ಮಿನುಂಗೂರು : ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ರಚನೆ

0

ಗೌರವಾಧ್ಯಕ್ಷರಾಗಿ ಡಾ|| ವೀರೇಂದ್ರ ಹೆಗ್ಗಡೆ, ಪೋಷಕಾಧ್ಯಕ್ಷರಾಗಿ ಸಂಸದ ನಳಿನ್ ಕುಮಾರ್ ಕಟೀಲ್, ಸಚಿವ ಎಸ್. ಅಂಗಾರ, ಅಧ್ಯಕ್ಷರಾಗಿ ಹರೀಶ್ ಕಂಜಿಪಿಲಿ, ಪ್ರಧಾನ ಕಾರ್ಯದರ್ಶಿ ಯಾಗಿ ಮಹೇಶ್ ಪುರ, ಖಜಾಂಜಿಯಾಗಿ ಗಣೇಶ್ ರೈ ಪಾರೆಪ್ಪಾಡಿ ಸರ್ವಾನುಮತದಿಂದ ಆಯ್ಕೆ

2 ಕೋಟಿ ವೆಚ್ಚದಲ್ಲಿ 3 ವರ್ಷಗಳಲ್ಲಿ ಜೀರ್ಣೋದ್ಧಾರ ಕಾರ್ಯ

ಮರ್ಕಂಜ ಹಾಗೂ ನೆಲ್ಲೂರು ಕೆಮ್ರಾಜೆ ಗ್ರಾಮಗಳ ಪಂಚಸ್ಥಾಪನೆಗಳಿಗೊಳಪಟ್ಟ ಮಿನುಂಗೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಜೀರ್ಣೋದ್ಧಾರ ಗೊಳ್ಳಲಿದ್ದು, ಆ ಪ್ರಯುಕ್ತ ಜೀರ್ಣೋದ್ಧಾರ ಸಮಿತಿಯನ್ನು ಸೆ.17ರಂದು ಭಕ್ತಾಧಿಗಳ ಸಭೆಯಲ್ಲಿ ಮಾಡಲಾಯಿತು.

 

 

 

ಗೌರವಾಧ್ಯಕ್ಷರಾಗಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ|| ವೀರೇಂದ್ರ ಹೆಗ್ಗಡೆ, ಪೋಷಕಾಧ್ಯಕ್ಷರಾಗಿ ಸಂಸದ ನಳಿನ್ ಕುಮಾರ್ ಕಟೀಲ್ ಮತ್ತು ಸಚಿವ ಎಸ್.ಅಂಗಾರ, ಅಧ್ಯಕ್ಷರಾಗಿ ಹರೀಶ್ ಕಂಜಿಪಿಲಿ, ಪ್ರಧಾನ ಕಾರ್ಯದರ್ಶಿ ಯಾಗಿ ಮಹೇಶ್ ಪುರ, ಖಜಾಂಜಿಯಾಗಿ ಗಣೇಶ್ ರೈ ಪಾರೆಪ್ಪಾಡಿಯವರು ಸರ್ವಾನುಮತದಿಂದ ಆಯ್ಕೆಯಾದರು.

ಸಂಚಾಲಕರಾಗಿ ಅಮೃತ ಕುಮಾರ್ ರೈಯವರನ್ನು ಆಯ್ಕೆ ಮಾಡಲಾಯಿತು.

ಗೌರವ ಸಲಹೆಗಾರರಾಗಿ ಯುವರಾಜ ಜೈನ್, ಮೋಹನ್ ರಾಂ ಸುಳ್ಳಿ, ಸುಬ್ರಾಯ ಭಟ್ ಮಾಪಲತೋಟ, ಬೋಜಪ್ಪ ಕೊಚ್ಚಿ, ನಾಗಕುಮಾರ ಶೆಟ್ಟಿ, ವಾಸುದೇವ ಪುರ, ಲಿಂಗಪ್ಪ ನಾಯ್ಕ ತೋಟಚಾವಡಿ, ಅರ್ಗುಡಿ ಸದಾನಂದ ರೈ ಮಿಯ್ಯೋಣಿ, ವಿಶ್ವೇಶ್ವರ ಉಪಾಧ್ಯಾಯ, ಜಗನ್ಮೋಹ ರೈ ರೆಂಜಾಳ, ಆನಂದ ಗೌಡ ಬಲ್ಕಾಡಿ, ಮಂಜುನಾಥ ರೈ ಸೇವಾಜೆ, ವೆಂಕಟ್ರಮಣ ಅಂಗಡಿಮಜಲು, ಪದ್ಮನಾಭ ಕುದನೆಕೋಡಿ ಆಯ್ಕೆಯಾದರು.

ಉಪಾಧ್ಯಕ್ಷರುಗಳಾಗಿ ಪ್ರಕಾಶ್ ಕಾಟೂರಾಯ, ಭಾಸ್ಕರ ರಾವ್ ಚೆನ್ನಡ್ಕ, ದಾಮೋದರ ಪಾಟಾಳಿ ಮಿತ್ತಡ್ಕ, ಡಿಲ್ಲಿಕುಮಾರ್ ಕೆ.ಜಿ., ರುಕ್ಮಯ್ಯ ಗೌಡ ಮಿತ್ತಪೇರಾಲು, ವಿನೋದ್ ರೈ ಸೇವಾಜೆ, ಚಂದ್ರಶೇಖರ ಪುರ, ಪುರುಷೋತ್ತಮ‌ ಚಿತ್ತಡ್ಕ, ಆನಂದ ಗೌಡ ನಾರ್ಣಕಜೆ, ಬೋಜಪ್ಪ ಹರ್ಲಡ್ಕ, ದೇವಿಪ್ರಸಾದ್ ಸುಳ್ಳಿ, ಸುಭಾಷ್ , ಪ್ರಶಾಂತ್ ರೈ ಪಾರೆಪ್ಪಾಡಿ, ರೋಹಿಣಿ ಅಂಗಡಿಮಜಲು, ಪವಿತ್ರ ಬಿ. ಗುಂಡಿ, ಶಾಂತಲ ನಾರ್ಕೋಡು, ಸರಸ್ವತಿ ಕಕ್ಕಾಡು,ಮೋಹನರಾಂ ಪುರ, ಪದ್ಮನಾಭ ಜೈನ್, ರಾಮಚಂದ್ರ ಮಾವಿನಕಜೆ ಆಯ್ಕೆಯಾದರು.

ಕಾರ್ಯದರ್ಶಿ ಯಾಗಿ ದಾಮೋದರ ಕೊಚ್ಚಿ, ಚಂದ್ರಹಾಸ ಪುರ, ಸಹ ಕಾರ್ಯದರ್ಶಿಗಳಾಗಿ ಯತೀಶ್ ಪುರ, ರಾಮಚಂದ್ರ ಹಲ್ದಡ್ಕ, ಗೋವಿಂದ ಅಳವುಪಾರೆ, ಶಾಂತಪ್ಪ ರೈ ಅಂಗಡಿಮಜಲು, ರವಿ ಬೊಮ್ಮೆಟ್ಟಿ, ಮಹಾಬಲ ಕಟ್ಟಕ್ಕೋಡಿ, ಕಿರಣ್ ಗುಡ್ಡೆಮನೆ, ಮೋನಪ್ಪ ಪೂಜಾರಿ ಹೈದಂಗೂರು, ಡೆಲ್ಲಿ ಕುಮಾರ್ ಕಾಯರ, ಶಶಿಕಾಂತ ಗುಳಿಗಮೂಲೆ, ದಯಾನಂದ ಕೊರತ್ತೋಡಿ, ಗಂಗಾಧರ ಸೇವಾಜೆ, ರವಿಚಂದ್ರ ಕೊಡಪಾಲ, ನವೀನ್ ದೊಡ್ಡಿಹಿತ್ಲು, ತೀರ್ಥರಾಮ ಕೊಚ್ಚಿ, ಸೀತಾರಾಮ, ರವಿ ಬಾಳೆಕೋಡಿ, ವಿಶ್ವನಾಥ ಅಂಗಡಿಮಜಲು, ಖಜಾಂಜಿಯಾಗಿ ಗಣೇಶ್ ರೈ ಪಾರೆಪ್ಪಾಡಿ, ವಾಸು ಮಾಸ್ತರ್ (ಸಹಕಾರ) ಆಯ್ಕೆಯಾದರು.

ಜೀರ್ಣೋದ್ಧಾರ ದ ಪೂರ್ವಭಾವಿ ಯಾಗಿ ಪರಿಹಾರರ್ಥವಾಗಿ ಸೆ.27ರಂದು ಚಂಡಿಕಾಯಾಗ ನಡೆಯಲಿದೆ.

ಸುಮಾರು 2 ಕೋಟಿ ವೆಚ್ಚದಲ್ಲಿ ಜೀರ್ಣೋದ್ಧಾರ ಕಾರ್ಯ ನಡೆಯಲಿದ್ದು, 3 ವರ್ಷದಲ್ಲಿ ಕೆಲಸಕಾರ್ಯಗಳು ಮುಗಿಯಬೇಕಿದೆ. ದೇವಿಗೆ ಗರ್ಭಗಡಿ, ನಮಸ್ಕಾರ ಮಂಟಪ, ತೀರ್ಥಬಾವಿ, ರಕ್ತೇಶ್ವರಿ ಗುಡಿ, ವನಶಾಸ್ತರ ಗುಡಿ ನಿರ್ಮಾಣ ಮುಂತಾದ ಕಾರ್ಯಗಳು ನಡೆಯಲಿದೆ. ಆಡಳಿತಾತ್ಮಕ ಅಪ್ರೋಲ್ ತೆಗೆದುಕೊಂಡು ಶಿಲ್ಪಿಗಳ ಮೂಲಕ ಆರಂಭಿಸಬೇಕಿದೆ. ಭಕ್ತಾಧಿಗಳ ಸಂಪೂರ್ಣ ಸಹಕಾರ ಕೋರುತ್ತಿದ್ದೇವೆ ಎಂದು ಅಧ್ಯಕ್ಷ ಹರೀಶ್ ಕಂಜಿಪಿಲಿ ವಿವರಿಸಿದರು.