ಚೊಕ್ಕಾಡಿ: ಧರ್ಮಸ್ಥಳ ಯೋಜನೆಯ ದೊಡ್ಡತೋಟ  ವಲಯದ ಒಕ್ಕೂಟಗಳ ಪದಗ್ರಹಣ

0

 

 

ದೇಶದಲ್ಲಿರುವ ಎಲ್ಲಾ ಯುನಿವರ್ಸಿಟಿ ಗಳಿಗಿಂತಲೂ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ವಿಭಿನ್ನ ವಿಶ್ವ ವಿದ್ಯಾಲಯವಾಗಿದೆ- ಬಾಲಕೃಷ್ಣ ಬೊಳ್ಳೂರು

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಇದರ ದೊಡ್ಡತೋಟ ವಲಯದ ಒಕ್ಕೂಟಗಳ ಪದಗ್ರಹಣ ಸಮಾರಂಭ ಸೆ.19 ರಂದು ಚೊಕ್ಕಾಡಿ ರಾಮ ದೇವಾಲಯದ ದೇಸಿ ಭವನ ಸಭಾಭವನದಲ್ಲಿ ನಡೆಯಿತು.
ಅಮರಪಡ್ನೂರು ಪ್ರಗತಿ ಬಂಧು ಸ್ವ ಸಹಾಯ ಸಂಘಗಳ ಒಕ್ಕೂಟದ ಅಧ್ಯಕ್ಷ ಪ್ರಸಾದ ಶೇಣಿ ಅಧ್ಯಕ್ಷತೆ ವಹಿಸಿದ್ದರು.
ಚೊಕ್ಕಾಡಿ ರಾಮ ದೇವಾಲಯದ ಅಧ್ಯಕ್ಷ ಮಹೇಶ್ ಭಟ್ ಚೂಂತಾರು ಕಾರ್ಯಕ್ರಮ ವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು.

ಮುಖ್ಯ ಅತಿಥಿಗಳಾಗಿ ಅಮರಮುಡ್ನೂರು ಪಂಚಾಯತ್ ಉಪಾಧ್ಯಕ್ಷೆ ಶಶಿಕಲಾ ಕೇನಡ್ಕ , ಸುಳ್ಯ ತಾಲೂಕು ಜನಜಾಗೃತಿ ವೇದಿಕೆಯ ಅಧ್ಯಕ್ಷ ವಿಶ್ವನಾಥ ರೈ ಕಳಂಜ, ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯ.ಸ.ಸದಸ್ಯ ಪಿ.ಜಿ.ಎಸ್.ಎನ್.ಪ್ರಸಾದ್, 1568 ನೇ ಮದ್ಯವರ್ಜನ ಶಿಬಿರದ ವ್ಯ.ಸ. ಅಧ್ಯಕ್ಷ ಬಾಲಕೃಷ್ಣ ಬೊಳ್ಳೂರು, ಗೌರವಾಧ್ಯಕ್ಷ ಎಂ.ಜಿ.ಸತ್ಯನಾರಾಯಣ ಮಾಯಿಪಡ್ಕ, ಪ್ರಗತಿಪರ ಕೃಷಿಕರಾದ ಆನೆಕಾರ ಗಣಪಯ್ಯ ಭಟ್, ಸುಳ್ಯ ತಾಲೂಕು ಯೋಜನಾಧಿಕಾರಿ ನಾಗೇಶ್ ಪಿ, ದೊಡ್ಡತೋಟ ವಲಯದ ಜನಜಾಗೃತಿ ವೇದಿಕೆಯ ವಲಯಾಧ್ಯಕ್ಷ ರಾಜಾರಾಮ ಭಟ್ ಬೆಟ್ಟ, ಪ್ರಗತಿ ಬಂಧು ಸ್ವ ಸಹಾಯ ಸಂಘದ ವಲಯಾಧ್ಯಕ್ಷ ಭಾಸ್ಕರ ರಾವ್ ಚೆನ್ನಡ್ಕ , ಸದಸ್ಯ ಮೋಹನ ಮರ್ಕಂಜ, ಅಮರಪಡ್ನೂರು ಸಂಘದ ಅಧ್ಯಕ್ಷೆ ವೀಣಾ, ಪೈಲಾರು ಅಧ್ಯಕ್ಷೆ ಚಂದ್ರಕಲಾ,ಕುಕ್ಕುಜಡ್ಕ ಅಧ್ಯಕ್ಷ ಹರಿಶ್ಚಂದ್ರ ಕಟ್ಟದಮಜಲು, ಕಳಂಜ ಅಧ್ಯಕ್ಷ ನಾರಾಯಣ, ಕೋಟೆ ಮುಂಡುಗಾರು ಅಧ್ಯಕ್ಷ ರಘುನಾಥ ಕೆದಿಲ
ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ದೊಡ್ಡತೋಟ ವಲಯದ ಅಮರಪಡ್ನೂರು, ಕುಕ್ಕುಜಡ್ಕ, ಪೈಲಾರು, ಕಳಂಜ, ಕೋಟೆ ಮುಂಡುಗಾರು ಸ್ವ- ಸಹಾಯ ಸಂಘಗಳ ನೂತನ ಪದಾಧಿಕಾರಿಗಳಿಗೆ ಯೋಜನಾಧಿಕಾರಿಯವರು ಅಧಿಕಾರ ಹಸ್ತಾಂತರ ಮಾಡಿದರು. ಈ ಸಂದರ್ಭದಲ್ಲಿ ಪ್ರಕೃತಿ ವಿಕೋಪಕ್ಕೆ ತುತ್ತಾದ ಕುಟುಂಬಗಳಿಗೆ ಯೋಜನೆಯ ವತಿಯಿಂದ ಪರಿಹಾರ ಧನ ಸಹಾಯ ನೀಡಲಾಯಿತು. ಸಂಘದ ಸದಸ್ಯರ ಮಕ್ಕಳಿಗೆ ಸುಜ್ಞಾನ ನಿಧಿ ಶಿಷ್ಯ ವೇತನ ನೀಡಲಾಯಿತು. ಪೈಲಾರಿನಲ್ಲಿ ರಚನೆಗೊಂಡ ನೂತನ ಶ್ರೀ ರಾಮ ಭಜನಾ ಮಂಡಳಿಗೆ ಕಡತವನ್ನು ಭಜನಾ ಪರಿಷತ್ ಗೌರವಾಧ್ಯಕ್ಷ ಶಿವಪ್ರಸಾದ್ ಆಲೆಟ್ಟಿ ಮತ್ತು ಯೋಜನಾಧಿಕಾರಿ ನಾಗೇಶ್ ರವರು ಹಸ್ತಾಂತರಿಸಿ ಶುಭ ಹಾರೈಸಿದರು.

ಕೃಷಿಕರಿಗೆ ಸ್ವಾತಂತ್ರ್ಯ ರಕ್ಷಣೆಯ
ಸುದ್ದಿ ಕೃಷಿ ಮಾಹಿತಿ ಸೇವಾ ಕೇಂದ್ರ ಕಾರ್ಯದ ಕುರಿತು ಸುದ್ದಿ ವರದಿಗಾರ ಶಿವಪ್ರಸಾದ್ ಆಲೆಟ್ಟಿ ಮಾಹಿತಿ ನೀಡಿದರು.

ಬೆಳಗ್ಗೆ ಶ್ರೀ ರಾಮ ಭಜನಾ ಮಂಡಳಿ ಸದಸ್ಯರಿಂದ ಭಜನಾ ಕಾರ್ಯಕ್ರಮ ನಡೆಯಿತು.
ಸಂಘದ ಸದಸ್ಯೆ ಪೂರ್ಣಿಮಾ ರವರುಪ್ರಾರ್ಥಿಸಿದರು. ವಲಯ ಮೇಲ್ವಿಚಾರಕ ಸೀತಾರಾಮ ಸ್ವಾಗತಿಸಿದರು. ಸೇವಾ ಪ್ರತಿನಿಧಿ ಹರ್ಷಿತಾ ವಂದಿಸಿದರು. ಸುದ್ದಿ ವರದಿಗಾರ ದಯಾನಂದ ಕೊರತ್ತೋಡಿ ಕಾರ್ಯಕ್ರಮ ನಿರೂಪಿಸಿದರು.
ವಲಯಮೇಲ್ವಿಚಾರಕರು,ಸೇವಾ ಪ್ರತಿನಿಧಿಗಳು, ಒಕ್ಕೂಟದ ಪದಾಧಿಕಾರಿಗಳು ಮತ್ತು ಸದಸ್ಯರು ಹಾಗೂ ಸ್ಥಳೀಯ ನಾಗರಿಕರು ಸಹಕರಿಸಿದರು.