ಸುಬ್ರಹ್ಮಣ್ಯ ರೋಟರಿ ಕ್ಲಬ್ ವತಿಯಿಂದ ಕಲ್ಮಕಾರು ಶಾಲೆಗೆ ಕೊಡುಗೆ

0

 

ಸುಬ್ರಹ್ಮಣ್ಯ ರೋಟರಿ ಕ್ಲಬ್ ವತಿಯಿಂದ ಸೆ.14 ರಂದು ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಕಲ್ಮಕಾರುವಿಗೆ ರೋಟರಿ ಜಿಲ್ಲಾ ಯೋಜನೆಯಾದ ವಿದ್ಯಾಸಿರಿ ಅಡಿಯಲ್ಲಿ ವೇದಿಕೆಯ ಪರದೆ, ಚಯರ್, ಅಲ್ಯೂಮಿನಿಯಂ ಏಣಿ, ಹಾಗೂ ಶಾಲಾ ವಿದ್ಯಾರ್ಥಿಗಳಿಗೆ ಗುರುತಿನ ಚೀಟಿ ಮತ್ತು ಬೆಲ್ಟ್ ನೀಡಲಾಯಿತು. ವಲಯ ೫ರ ಉಪರಾಜ್ಯಪಾಲ ಶಿವರಾಮ್ ಏನೆಕಲ್ ವಿತರಣೆ ಮಾಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ಸುಬ್ರಹ್ಮಣ್ಯ ರೋಟರಿ ಕ್ಲಬ್ ಅಧ್ಯಕ್ಷ ಗೋಪಾಲ್ ಎಣ್ಣೆಮಜಲು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ, ಕಲ್ಮಕಾರು ಗ್ರಾಮ ಪಂಚಾಯತ್ ಸದಸ್ಯ ಅಶ್ವಥ್ ವೈ.ಪಿ, ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷ ಬೆಳ್ಯಪ್ಪ ಗೌಡ ಮೆಂಟೆಕಜೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯಿನಿ ಮಾಲಿನಿ ಕೆ.ಎಸ್ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿಸಿದರು. ಈ ಸಂಧರ್ಭದಲ್ಲಿ ದಾನಿಗಳಾದ ರೋಟರಿ ಸದಸ್ಯರಾದ ಬಾಲಕೃಷ್ಣ ಪೈ, ಸೌಮ್ಯ ಬಿ,.ಪೈ, ಉಮೇಶ್ ಕೆ.ಎನ್, ಭರತ್ ನೆಕ್ರಾಜೆ, ಮಾಯಿಲಪ್ಪ ಸಂಕೇಶ, ರೋಹಿತ್ ಬಿ.ಬಿ, ಲೋಕೇಶ್ ಬಿ.ಎನ್ ಇವರನ್ನು ಶಾಲಾ ವತಿಯಿಂದ ಸನ್ಮಾನಿಸಲಾಯಿತು. ಸನ್ಮಾನಿತರ ನೆಲೆಯಲ್ಲಿ ಬಾಲಕೃಷ್ಣ ಪೈ ಶುಭ ಹಾರೈಸಿದರು.
ರೋ| ಭರತ್ ನೆಕ್ರಾಜೆ ಕಾರ್ಯಕ್ರಮ ನಿರೂಪಿಸಿದರು. ಶಾಲಾ ಸಹಶಿಕ್ಷಕ ಅರವಿಂದ ಕೆ ವಂದಿಸಿದರು. ರೋಟರಿ ಕ್ಲಬ್‌ನ ಕಿಶೋರ್ ಕುಮಾರ್ ಕೂಜುಗೋಡು, ಚಂದ್ರಶೇಖರ್ ನಾಯರ್ ,ಶಾಲಾ ಸಹಶಿಕ್ಷಕಿ ಪಾರ್ವತಿ ಎಂ ಹಾಗೂ ಗೌರವ ಶಿಕ್ಷಕಿಯರಾದ ಸುಕನ್ಯಾ, ಪುನೀತಕುಮಾರಿ, ಜ್ಯೋತಿ ಹಾಗೂ ಎಸ್.ಡಿ.ಎಂ.ಸಿ ಸದಸ್ಯರು, ಪೋಷಕರು ಮತ್ತು ವಿದ್ಯಾರ್ಥಿಗಳು ಇದ್ದರು.