ಸತ್ಯಜಿತ್ ಸುರತ್ಕಲ್ ರವರಿಂದ ಐವರ್ನಾಡು, ಗುತ್ತಿಗಾರಿನಲ್ಲಿ ಧನ ಸಹಾಯ

0

 

ಬಲಿಷ್ಠ ಬಿಲ್ಲವ ಸಂಘ ವೇಣೂರು ಇವರು ಕೊಡ ಮಾಡುವ, ಜನಸೇವಾ ಸಹಾಯ ನಿಧಿಯನ್ನು ಹಿಂದು ಮುಖಂಡ ಹಾಗೂ ಸಾಮಾಜಿಕ ಹೋರಾಟಗಾರ ಸತ್ಯಜಿತ್ ಸುರತ್ಕಲ್ ಸೆ.19 ರಂದು ವಿತರಣೆ ಮಾಡಿದರು.

ಅವಘಡದಲ್ಲಿ ನಿಧನ ಹೊಂದಿದ ಐವರ್ನಾಡು ಗ್ರಾಮದ ದಯಾನಂದ ನಾಟಿಕೇರಿಯವರ ಮನೆಯವರಿಗೆ ಮತ್ತು ಗುತ್ತಿಗಾರು ಗ್ರಾಮದ ವಿಶ್ವನಾಥ ಗೌಡರ ಮಗಳು ಎಲುಬು ಕ್ಯಾನ್ಸರ್ ಪೀಡಿತ ಸಮೀಕ್ಷಾ ಗೌಡಳಿಗೆ ಸತ್ಯಜಿತ್ ಸುರತ್ಕಲ್ ರವರು ಧನಸಹಾಯ ನೀಡಿದರು.


ಈ ಸಂದರ್ಭದಲ್ಲಿ, ಬಲಿಷ್ಠ ಬಿಲ್ಲವ ಸಂಘ ವೇಣೂರು ಇದರ ಪದಾಧಿಕಾರಿಗಳು,ಬರೆಮೇಲು ಶ್ರೀ ಉದ್ಭವ ತ್ರಿಶಕ್ತಿ ಸ್ವರೂಪಿನಿ ಮಹಾಕಾಳಿ ಕ್ಷೇತ್ರದ ಧರ್ಮರಸು, ಬರೆಮೇಲು ಕರುಣಾಕರ ಗೌಡ,ಜಿಲ್ಲಾ ಹಿಂದು ಜಾಗರಣ ವೇದಿಕೆ ಉಪಾಧ್ಯಕ್ಷ ಜಯಂತ್ ಮಡಪ್ಪಾಡಿ, ಉದಯ ಪಾಟಾಳಿ ಬೆಳ್ಳಾರೆ, ಐವರ್ನಾಡು ಭಜರಂಗದಳದ ಸಂಚಾಲಕ ಅನಿಲ್ ಪೂಜಾರಿ, ಐವರ್ನಾಡು ಪಂಚಾಯತ್ ನ ಮಾಜಿ ಸದಸ್ಯ ಪುರುಷೋತ್ತಮ ಪೂಜಾರಿ ಕುತ್ಯಾಡಿ, ಹಾಗೂ ಹಲವಾರು ಹಿಂದು ಸಂಘಟನೆಗಳ ಕಾರ್ಯಕರ್ತರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here