ಉಬರಡ್ಕ ಮಿತ್ತೂರು ಸಹಕಾರಿ ಸಂಘದ ಮಹಾಸಭೆ

0

 

ರೂ.38.33 ಲಕ್ಷ ಲಾಭ, ಶೇ.6 ಡಿವಿಡೆಂಡ್

ಉಬರಡ್ಕ ಮಿತ್ತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ದಾಮೋದರ ಗೌಡ ಮದುವೆಗದ್ದೆಯವರ ಅಧ್ಯಕ್ಷತೆಯಲ್ಲಿ ಉಬರಡ್ಕ ಶ್ರೀ ನರಸಿಂಹ ಶಾಸ್ತಾವು ಸಭಾಂಗಣದಲ್ಲಿ ನ.18 ರಂದು ನಡೆಯಿತು.


ಸಂಘವು ವರದಿ ವರ್ಷದಲ್ಲಿ 123 ಕೋಟಿ ರೂ ವ್ಯವಹಾರ ಹೊಂದಿದ್ದು ರೂ.38.33 ಲಕ್ಷ ಲಾಭಗಳಿಸಿದೆ. ಸದಸ್ಯರಿಗೆ ಶೇ. 6 ಡಿವಿಡೆಂಡ್ ನೀಡಲಾಗುವುದು, ನಮ್ಮ ಸಂಘದಲ್ಲಿ ಕಡಿಮೆ ಬಡ್ಡಿ ದರದಲ್ಲಿ ವಾಹನ ಸಾಲ, ಚಿನ್ನಾಭರಣ ಸಾಲ ಲಭ್ಯವಿದೆ. ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು ಎಂದು ಅಧ್ಯಕ್ಷರು ಹೇಳಿದರು.

ಸಂಘದ ಉಪಾಧ್ಯಕ್ಷ ರಾಜೇಶ್ ಭಟ್ ನೆಕ್ಕಿಲ, ನಿರ್ದೇಶಕರುಗಳಾದ ಯು.ವಿ ಭಾಸ್ಕರ ರಾವ್, ಗಂಗಾಧರ ಪಿ.ಎಸ್, ಸುರೇಶ್ ಎಂ.ಎಚ್, ಜಗದೀಶ ಕಕ್ಕೆಬೆಟ್ಟು, ಹರಿಪ್ರಸಾದ್ ಪಾನತ್ತಿಲ, ವಿಜಯಕುಮಾರ್ ಉಬರಡ್ಕ, ಈಶ್ವರ ಆರ್ ಕಲ್ಚಾರು, ಹರೀಶ್.ಎಂ.ಎಸ್, ಶ್ರೀಮತಿ ಲೀಲಾವತಿ ಬಳ್ಳಡ್ಕ, ಶ್ರೀಮತಿ ಶಾರದಾ ಡಿ ಶೆಟ್ಟಿ, ವೇದಿಕೆಯಲ್ಲಿದ್ದರು.

ಪ್ರತಿಭಾ ಪುರಸ್ಕಾರ

ಶೈಕ್ಷಣಿಕ ಸಾಧನೆಗೈದ ವಿದ್ಯಾರ್ಥಿಗಳಿಗೆ ನೀಡಲಾಗುವ ಪ್ರತಿಭಾ ಪುರಸ್ಕಾರವನ್ನು ಮಹಾಸಭೆಯಲ್ಲಿ ವಿತರಿಸಲಾಯಿತು. ಈ ಬಾರಿ
ಉಬರಡ್ಕ ಸ.ಹಿ.ಪ್ರ ಶಾಲೆಯ ಪ್ರಥಮ ಸ್ಥಾನಿಯಾದ ನಾರಾಯಣ ಕಾಡುತೋಟ ಇವರ ಪುತ್ರಿ ಅನನ್ಯ ಕೆ.ಎನ್, ದ್ವಿತೀಯ ಸುರೇಶ್ ಹುಳಿಯಡ್ಕ ಇವರ ಪುತ್ರಿ ಚಿತ್ರಾ, ಅಮೈಮಡಿಯಾರು ಸ.ಹಿ.ಪ್ರಾ ಶಾಲೆಯಲ್ಲಿ ಪ್ರಥಮ ಗಂಗಾಧರ ಮಂಜಿಜಾನ ಇವರ ಪುತ್ರಿ ತನ್ವಿ, ದ್ವಿತೀಯ ಚಿದಾನಂದ ಪಾನತ್ತಿಲ ರ ಪುತ್ರಿ ಚೈತ್ರಾ, ಕೊಡಿಯಾಲಬೈಲು ಸ.ಕಿ.ಪ್ರಾ ಶಾಲೆಯಲ್ಲಿ ಪ್ರಥಮ ಪ್ರಶಾಂತ್ ಕೊಡಿಯಾಲಬೈಲು ಇವರ ಪುತ್ರಿ ಚಂದ್ರಿಕಾ, ದ್ವಿತೀಯ ಶೇಷಪ್ಪ ಕೊಡಿಯಾಲಬೈಲು ಇವರ ಪುತ್ರ ವಿಘ್ನೇಶ್ ಇವರನ್ನು ಗೌರವಿಸಲಾಯಿತು.

ನೆಲ್ಲೂರು ಕೆಮ್ರಾಜೆ ಸೊಸೈಟಿಯ ನಿವೃತ್ತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಗನ್ನಾಥ ಶೆಟ್ಟಿ ಉಬರಡ್ಕ ರವರು ಸುಮಾರ 16 ವರ್ಷಗಳ ಕಾಲ ಉಬರಡ್ಕ ಮಿತ್ತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಹಲವಾರು ವಿಭಾಗಗಳಲ್ಲಿ ಕೆಲಸ ನಿರ್ವಹಿಸಿದ್ದರು. ನಂತರ ಅವರು ನೆಲ್ಲೂರು ಕೆಮ್ರಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಮುಖ್ಯ ಕಾರ್ಯನಿರ್ವಣಾಧಿಕಾರಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾದರು. ಈ ಸಂದರ್ಭದಲ್ಲಿ ಅವರನ್ನು ಸನ್ಮಾನಿಸಲಾಯಿತು. ಉಬರಡ್ಕ ನರಸಿಂಹ ಶಾಸ್ತಾವು ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರತ್ನಾಕರ ಗೌಡ ಬಳ್ಳಡ್ಕ, ಮಿತ್ತೂರು ಜೋಡು ದೈವಗಳ ಮೊಕ್ತೇಸರರಾದ ವೆಂಕಟ್ರಮಣ ಗೌಡ ಕೆದಂಬಾಡಿ ಭಾಗವಹಿದರು.

ಮುಖ್ಯ ಕಾರ್ಯನಿರ್ವಹಣಾಧಿಕಾರಿ‌ ಜಯಪ್ರಕಾಶ್ ಉರುಂಡೆ ವರದಿ ವಾಚಿಸಿದರು. ಕು.ಅನನ್ಯ ಕೆ.ಎನ್ ಪ್ರಾರ್ಥಿಸಿದರು. ರಾಜೇಶ್ ಭಟ್ ವಂದಿಸಿದರು. ಸಹಾಯಕ ಕಾರ್ಯನಿರ್ವಹಣಾಧಿಕಾರಿ ಶಿವಪ್ರಸಾದ್ ಪಿ.ಎಂ, ಸಿಬ್ಬಂದಿ ಶ್ರೀಮತಿ ರಮ್ಯ ಕೆ.ಆರ್, ಗುರುವ ಉಪಸ್ಥಿತರಿದ್ದರು.