪೋಷಣ್ ಮಾಸಾಚರಣೆಯ ಮಹತ್ವ , ಅಪೌಷ್ಟಿಕತೆಯನ್ನು ಹೋಗಲಾಡಿಸುವಲ್ಲಿ ಸಮುದಾಯದ ಪಾತ್ರದ ಕುರಿತು ಮಾಹಿತಿ ನೀಡಿದರು.

ಕೆ.ವಿ.ಜಿ. ಆಯುರ್ವೇದ ‌ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ.ಪ್ರಮೋದ್ ಕೆ ಆಹಾರವೆ ಔಷಧಿಯಾಗುವುದು ಹೇಗೆ ಮತ್ತು ಸಿರಿ ಧಾನ್ಯಗಳ ಮಹತ್ವದ ಬಗ್ಗೆ ಮಾಹಿತಿ ‌ನೀಡಿದರು.

ಸುಳ್ಯ ರೈತ ಉತ್ಪಾದಕ ಸಂಸ್ಥೆಯ ನಿರ್ದೇಶಕಿ ಶ್ರೀಮತಿ ಮಧುರಾ ಕಿಶೋರಿಯರ ಸ್ವಾಸ್ಥ್ಯ ದ ಬಗ್ಗೆ ಮಾಹಿತಿ ನೀಡಿದರು. ರೋಟರಿ ಕ್ಲಬ್ ಸುಳ್ಯ ಇದರ ಅಧ್ಯಕ್ಷ ಚಂದ್ರಶೇಖರ ಪೇರಾಲು ಇವರು ರೊಟರಿ ಕ್ಲಬ್ ಪ್ರಾಯೋಜಿತ ಪೋಷಣ್ ಕಿಟ್ ಗಳನ್ನು ವಿತರಿಸಿದರು. ಈ ಸಂದರ್ಭದಲ್ಲಿ ಹೆಣ್ಣು ಮಗು ಉಳಿಸಿ ಹೆಣ್ಣು ಮಗು ಓದಿಸಿ ಯೋಜನೆಯಡಿ ಆರೋಗ್ಯವಂತ ಹೆಣ್ಣು ಶಿಶು ಪ್ರದರ್ಶನ ಕಾರ್ಯಕ್ರಮ ನಡೆಯಿತು. ನಂತರ ಮಂಡೆಕೋಲು ಅಂಗನವಾಡಿ ಕೇಂದ್ರದ ಪುಟಾಣಿಗಳು ಪೋಷಣೆಯ ಕುರಿತು ಘೋಷಣೆಗಳನ್ನು ಪ್ರಸ್ತುತಪಡಿಸಿದರು. ಬಳಿಕ ಮಂಡೆಕೋಲು ಅಂಗನವಾಡಿ ಕೇಂದ್ರದ ಪುಟಾಣಿ ಖುಷಿ ಯಿಂದ ಬಾಲ ಅಡುಗೆ ಭಟ್ಟ ಕಾರ್ಯಕ್ರಮ ‌ನಡೆಯಿತು. ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಗ್ರಾಮ ಪಂಚಾಯತಿ ಅಧ್ಯಕ್ಷರಾದ ಶ್ರಿಮತಿ ವಿನುತಾ ಪಾತಿಕಲ್ಲು ವಹಿಸಿದ್ದರು.